ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಮಾಂಝಿ ಸಿ.ಎಂ ಆಗಿ ಪ್ರಮಾಣ ವಚನ

Last Updated 20 ಮೇ 2014, 19:30 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ):  ಬಿಹಾರದ 32ನೇ ಮುಖ್ಯಮಂತ್ರಿಯಾಗಿ ಜೆಡಿಯುನ ಹಿರಿಯ ನಾಯಕ ಜೀತನ ರಾಂ ಮಾಂಝಿ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಂಝಿ ಹಾಗೂ ಇತರ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ತಿಂಗಳ 23ರಂದು ಸದನದಲ್ಲಿ ವಿಶ್ವಾಸ ಮತ ಯಾಚಿಸುವಂತೆ ರಾಜ್ಯಪಾಲರು ಹೊಸ ಸರ್ಕಾರಕ್ಕೆ ಸೂಚಿಸಿದ್ದಾರೆ. ಮಾಂಝಿ ಅವರು ಅಂಚೆ ವಿಭಾಗದಲ್ಲಿ ಗುಮಾಸ್ತರಾಗಿಯೂ ಕೆಲಸ ನಿರ್ವಹಿಸಿದ್ದರು.

ಕಾಂಗ್ರೆಸ್‌ ಬೆಂಬಲ: ಬಿಹಾರದ ಜೆಡಿಯು ನೇತೃತ್ವದ ಸರ್ಕಾರಕ್ಕೆ ನೀಡಿರುವ ‘ಬೇಷರತ್‌’ ಬೆಂಬಲವನ್ನು ಮುಂದುವರಿ­ಸಲು ಕಾಂಗ್ರೆಸ್‌ ನಿರ್ಧರಿಸಿದೆ. 
ಶಾಸಕರ ರಾಜೀನಾಮೆ: ಬಿಹಾರ  ಬಿಜೆಪಿಯ ಇಬ್ಬರು ಬಂಡಾಯ ಶಾಸಕರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಹನ್ನೊಂದು ತಿಂಗಳುಗಳಿಂದ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬದಲಿಗೆ ನಿತೀಶ್‌ ಕುಮಾರ್‌ ಅವರನ್ನು ಶ್ಲಾಘಿ­ಸುತ್ತಾ ಬಂದಿದ್ದ ವಿಜಯ್‌ ಮಿಶ್ರಾ ಮತ್ತು ರಾಣಾ ಗಂಗೇಶ್ವರ್‌ ಸಿಂಗ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT