ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಅಂತರ್ಜಾಲ: ಫೇಸ್‌ಬುಕ್‌ನಿಂದ ಆನ್‌ಲೈನ್‌ ವೇದಿಕೆ

Last Updated 4 ಮೇ 2015, 10:41 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಕ್ತ ಅಂತರ್ಜಾಲದ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಎಲ್ಲ ಬಗೆಯ ಆನ್‌ಲೈನ್‌ ಅಪ್ಲಿಕೇಷನ್‌ ಡೆವಲಪರ್‌ಗಳಿಗಾಗಿ ಫೇಸ್‌ಬುಕ್‌ ಹೊಸ ಆನ್‌ಲೈನ್‌ ವೇದಿಕೆಯನ್ನು ಪರಿಚಯಿಸಿದೆ.

Internet.org ಆನ್‌ಲೈನ್‌ ವೇದಿಕೆಯ ಸೇವೆಯನ್ನು ಫೇಸ್‌ಬುಕ್‌ ಭಾರತದಲ್ಲಿ ಸೋಮವಾರ ಮುಕ್ತಗೊಳಿಸಿದೆ. ಸದ್ಯ ಈ ವೇದಿಕೆಯಲ್ಲಿ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಮಾತ್ರ ಟೆಲಿಕಾಂ ಸಹಭಾಗಿತ್ವ ಹೊಂದಿರುವ ಭಾರತದ ಏಕೈಕ ಕಂಪೆನಿಯಾಗಿದೆ.

‘ಫೀಚರ್‌ ಫೋನ್‌ ಮತ್ತು ಸ್ಮಾರ್ಟ್‌ಫೋನ್‌ಗಳೆರಡರಲ್ಲೂ ಕಡಿಮೆ ಡೇಟಾ ಬಳಸಿ ಬ್ರೌಸ್‌ ಮಾಡುವಂಥ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗುವ ಅಪ್ಲಿಕೇಷನ್‌ ಡೆವಲಪರ್‌ಗಳಿಗಾಗಿ ಈ ವೇದಿಕೆ ತೆರೆಯಲಾಗಿದೆ’ ಎಂದು Internet.orgನ ಉಪಾಧ್ಯಕ್ಷ ಕ್ರಿಸ್‌ ಡೇನಿಯಲ್ಸ್‌ ತಿಳಿಸಿದ್ದಾರೆ.

‘ಎಲ್ಲರಿಗೂ ಮುಕ್ತ ಅಂತರ್ಜಾಲದ ಉಪಯೋಗ ಸಿಗಬೇಕೆಂಬುದು ಹೊಸ ಆನ್‌ಲೈನ್‌ ವೇದಿಕೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಅಪ್ಲಿಕೇಷನ್‌ ಅಭಿವೃದ್ಧಿಪಡಿಸುವ ಡೆವಲಪರ್‌ಗಳಿಗೆ ಇದೊಂದು ಸೂಕ್ತ ವೇದಿಕೆಯಾಗಲಿದೆ’ ಎಂದು ಡೇನಿಯಲ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT