ಸ್ಟಾಕ್ಹೋಂ, ಸ್ವೀಡನ್ (ಎಪಿ): ನಾಜಿ ಅತಿಕ್ರಮಣ ಮತ್ತು ಅದರಿಂದ ದೇಶದ ಮೇಲಾದ ಪರಿಣಾಮದ ಬಗ್ಗೆ ಜೀವನವಿಡೀ ಅಧ್ಯಯನ ಮಾಡಿ ಪುಸ್ತಕಗಳನ್ನು ಬರೆದ ಫ್ರಾನ್್ಸನ ಲೇಖಕ ಪ್ಯಾಟ್ರಿಕ್ ಮೊಡಿಯಾನೊ ಅವರನ್ನು ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಾಜಿ ದಾಳಿಯಿಂದ ಮಾನವ ಕುಲದ ಮೇಲೆ ಆದ ಅತಿ ಕೆಟ್ಟ ಅನುಭವಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ ಪ್ಯಾಟ್ರಿಕ್ ಅವರಿಗೆ ₨6.6 ಕೋಟಿ ($11 ಲಕ್ಷ ) ನಗದು ಬಹುಮಾನ ಸಿಗಲಿದೆ. 69 ವರ್ಷದ ಪ್ಯಾಟ್ರಿಕ್ ಅವರ ಕಾದಂಬರಿ ‘ಮಿಸ್ಸಿಂಗ್ ಪರ್ಸನ್’ಗೆ 1978ರಲ್ಲಿ ಪ್ರತಿಷ್ಠಿತ ‘ಪ್ರಿಸ್ ಗೊನ್ಕೋರ್ಟ್’ ಪ್ರಶಸ್ತಿ ಲಭಿಸಿತ್ತು. ಅವರ ಯುರೋಪಿಯನ್ ಸಾಹಿತ್ಯಕ್ಕೆ 2012ರಲ್ಲಿ ಆಸ್ಟ್ರೇಲಿಯಾ ದೇಶದ ಪ್ರಶಸ್ತಿ ಲಭಿಸಿದೆ.

ಪ್ಯಾಟ್ರಿಕ್ ಕೃತಿಗಳಲ್ಲಿ ಯಹೂದಿತನ, ನಾಜಿಗಳ ಕ್ರೌರ್ಯ ಮತ್ತು ಅಸ್ಮಿತತೆ ಕಳೆದುಕೊಂಡು ಪರಿತಪಿಸುವ ವಿಚಾರವೇ ಕಥಾ ವಸ್ತುಗಳು. ಅವರ 40ಕ್ಕೂ ಹೆಚ್ಚು ಕೃತಿಗಳು ಪ್ರೆಂಚ್ ಭಾಷೆಯಲ್ಲಿ ಪ್ರಕಟಗೊಂಡಿವೆ. ಅಲ್ಲದೆ, ಕೆಲವು ಪ್ರಮುಖ ಕೃತಿಗಳು ಇಂಗ್ಲಿಷ್ಗೆ ಭಾಷಾಂತರಗೊಂಡಿವೆ.

‘ಲಾ ಪ್ಲೇಸ್ ಡಿ ಎಲೈಟ್’, ‘ರಿಂಗ್ ಆಫ್ ರೋಡ್್ಸ’, ‘ಎ ವಿಲ್ಲಾ ಟ್ರಿಸ್ಟೆ’, ‘ಎ ಟ್ರೇಸ್ ಮಲೈಸ್’ ಮತ್ತು ‘ಹನಿಮೂನ್’ ಅವರ ಪ್ರಮುಖ ಕೃತಿಗಳು. ಅವರು ಮಕ್ಕಳಿಗಾಗಿ ಬರೆದ ಪುಸ್ತಕ 1974ರಲ್ಲಿ ‘ಲಾಕೊಂಬೆ, ಲೂಸಿಯೆನ್’ ಹೆಸರಿನ ಸಿನಿಮಾ ಆಯಿತು. ಪ್ಯಾಟ್ರಿಕ್ 1945ರಲ್ಲಿ ಎರಡನೇ ಮಹಾ ಯುದ್ಧ ಅಂತ್ಯಗೊಂಡ ಎರಡು ತಿಂಗಳ ನಂತರ ಪ್ಯಾರಿಸ್ನ ಉಪನಗರದಲ್ಲಿ ಜನಿಸಿದರು. ಅವರು ಬಹಳ ಅಪರೂಪಕ್ಕೆ ಸಂದರ್ಶನ ನೀಡುತ್ತಾರೆ. ಇಟಲಿ ಮೂಲದ ಯಹೂದಿ ಸಮುದಾಯಕ್ಕೆ ಸೇರಿದ ಪ್ಯಾಟ್ರಿಕ್ ತಂದೆ ಬೆಲ್ಜಿಯಂ ಮೂಲದ ನಟಿಯನ್ನು ಮದುವೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.