ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕತೆ ಹೇಳ್ತೀರಾ ಟೀಚಾ..?

Last Updated 8 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘ಒಂದು ಕತೆ ಹೇಳ್ತೀರಾ ಟೀಚಾ...?’
‘ಸ್ವಲ್ಪ ತಡಿಯೇ.., ಈವತ್ತು ಬೇರೆ ಕೆಲ್ಸ ಇದೆ.
ಅವನ್ನೆಲ್ಲ ಮುಗಿಸಿದ ನಂತ್ರ ಹೆೇಳ್ತೇನೆ.., ಆಯ್ತಾ’.
..
..
‘ಈವತ್ತು ಹೇಳ್ತೀರಾ ಟೀಚಾ...?’
‘ಈವತ್ತೂ ಆಗುವುದಿಲ್ಲ ಮಗು.., ನಾಳೆ ನೋಡುವ’
.
..

‘ಈವತ್ತು..?’
‘ಸಾರಿ ಮಗು, ಇನ್ನೂ ಕೆಲ್ಸ ಮುಗ್ದಿಲ್ಲ’.
‘ನಿಮ್ಮ ಕೆಲ್ಸ ಮುಗಿಯುವುದು ಯಾವಾಗ ಟೀಚಾ...?’
‘ಈ ಪಟ್ಟಿಯಲ್ಲಿರುವ ಕೆಲ್ಸಗಳೆಲ್ಲ ಮುಗಿದ ಬಳಿಕ ಮಗೂ...’
‘ಯಾವ ಪಟ್ಟಿ ಟೀಚಾ...?’
‘ಈ ಪಟ್ಟಿ ಮಗೂ...’
•  ಅಕ್ಷರ ದಾಸೋಹ
•  ಕ್ಷೀರ ಭಾಗ್ಯ
•  ಸುವರ್ಣ ಆರೋಗ್ಯ ಚೈತನ್ಯ
•  ಸೈಕಲ್ ವಿತರಣೆ
•  ಪಠ್ಯಪುಸ್ತಕ ವಿತರಣೆ
•  ಬ್ಯಾಗ್ ವಿತರಣೆ
•  ಚಿಣ್ಣರ ಅಂಗಳ
•  ಕೂಲಿಯಿಂದ ಶಾಲೆಗೆ
•  ಬಾ ಬಾಲೆ ಶಾಲೆಗೆ
•  ಬಾ ಮರಳಿ ಶಾಲೆಗೆ
•  ಶಾಲಾ ಪ್ರಾರಂಭೋತ್ಸವ
•  ದಾಖಲಾತಿ ಆಂದೋಲನ
•  ಶಾಲೆ ಬಿಟ್ಟ ಮಕ್ಕಳ ಮನೆಭೇಟಿ
•  ಎಸ್.ಡಿ.ಎಂ.ಸಿ. ರಚನೆ
•  ಕಟ್ಟಡ ಕಾಮಗಾರಿ
•  ಸಮುದಾಯದತ್ತ ಶಾಲೆ
•  ಶಾಲಾ ವಾರ್ಷಿಕೋತ್ಸವ
•  ಪ್ರಗತಿಪತ್ರ ತುಂಬುವುದು
•  ಪಾಠ ಯೋಜನೆ
•  ಪಾಠ ಬೋಧನೆ
•  ಕ್ರಿಯಾ ಯೋಜನೆ
•  ಕ್ರಿಯಾ ಸಂಶೋಧನೆ
•  ಶೈಕ್ಷಣಿಕ ಯೋಜನೆ
•  ದಾಖಲೆ ನಿರ್ವಹಣೆ
•  ಡಾಟ ಎಂಟ್ರಿ
•  ಮಕ್ಕಳಿಗೆ ಬ್ಯಾಂಕ್ ಖಾತೆ ತೆರೆಯುವುದು
•  ವಿದ್ಯಾರ್ಥಿ ವೇತನ
•  ಸಮನ್ವಯ ಶಿಕ್ಷಣ
•  ಜನಗಣತಿ
•  ಮಕ್ಕಳ ಗಣತಿ
•  ಜಾತಿ ಗಣತಿ
•  ಚುನಾವಣಾ ಕಾರ್ಯ
•  ಬಿ.ಎಲ್. ಒ. ಕೆಲಸ
•  ಗುಳಿಗೆ ಹಂಚಿಕೆ
•  ಸಮಾಲೋಚನ ಸಭೆ
•  ಎಸ್.ಡಿ.ಎಂ.ಸಿ. ಸಭೆ
•  ಪಾಲಕರ ಸಭೆ
•  ಶಿಕ್ಷಕರ ಸಭೆ
•  ಪುನಶ್ಚೇತನ ತರಬೇತಿ
•  ಬ್ರಿಟಿಷ್ ಕೌನ್ಸಿಲ್ ತರಬೇತಿ
•  ಹೊರ ಸಂಚಾರ
•  ಕ್ಷೇತ್ರ ಸಂದರ್ಶನ
•  ಶೈಕ್ಷಣಿಕ ಪ್ರವಾಸ
•  ಜಿಲ್ಲಾ ದರ್ಶನ
•  ಸೇತುಬಂಧ
•  ಪರಿಹಾರ ಬೋಧನೆ
•  ಪೂರಕಬೋಧನೆ
•  ನಲಿ ಕಲಿ
•  ಕಲಿ ನಲಿ
•  ಚೈತನ್ಯ ಮಾದರಿ
•  ಟಿ.ಎಲ್.ಎಂ. ತಯಾರಿ
•  ಚಿನ್ನರ ಚುಕ್ಕಿ
•  ಚುಕ್ಕಿ ಚಿನ್ನ
•  ಕೇಳಿ ಕಲಿ
•  ಕ್ರೀಡಾ ಮೇಳ
•  ಪ್ರತಿಭಾ ಕಾರಂಜಿ
•  ಕಲಿಕೋತ್ಸವ
•  ಮೆಟ್ರಿಕ್ ಮೇಳ
•  ವಿಜ್ಞಾನ ಮೇಳ
•  ಸಾಂಸ್ಕೃತಿಕ ಕಾರ್ಯಕ್ರಮ
•  ಸೈನ್ಸ ಇನ್ಸ್ ಪೈಯರ್ ಅವಾರ್ಡ್
•  ಪೂರಕ ಪರೀಕ್ಷೆ
•  ನೈದಾನಿಕ ಪರೀಕ್ಷೆ
•  ಸಿಸಿಇ ಪರೀಕ್ಷೆ
•  ಘಟಕ ಪರೀಕ್ಷೆ
•  ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
•  ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
•  ಕಸ್ತೂರಿ ಬಾ ಬಾಲಿಕ ವಿದ್ಯಾಲಯ ಪ್ರವೇಶ ಪರೀಕ್ಷೆ
•  ನವೋದಯ ಪ್ರವೇಶ ಪರೀಕ್ಷೆ
•  ಎನ್.ಟಿ.ಎಸ್. ಪರೀಕ್ಷೆ
•  ಎನ್.ಎಮ್.ಎಮ್.ಎಸ್. ಪರೀಕ್ಷೆ
•  ಗಣರಾಜ್ಯೋತ್ಸವ
•  ಸ್ವಾತಂತ್ರ್ಯೋತ್ಸವ
•  ಹೈ-ಕ ವಿಮೋಚನಾ ದಿನಾಚರಣೆ
•  ಯುವಕರ ದಿನಾಚರಣೆ
•  ಶಿಕ್ಷಕರ ದಿನಾಚರಣೆ
•  ಸಾಕ್ಷರತಾ ದಿನಾಚರಣೆ
•  ಪರಿಸರ ದಿನಾಚರಣೆ
•  ವಿಜ್ಞಾನಿಗಳ ದಿನಾಚರಣೆ
•  ರಾಷ್ಟ್ರೀಯ ಶಿಕ್ಷಣ ದಿನಾಚರಣೆ
•  ಭೂ ದಿನಾಚರಣೆ
•  ಗಾಂಧಿ ಜಯಂತಿ
•  ಕನಕ ಜಯಂತಿ
•  ಬಸವ ಜಯಂತಿ
•  ಅಂಬೇಡ್ಕರ್ ಜಯಂತಿ
•  ಕನ್ನಡ ರಾಜ್ಯೋತ್ಸವ
•  ಬಾಬು ಜಗಜೀವನ್ ರಾಂ ದಿನಾಚರಣೆ
•  ವನಮಹೋತ್ಸವ
•  ಮಕ್ಕಳ ದಿನಾಚರಣೆ
•  ಬಿಸಿಯೂಟ
•  ಶೌಚಾಲಯ ನಿರ್ವಹಣೆ
...
...
‘ನನ್ಗೆ ನಿಮ್ಮ ಕತೆಯೆಲ್ಲ ಬೇಡ ಟೀಚಾ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT