ನವದೆಹಲಿ (ಪಿಟಿಐ): ಯುಪಿಎ ಸರ್ಕಾರದ ಅವಧಿಯಲ್ಲಿ ಭೂಸೇನೆಯ ಮುಖ್ಯಸ್ಥರಾಗಿ ಆಯ್ಕೆಗೊಂಡಿರುವ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರ ನೇಮಕಾತಿಯನ್ನು ಬುಧವಾರ ಸಮರ್ಥಿಸಿಕೊಂಡಿರುವ ಸರ್ಕಾರ ದಲ್ಬೀರ್ ಅವರನ್ನೇ ಸೇನೆಯ ನೂತನ ಮುಖ್ಯಸ್ಥರನ್ನಾಗಿ ಮುಂದುವರಿಸುವುದಾಗಿ ಹೇಳಿದೆ.

ಈ ಕುರಿತಂತೆ ರಾಜ್ಯಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು `ನೇಮಕಾತಿಗೆ (ಸೇನೆಯ ಮುಖ್ಯಸ್ಥರಾಗಿ ಸುಹಾಗ್) ಸಂಬಂಧಿಸಿದಂತೆ ಸರ್ಕಾರದ ಆಯ್ಕೆಯೇ ಅಂತಿಮ ಮತ್ತು ಇದಕ್ಕೆ ಸರ್ಕಾರ ಬದ್ಧವಾಗಿದೆ' ಎಂದು ಹೇಳಿದರು.

ದಲ್ಬೀರ್ ಆಯ್ಕೆ ಕುರಿಂತೆ ಆಕ್ಷೇಪ ಎತ್ತಿರುವ ಈಶಾನ್ಯ ಪ್ರದೇಶಾಭಿವೃದ್ಧಿ ಖಾತೆಯ (ಸ್ವತಂತ್ರ) ಸಚಿವ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ.ಸಿಂಗ್ ಅವರ ನಡೆ ಕುರಿತಂತೆ ಕಾಂಗ್ರೆಸ್ ಹಿರಿಯ ಮುಖಂಡ ಆನಂದ ಶರ್ಮಾ ಅವರು ಟ್ವಿಟ್ ಸಂದೇಶದಲ್ಲಿ ಧ್ವನಿ ಎತ್ತಿದ ಬೆನ್ನಲ್ಲೇ ಜೇಟ್ಲಿ ಅವರಿಂದ ಈ ಹೇಳಿಕೆ ಕೇಳಿ ಬಂದಿದೆ.

ಸೇನೆಯ ಮುಖ್ಯಸ್ಥರಾಗಿರುವ ವಿಕ್ರಂ ಸಿಂಗ್ ಅವರ ಅಧಿಕಾರಾವಧಿಯು ಜುಲೈ 31ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಈ ಮುಂಚಿನ ಯುಪಿಎ ಸರ್ಕಾರ ಕೆಲ ವಾರಗಳ ಹಿಂದೆಯಷ್ಟೇ ದಲ್ಬೀರ್ ಅವರನ್ನು ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕಾತಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.