ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ, ಇ–ಗ್ರಂಥಾಲಯಕ್ಕೆ ಚಾಲನೆ

Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರದ 5ನೇ ಹಂತ­ದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾ­ಖೆಯು ಹೊಸದಾಗಿ ನಿರ್ಮಿ­ಸಿ­ರುವ  ಗ್ರಂಥಾಲಯ ಕಟ್ಟಡವನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಇ–ಗ್ರಂಥಾ­ಲಯಕ್ಕೂ ಚಾಲನೆ ನೀಡಲಾಯಿತು.

ಒಟ್ಟು ₨ 1.80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗ್ರಂಥಾಲಯ ಕಟ್ಟಡವು ಮೂರು ಮಹಡಿಗಳನ್ನು ಹೊಂದಿದೆ. ಅದರಲ್ಲಿ ಒಟ್ಟು 80,000 ಪುಸ್ತಕಗಳಿವೆ. ಕಥೆ, ಕಾದಂಬರಿ ಜತೆಗೆ ಇತಿಹಾಸದ ಅನೇಕ ಪುಸ್ತಕಗಳಿವೆ. ಐಎಎಸ್‌, ಐಪಿಎಸ್‌, ಬ್ಯಾಂಕ್‌ಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಪುಸ್ತಕಗಳಿವೆ. ಇ– ಗ್ರಂಥಾ ಲಯದಲ್ಲಿರುವ 20  ಕಂಪ್ಯೂಟರ್‌ನಲ್ಲಿ ಇಂಟರ್‌­ನೆಟ್‌ ಸೌಲಭ್ಯವಿದ್ದು, ಅರ್ಧ ಗಂಟೆ ಬ್ರೌಸಿಂಗ್‌ಗೆ ₨ 5 ಶುಲ್ಕವಿದೆ.

ಶಾಸಕ ವಿಜಯಕುಮಾರ್‌, ‘ಗ್ರಂಥಾ­ಲಯ­ದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ­ವಾದ ವಿಭಾಗವಿದೆ. ಪತ್ರಿಕೆಗಳು ಮತ್ತು ನಿಯತಕಾಲಿಕಗಳ ಪ್ರತ್ಯೇಕ ವಿಭಾ­ಗವೂ ಇದೆ’ ಎಂದು ಹೇಳಿದರು. ‘ಗ್ರಂಥಾಲಯದಲ್ಲಿಯೇ ಒಂದು ಅಧ್ಯ­ಯನ ಕೇಂದ್ರವನ್ನು ಮಾಡಬೇಕೆಂಬ ಯೋಚನೆ­ಯಿದೆ. ಇಲ್ಲಿ ಐಎಎಸ್‌, ಐಪಿಎಸ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋ­ಜಿಸಲಾಗುವುದು.

ಕನ್ನಡ, ಇಂಗ್ಲಿಷ್‌, ಸಂಸ್ಕೃತ, ಫ್ರೆಂಚ್‌, ಜಪಾನ್ ಮುಂತಾದ ಭಾಷೆಗಳನ್ನು ಕಲಿಸಲು ಕೋರ್ಸ್‌ ಗಳನ್ನು ಆರಂಭಿಸ­ಲಾಗು­ವುದು ’ ಎಂದು ವಿವರಿಸಿದರು. ‘ಮುಂದಿನ ದಿನಗಳಲ್ಲಿ ಇ–ಗ್ರಂಥಾಲಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸ ಲಾಗುವುದು. ಗೂಗಲ್‌ನಲ್ಲಿ ಒಂದೆಡೆ ಒಂದು ಮಾಹಿತಿ ಮಾತ್ರ ದೊರೆ ಯುತ್ತದೆ. ಎಂದು ಬೆಂಗಳೂರು ವಿವಿ ನಿವೃತ್ತ ಗ್ರಂಥಪಾಲಕ ಡಾ.ಪಿ.ವಿ. ಕೊನ್ನೂರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT