ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನತಿಟ್ಟು: ದೋಣಿ ವಿಹಾರ ಪುನರಾರಂಭ

Last Updated 13 ಆಗಸ್ಟ್ 2014, 4:44 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ನೀರಿನಮಟ್ಟ ಇಳಿಕೆಯಾ­ಗಿರುವು­ದರಿಂದ ಕೆಆರ್‌ಎಸ್‌ ಜಲಾಶಯದ ತಗ್ಗಿನಲ್ಲಿರುವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ‘ದೋಣಿ ವಿಹಾರ’ ಮಂಗಳವಾರ ಪುನರಾರಂಭ­ವಾಗಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚು ಇದ್ದ ಕಾರಣ ಜುಲೈ 16ರಿಂದ ದೋಣಿ ವಿಹಾರ ಸ್ಥಗಿತಗೊಂಡಿತ್ತು. ಈಗ ಪಕ್ಷಿಧಾಮದಲ್ಲಿರುವ ಎಲ್ಲ ದೋಣಿಗಳು ನದಿಗೆ ಇಳಿದಿವೆ. 2 ಮರದ ದೋಣಿಗಳು ಹಾಗೂ 10 ಫೈಬರ್‌ ದೋಣಿಗಳು ಪಕ್ಷಿಧಾಮ­ದಲ್ಲಿ ವಿಹಾರ ಆರಂಭಿಸಿವೆ. ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ) ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ 27 ದಿನಗಳ ಬಳಿಕ ಮತ್ತೆ ದೋಣಿ ವಿಹಾರವನ್ನು ಶುರು ಮಾಡಲಾಗಿದೆ.

ದೇಶ– ವಿದೇಶಗಳ 250ಕ್ಕೂ ಹೆಚ್ಚು ಪ್ರವಾಸಿಗರು ಮಂಗಳವಾರ ದೋಣಿ ವಿಹಾರದ ಮೂಲಕ ಪಕ್ಷಿ ವೀಕ್ಷಣೆ ಮಾಡಿದ್ದಾರೆ ಎಂದು ರಂಗನ­ತಿಟ್ಟು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮೀಶ್‌ ‘ಪ್ರಜಾವಾಣಿ’ಗೆ  ತಿಳಿಸಿದರು.
ಪಕ್ಷಿಧಾಮದಲ್ಲಿ ಸದ್ಯ ಐಬಿಸ್‌, ಇಗ್ರೆಟ್‌್ಸ, ಕಾರ್ಮೊರೆಂಟ್‌, ಹೆರಾನ್‌ ಮಾತ್ರವಲ್ಲದೆ, ಸ್ನೇಕ್‌ ಬರ್ಡ್‌ನಂತಹ ಅಪರೂಪದ ಪಕ್ಷಿಗಳು ಕಾಣಸಿಗುತ್ತವೆ ಎಂದು ಅವರು ಹೇಳಿದರು.

₨ 10 ಲಕ್ಷ ನಷ್ಟ: ಪಕ್ಷಿಧಾಮದಲ್ಲಿ 27 ದಿನಗಳ ಕಾಲ ದೋಣಿ ವಿಹಾರ ಸ್ಥಗಿತ­ಗೊಂಡಿದ್ದರಿಂದ ಅರಣ್ಯ ಇಲಾಖೆಗೆ ₨ 10 ಲಕ್ಷ ನಷ್ಟ ಉಂಟಾಗಿದೆ. ಹಿಂದಿನ ವರ್ಷ ಕೂಡ ಜುಲೈ  13­ರಿಂದ ಆ. 16­ರವರೆಗೆ ದೋಣಿ ವಿಹಾರ ಸ್ಥಗಿತ­ಗೊಂಡು ₨ 12 ಲಕ್ಷ ನಷ್ಟವಾಗಿತ್ತು ಎಂದು ಲಕ್ಷ್ಮೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT