ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮದ ಬಲ

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಾ  ಮದ ಬಲ ಎಂಬುದೊಂದಿದೆ. ಅದನ್ನು ಪುರಂದರದಾಸರೇ ಎತ್ತಿ ಹೇಳಿದ್ದಾರೆ. ‘ನೀನ್ಯಾಕೋ ನಿನ್ನ   ಹಂಗ್ಯಾಕೋ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ’ ಎಂದು ದಾಸರು ದೇವರನ್ನೆ ಸವಾಲಿಗೆ ಒಡ್ಡಿದ್ದಾರೆ. ಒಮ್ಮೆ ವರಕವಿ ಬೇಂದ್ರೆಯವರ ಕುರಿತು ದೊಡ್ಡ ಸತ್ಕಾರ ಸಮಾರಂಭವಿತ್ತು. ನಡುವೆ ಒಂದು ಬಿಡುವು ಕೊಡಲಾಗಿತ್ತು. ಆಗ ಜನರೆಲ್ಲ ಹಾಲ್‌ನಿಂದ ಹೊರಗೆ ಬಂದರು.

ಬೇಂದ್ರೆಯವರು ಸಹಾ ಯಾರೊಡನೆಯೊ ಹರಟುತ್ತಾ ನಿಂತರು. ಅವರ ಹರಟೆ ಮುಗಿಯಲಿಲ್ಲ. ಜನರೆಲ್ಲ ಒಳಗೆ ಹೋದರು. ಆನಂತರ ಬೇಂದ್ರೆಯವರು ಗಡಿಬಡಿಯಲ್ಲಿ ತಮ್ಮ ಪ್ರಾತಃರ್ವಿಧಿಯನ್ನು ಮುಗಿಸಿ ಒಳಗೆ ನುಗ್ಗಲು ಓಡಿದರು. ಅಷ್ಟರಲ್ಲಿ ಬಾಗಿಲಲ್ಲಿದ್ದ ಸ್ವಯಂ ಸೇವಕರು ಅವರನ್ನು ತಡೆದರು. ‘ನೀವು ಯಾರು?’ ಎಂದು ಕೇಳಿದರು. ಆದರೆ ತಾನು ಬೇಂದ್ರೆಯೆಂದು ಅವರನ್ನಲಿಲ್ಲ.

‘ಒಳಗೆ ಬೇಂದ್ರೆಯವರಿದ್ದಾರೆ. ಅವನನ್ನು ಕಾಣಬೇಕಾಗಿದೆ ಎಂದರು. ಕೂಡಲೇ ಆ ಸ್ವಯಂಸೇವಕರು ಅವರನ್ನು ಒಳವರೆಗೆ ಒಯ್ದು ಅವರ ಕುರ್ಚಿಗೆ ಮುಟ್ಟಿಸಿದರು. ಅವರೇ ಕುರ್ಚಿಯ ಮೇಲೇ ಕುಳಿತಾಗ ಓ.... ಇವರೇ ಬೇಂದ್ರೆಯವರೆಂದು ಆ ಬಡಪಾಯಿಗಳಿಗೆ ಗೊತ್ತಾಯಿತು. ತಾನು ಅವರಿಗೆ ಅಪರಿಚಿತ. ಆದ್ದರಿಂದ ತಮ್ಮ ಹೆಸರು ಹೇಳಿ ಅವರನ್ನು ಗೊಂದಲಗೊಳಿಸುವುದು ಅಥವಾ ಇನ್ನೊಬ್ಬರನ್ನು ಕರೆತಂದು ತಮ್ಮ ಗುರುತು ಹೇಳಿಸುವುದು ಅವರಿಗೆ ತುಂಬ ಕಷ್ಟವೆನಿಸಿತು. ಆದ್ದರಿಂದ ತನ್ನ ಹೆಸರೇ ತನಗೆ ಕೆಲಸ ಮಾಡಿತು ಎಂದರು ನನಗೆ ವರಕವಿ ಬೇಂದ್ರೆ. ನಾಮದ ಬಲವೆಂದರೇ ಹೀಗೆ.

(ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ : ಸಂಪುಟ 10 – ಸಂಕೀರ್ಣ ಕೃತಿಯಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT