ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಭೌತ ವಿಜ್ಞಾನಿಗಳಿಗೆ ನೊಬೆಲ್‌

ಎಲ್‌ಇಡಿ ವಿದ್ಯುತ್‌ ದೀಪ ಸಂಶೋಧನೆಗೆ ಸಂದ ಗೌರವ
Last Updated 7 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಂ (ಎಎಫ್‌ಪಿ): ವಿದ್ಯುತ್‌ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಅತ್ಯಂತ ಕಡಿಮೆ ವಿದ್ಯುತ್‌ ಬಳಸಿ ಹೆಚ್ಚು ಬೆಳಕು ನೀಡುವ ಪರಿಸರ ಸ್ನೇಹಿ ಎಲ್‌ಇಡಿ (ಲೈಟ್ ಎಮಿಟಿಂಗ್‌ ಡಯೋಡ್) ದೀಪ­ವನ್ನು ಕಂಡುಹಿಡಿದ ಜಪಾನ್‌ ಮೂಲದ ಮೂವರು ವಿಜ್ಞಾನಿ­ಗಳು ಈ ಬಾರಿಯ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಭಾಜನ­ರಾಗಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ ಜಪಾನ್‌ನ ಇಸಾಮು ಅಕಾಸಾಕಿ, ಹಿರೋಷಿ ಅಮಾನೊ ಮತ್ತು ಶುಜಿ ನಕಾಮುರಾ ಅವರೇ ಈ ಗೌರವಕ್ಕೆ ಪಾತ್ರರಾದವರು.

ಪ್ರಶಸ್ತಿಯು ಅಂದಾಜು ₨ 6 ಕೋಟಿ (11 ಲಕ್ಷ ಡಾಲರ್‌) ನಗದು, ಪುರ­ಸ್ಕಾರವನ್ನು ಒಳಗೊಂಡಿದೆ. ಪ್ರಶಸ್ತಿಯ ಮೊತ್ತ­ವನ್ನು ಮೂವರು ವಿಜ್ಞಾನಿಗಳು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಉಪ­ಯೋಗ­­­­­­­ವಾಗುವ ಮತ್ತು ಪರಿಸರ ಸ್ನೇಹಿ ಎಲ್‌ಇಡಿ ದೀಪವು ವಿದ್ಯುತ್‌ ಮಿತ­ವ್ಯಯ ಸಾಧಿಸುವಲ್ಲಿ ಕ್ರಾಂತಿಕಾರಿ­ ಹೆಜ್ಜೆ­ಯಾಗಿದೆ. ಹಳೆಯ  ವಿದ್ಯುತ್‌ ದೀಪ­ಗಳಿಗೆ ಹೋಲಿಸಿದರೆ ಈ ಪುಟ್ಟ ದೀಪಗಳು ದೀರ್ಘಕಾಲೀನ ಮತ್ತು ದಕ್ಷ ಬೆಳಕಿನ ಸಾಧನಗಳಾಗಿವೆ.  

‘ವಿದ್ಯುತ್‌ ದೀಪಗಳು 20ನೇ ಶತ­ಮಾನ ಬೆಳ­ಗಿ­ದ್ದರೆ, ಎಲ್‌ಇಡಿ ದೀಪ­ಗಳು 21ನೇ ಶತಮಾನ ಬೆಳಗಲಿವೆ’ ಎಂದು ನೊಬೆಲ್‌ ಆಯ್ಕೆ ಸಮಿತಿ ತಿಳಿಸಿದೆ.

‘ಯಾವ ಸಂಶೋಧನೆಯಲ್ಲಿ ಎಲ್ಲರೂ ವಿಫಲರಾಗಿದ್ದರೋ, ಅದೇ ಸಂಶೋಧನೆ­ಯಲ್ಲಿ ಈ ಮೂವರು ಯಶಸ್ಸು ಕಂಡು­ಕೊಂಡಿ­ದ್ದಾರೆ’ ಎಂದೂ ಸಮಿತಿ ಹೇಳಿದೆ.

‘ಎಲ್‌ಇಡಿ ದೀಪಗಳು ಪ್ರಕಾಶ­ಮಾನ­­ವಾಗಿ­ರುವ ಬೆಳಕನ್ನು ಹೊರಸೂ­ಸು­ತ್ತವೆ.  ಥಾಮಸ್‌ ಅಲ್ವಾ ಎಡಿಸನ್‌ ಕಂಡು ಹಿಡಿದ ಬಲ್ಬ್‌ಗೆ ಹೋಲಿಸಿದರೆ ಎಲ್‌ಇಡಿ ಬಲ್ಬ್‌ಗಳು ಅತ್ಯಂತ ಕಡಿಮೆ ವಿದ್ಯುತ್‌  ಬಳಸುತ್ತವೆ.  

ಸ್ಥಳೀಯವಾಗಿ ಲಭ್ಯವಿರುವ ಸೌರ ವಿದ್ಯು­ಚ್ಛಕ್ತಿಗೂ ಎಲ್‌ಇಡಿ ಬಲ್ಬ್‌ಗ­ಳನ್ನು ಅಳವಡಿಸಬಹುದು. ವಿದ್ಯುತ್‌ ಜಾಲದ ಕೊರತೆ ಅನುಭವಿಸುತ್ತಿರುವ ಜಗತ್ತಿನಾ­ದ್ಯಂತ ಇರುವ 1.5 ಶತಕೋಟಿ ಜನರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT