ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ. 22ರಿಂದ ಧಾರವಾಡ ಸಾಹಿತ್ಯ ಸಂಭ್ರಮ

ಮೂರು ದಿನ ಚರ್ಚಾಗೋಷ್ಠಿ, ಸಂವಾದ: 150 ಲೇಖಕರಿಗೆ ಆಹ್ವಾನ
Last Updated 17 ಡಿಸೆಂಬರ್ 2015, 19:41 IST
ಅಕ್ಷರ ಗಾತ್ರ

ಧಾರವಾಡ: ‘ಧಾರವಾಡ ಸಾಹಿತ್ಯ ಸಂಭ್ರಮದ 4ನೇ ಆವೃತ್ತಿ ಜನವರಿ 22ರಿಂದ ಮೂರು ದಿನ ನಡೆಯಲಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಚರ್ಚೆಯೇ ಪ್ರಮುಖ ವಿಷಯವಾಗಲಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಹೇಳಿದ್ದಾರೆ.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮವು ಕ.ವಿ.ವಿ. ಆವರಣ ದಲ್ಲಿರುವ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ. ಕಳೆದ ಮೂರು ಆವೃತ್ತಿಯಲ್ಲಿ ಅತ್ಯಂತ ಚಟುವಟಿಕೆ ಯಿಂದ ಪಾಲ್ಗೊಂಡಿದ್ದ ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಈ ಬಾರಿ ಇಲ್ಲದಿರುವುದು ಎಲ್ಲರ ನೋವಿಗೆ ಕಾರಣವಾಗಿದೆ. ಸಂಭ್ರಮದ ಆಯೋಜನೆಗೆ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ಅವರ ಅನುಪಸ್ಥಿತಿ ತುಂಬಲಾರದ ನಷ್ಟ. ಹೀಗಾಗಿ ಈ ಬಾರಿಯ ಸಾಹಿತ್ಯ ಸಂಭ್ರಮವನ್ನು ಅವರಿಗೆ ಅರ್ಪಿಸಲಾಗುತ್ತಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸಂಭ್ರಮದಲ್ಲಿ ಐತಿಹಾಸಿಕ ಕಾದಂ ಬರಿಗಳಿಂದ ಓದು, ಹಳಗನ್ನಡ ಕಾವ್ಯದ ಓದು, ಇಂದೂ ಕಾಡುವ ಅಂದಿನ ಕೃತಿ, ಸತ್ಯದೊಂದಿಗೆ ಪ್ರಯೋಗ (ಆತ್ಮಕಥೆಗಳು), ನಮ್ಮ ಕೃಷಿ ಸಂಸ್ಕೃತಿಯ ಇಂದಿನ ಸ್ಥಿತಿ-ಗತಿ ಮೊದಲಾದ ವಿಷಯ ಗಳ ಕುರಿತು ಚರ್ಚಾಗೋಷ್ಠಿಗಳು ಇರು ತ್ತವೆ. ಈ ಚರ್ಚೆಗಳು ಏಕಮುಖಿಯಾದ ಭಾಷಣಗಳಾಗಿರದೆ, ಪರ-ವಿರೋಧದ ವಾದಗಳನ್ನು ಒಳಗೊಂಡಿರುತ್ತವೆ. ಮೂರೂ ದಿನಗಳ ಕಾಲ ದಿನ ಕ್ಕೊಂದರಂತೆ ಹಂಪನಾ, ಸಿ.ಪಿ.ಕೆ ಅವರೊಂದಿಗೆ ಸಂವಾದ ಇರುತ್ತವೆ.  ಒಂದು ದಿನ ಚಲನಚಿತ್ರ ನಿರ್ದೇಶಕ ಎಂ.ಎಸ್. ಸತ್ಯು, ನಟ ಅನಂತನಾಗ್‌ ಅವರೊಂದಿಗೆ ಜಯಂತ ಕಾಯ್ಕಿಣಿ ಸಂವಾದ ನಡೆಸುತ್ತಾರೆ. ಸಂಜೆ ಪಂಡಿತ್‌ ಕೈವಲ್ಯಕುಮಾರ ಗುರವ ಅವರ ಸಂಗೀತ, ಬಿ. ಜಯಶ್ರೀ ಅವರ ರಂಗಗೀತೆಗಳು ಹಾಗೂ ‘ಬರ’ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಅವರು ವಿವರ ನೀಡಿದ್ದಾರೆ.

ಈ ಬಾರಿಯ ಸಂಭ್ರಮದ ನೇರ ಪ್ರಸಾರಕ್ಕೆ ಟ್ರಸ್ಟ್‌ ಯೋಜನೆ ರೂಪಿಸಿದೆ. ಆಸಕ್ತರು ಮನೆಯಲ್ಲಿ ಕುಳಿತುಕೊಂಡೇ ಸಂಭ್ರಮದ ಕಲಾಪಗಳನ್ನು ಆಸ್ವಾದಿಸ ಬಹುದಾಗಿದೆ. ಪ್ರತಿ ವರ್ಷದಂತೆ ಪುಸ್ತಕ ಮಳಿಗೆಗಳೂ ಇರಲಿವೆ ಎಂದು ಅವರು ಹೇಳಿದ್ದಾರೆ.

ಈ ವರ್ಷವೂ ಕನ್ನಡದ ಹಿರಿಯ ಕಿರಿಯ, ಎಲ್ಲ ಪಂಥಗಳಿಗೆ ಸೇರಿದ ಸುಮಾರು 150 ಲೇಖಕರನ್ನು ಟ್ರಸ್ಟ್‌ ಆಹ್ವಾನಿಸಿದೆ. ಜಿ.ಎಸ್. ಆಮೂರ, ಎಸ್. ಶೆಟ್ಟರ್, ಸಿ.ಎನ್. ರಾಮಚಂದ್ರನ್, ಎಚ್.ಎಸ್. ವೆಂಕಟೇಶಮೂರ್ತಿ, ಸಿದ್ಧ ಲಿಂಗಯ್ಯ, ವೀರಪ್ಪ ಮೊಯಿಲಿ, ಕೆ. ಮರುಳಸಿದ್ದಪ್ಪ, ಬಿ.ಎಲ್.ಶಂಕರ್, ವೈ.ಎಸ್.ವಿ.ದತ್ತ, ರಾಜೇಂದ್ರ ಚೆನ್ನಿ, ಆರ್. ಗಣೇಶ್‌, ಮಹಾದೇವ ಪ್ರಕಾಶ್, ರವೀಂದ್ರ ರೇಶ್ಮೆ, ಬಿ. ಸುರೇಶ್, ಎಸ್.ಆರ್. ವಿಜಯಶಂಕರ್, ತಮಿಳ್ ಸೆಲ್ವಿ, ಶೂದ್ರ ಶ್ರೀನಿವಾಸ್‌, ಶ್ರೀನಿವಾಸ ವೈದ್ಯ, ಟಿ.ಎನ್. ಸೀತಾರಾಮ್, ಬೊಳು ವಾರು ಮಹಮ್ಮದ್ ಕುಞಿ, ಎಸ್. ದಿವಾ ಕರ, ಐ.ಜಿ. ಸನದಿ, ಶಶಿಕಲಾ ವೀರಯ್ಯ ಸ್ವಾಮಿ, ಲತಾ ರಾಜಶೇಖರ್ ಮೊದಲಾ ದವರು ಗೋಷ್ಠಿಗಳಲ್ಲಿ ಭಾಗವಹಿಸ ಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಮತ್ತು ಆಮಂತ್ರಿತರಾಗಿ ಅನೇಕ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಗಿರಡ್ಡಿ ತಿಳಿಸಿದ್ದಾರೆ.

ಸಂಭ್ರಮದಲ್ಲಿ ಪಾಲ್ಗೊಳ್ಳುವ ಆಸ ಕ್ತರಿಗೆ ನೋಂದಣಿ ಇದೇ 21ರಿಂದ ಆರಂಭವಾಗಲಿದೆ. www.dharwadsahityasambhrama.com ಅಂತರ್ಜಾಲ ಅಥವಾ ಟ್ರಸ್ಟ್‌ ಕಚೇರಿ ಯನ್ನು ಸಂಪರ್ಕಿಸಿ, ಅರ್ಜಿ ನಮೂನೆ ಪಡೆದು ₹ 750 ಶುಲ್ಕ ತುಂಬಿ ನೋಂ ದಾಯಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT