ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಾಚಾರ್ಯ ವಿಷಾದ

ಮಹರ್ಷಿ ವಾಲ್ಮೀಕಿ ಪುಸ್ತಕ ವಿವಾದ
Last Updated 2 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ‘ಮಹರ್ಷಿ ವಾಲ್ಮೀಕಿ ಕೃತಿ­ಯಲ್ಲಿ ಮೂಲ ರಾಮಾಯಣದ ವಾಕ್ಯ­ಗ­ಳನ್ನು ಉದಾಹರಿಸಿದ್ದೇನೆಯೇ ಹೊರತು ಅದು ನನ್ನ ಸ್ವಂತ ಕಲ್ಪನೆಯೂ ಅಲ್ಲ, ಸಂಶೋಧನೆಯೂ ಅಲ್ಲ. ಇದು ಯಾರ ಮನಸ್ಸಿಗಾದರೂ ನೋವ­ನ್ನುಂಟು ಮಾಡಿದ್ದರೆ ವಿಷಾದ ವ್ಯಕ್ತಪಡಿ­ಸು­ತ್ತೇನೆ’ ಎಂದು ನಿಷೇಧಿತ ‘ವಾಲ್ಮೀಕಿ ಯಾರು?’ ಕೃತಿಯ ಲೇಖಕ ಡಾ.ಕೆ.ಎಸ್. ನಾರಾಯಣಾಚಾರ್ಯ ಸ್ಪಷ್ಟ­ಪಡಿಸಿದ್ದಾರೆ.

‘ಮಹರ್ಷಿ ವಾಲ್ಮೀಕಿ ಕೋಗಿಲೆ­ಯಂತೆ. ನಂತರ ರಾಮಾಯಣವನ್ನು ತಿರುಚಿ ಬರೆದ ಕವಿಗಳು ಕಾಗೆಗಳಂತೆ. ಕಾಗೆ, ಕೋಗಿಲೆಗಳು ನೋಡುವುದಕ್ಕೆ ಒಂದೇ ಆಗಿದ್ದರೂ ಅವರ ಕೃತಿಗಳಲ್ಲಿ ವ್ಯತ್ಯಾಸ ತಿಳಿಯುತ್ತದೆ ಎಂದು ಹೇಳಿ­ದ್ದೇ­ನೆಯೇ ಹೊರತು ಬೇಡ, ನಾಯಕ ಜನಾಂಗವನ್ನು ಕಾಗೆ, ಹದ್ದುಗಳಿಗೆ ಹೋಲಿ­ಸಿಲ್ಲ. ಆದರೆ, ಇದನ್ನು ತಿರುಚಿ ವಿವಾದ ಎಬ್ಬಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಮಹರ್ಷಿ ವಾಲ್ಮೀಕಿ ಕೃತಿಯ ಎರ­ಡನೇ ಮುದ್ರಣದಲ್ಲಿ ಎಲ್ಲಾ ಆಕ್ಷೇಪಗ­ಳಿಗೂ ಸಮಂಜಸವಾದ ಸಮಾಧಾನ­ಗ­ಳನ್ನು ಸೇರಿಸಿ ಮುದ್ರಿಸಿ ಬಿಡುಗಡೆ ಮಾಡ­ಲಾಗಿದೆ. ಮಹರ್ಷಿ ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಬೇಕು. ಮಹರ್ಷಿ ವಾಲ್ಮೀಕಿ ಭವನಗಳ ನಿರ್ಮಾಣ ಸ್ವಾಗ­ತಾರ್ಹ. ಬೇಡ, ನಾಯಕ ಜನಾಂಗದವ­ರನ್ನು, ಅವರ ಅಪಾರ ಕೊಡುಗೆಗಳನ್ನು ಕೃತಿಯಲ್ಲಿ ಕೊಂಡಾಡಿದ್ದೇನೆ. ಅವರು ನನಗೆ ಆದರಣೀಯರು. ಅವರನ್ನು ಕೃತಿ­ಯಲ್ಲಿ ಎಲ್ಲಿಯೂ ಅವಹೇಳನ ಮಾಡಿಲ್ಲ’ ಎಂದು ಅವರು ಪ್ರಕಟಣೆ­ಯಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT