ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಹೆಜ್ಜೆಯಲ್ಲಿ ಗಿರೀಶ್‌ ಕಾಸರವಳ್ಳಿ

Last Updated 20 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೆಸಲೂರಿನ ಗಣೇಶ್‌ರಾವ್‌ ಮತ್ತು ಲಕ್ಷ್ಮೀದೇವಿ ಅವರ ಮಗನಾದ ಗಿರೀಶ್‌ ಕಾಸರವಳ್ಳಿ ಅವರಿಗೆ ಸಾಂಸ್ಕೃತಿಕ ಲೋಕದ ರಚನಾತ್ಮಕ ಬದುಕಿನ ಪರಿಚಯವಾದದ್ದು ಅವರ ಮನೆಯಲ್ಲಿಯೇ. ಕೆ.ವಿ. ಸುಬ್ಬಣ್ಣ ಅವರಿಂದ ಸಿನಿಮಾದಂತಹ ಕ್ರಿಯಾತ್ಮಕ ಜಗತ್ತಿನ ಪರಿಚಯ ಪಡೆದು ಮುಂದುವರೆದ ಗಿರೀಶರು ಪುಣೆಯ ಫಿಲಂ ಅಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದಲ್ಲಿ ‘ನಿರ್ದೇಶನ’ ವಿಷಯದಲ್ಲಿ ಚಿನ್ನದ ಪದಕ ಪಡೆದವರು.

ಅಂದು 1977. ರಾಷ್ಟ್ರದ ಚಿತ್ರಜಗತ್ತು ವಿಸ್ಮಯಗೊಂಡಿತ್ತು. ಖ್ಯಾತನಾಮ ನಿರ್ದೇಶಕರ ಚಿತ್ರಗಳ ನಡುವೆ ಕರ್ನಾಟಕದ ಯುವ ನಿರ್ದೇಶಕರೊಬ್ಬರ ಪ್ರಥಮ ಪ್ರಯತ್ನದ ‘ಘಟಶ್ರಾದ್ಧ’ ಚಿತ್ರ ಪ್ರತಿಷ್ಠಿತಿ ‘ಸ್ವರ್ಣ ಕಮಲ’ ಪ್ರಶಸ್ತಿ ಗೆದ್ದಿತ್ತು.  ಈ ಪ್ರಶಸ್ತಿ ಕನ್ನಡಿಗರ ಎದೆಯಲ್ಲಿ ಹೆಮ್ಮೆಯ ಕಂಪನಗಳನ್ನು ಮೂಡಿಸಿತ್ತು. ಇಡೀ ದೇಶದ ಚಿತ್ರ ಜಗತ್ತು ಈ ಯುವ ನಿರ್ದೇಶಕನೆಡೆಗೆ ಕುತೂಹಲದಿಂದ ನೋಡುವಂತೆ ಮಾಡಿತ್ತು.

ಪ್ರಥಮ ಚಿತ್ರಕ್ಕೆ ಸ್ವರ್ಣ ಕಮಲ ಪಡೆದ ನಂತರ ಗೀರಿಶ ಕಾಸರವಳ್ಳಿ ಅವರ ಹಾದಿ ಚಿನ್ನದ ಹಾದಿ. ಅದೊಂದು ಅತ್ಯುತ್ತಮ ಚಿತ್ರ–ಪ್ರಶಸ್ತಿ–ಪುರಸ್ಕಾರಗಳ ಬೆಳ್ಳಿದಾರಿ.

1977ರಲ್ಲಿ ಘಟಶ್ರಾದ್ಧಕ್ಕೆ ಪ್ರಶಸ್ತಿ ಗೆದ್ದ ನಂತರ 1986ರಲ್ಲಿ ‘ತಬರನ ಕಥೆ’ಗೆ, 1997ರಲ್ಲಿ ‘ತಾಯಿ ಸಾಹೇಬ’ ಸಿನಿಮಾಕ್ಕೆ ಮತ್ತೆ 2001ರಲ್ಲಿ ‘ದ್ವೀಪ’ ಸಿನಿಮಾಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಪಡೆದು ಅದ್ವಿತೀಯ ಎನ್ನುವ ಸಾಧನೆ ಮಾಡಿದವರು ಗಿರೀಶ್‌ ಕಾಸರವಳ್ಳಿ.

ಸಿನಿಮಾದ ಅಕಾಡೆಮಿಕ್‌ ಅಧ್ಯಯನದ ಎಲ್ಲಾ ಸೂಕ್ಷ್ಮಗಳನ್ನು ತಿಳಿಯ ಬಯಸುವ, ಅವುಗಳನ್ನು ತಮ್ಮ ಪ್ರತಿಭಾ ವಲಯಕ್ಕೆ ಒಗ್ಗಿಸಿಕೊಂಡು ಸಿನಿಮಾ ಸೃಷ್ಟಿಸುವ ಗೀರಿಶರು ನಮ್ಮ ಚಿತ್ರರಂಗದಲ್ಲರಳಿರುವ ‘ಸ್ವರ್ಣಕಮಲ’.

***
ಬೆಳ್ಳಿಹಜ್ಜೆ ಕಾರ್ಯಕ್ರಮದಲ್ಲಿ ಗಿರೀಶ್‌ ಕಾಸರವಳ್ಳಿ: ಸಂವಾದ ನಿರ್ವಹಣೆ– ನಿರ್ದೇಶಕ ಪಿ. ಶೇಷಾದ್ರಿ, ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕ ಚ. ಹ. ರಘುನಾಥ್‌. ಉಪಸ್ಥಿತಿ– ಎನ್‌. ಎಸ್‌. ಚನ್ನಪ್ಪಗೌಡ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಹೊ. ಶ್ರೀನಿವಾಸಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್‌. ಆರ್. ವಿಶುಕುಮಾರ್‌,  ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ. ಎಸ್. ರಮೇಶ್‌, ಸ್ಥಳ– ಮಹದೇವ ದೇಸಾಯಿ ಸಭಾಂಗಣ, ಗಾಂಧಿ ಭವನ, ಕುಮಾರ ಪಾರ್ಕ್ ರಸ್ತೆ, ಸೋಮವಾರ ಸಂಜೆ 5.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT