ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ಮಿ, ವೀಣಾ ಮೊದಲಿಗರು

ಪ್ರಜಾವಾಣಿ ದೀಪಾವಳಿ ಕಥೆ–ಕವಿತೆ ಸ್ಪರ್ಧೆ
Last Updated 10 ಅಕ್ಟೋಬರ್ 2014, 6:27 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯಿಕ ಲೋಕಕ್ಕೆ ಪ್ರತಿ ವರ್ಷವೂ ಹೊಸ ಪ್ರತಿಭೆಗಳನ್ನು ಪರಿ­­ಚಯಿ­ಸುವ ‘ಪ್ರಜಾವಾಣಿ ದೀಪಾ­ವಳಿ ವಿಶೇಷಾಂಕ­–2014’ರ ಕಥಾಸ್ಪರ್ಧೆ – ಕಾವ್ಯಸ್ಪರ್ಧೆಗಳಿಗೆ ಪ್ರತಿ ವರ್ಷದಂತೆ ಈ ಸಲವೂ ಅತ್ಯುತ್ಸಾಹದ ಪ್ರತಿಕ್ರಿಯೆ ವ್ಯಕ್ತ­­ವಾಗಿದ್ದು, ಎರಡೂ ವಿಭಾಗಗಳಲ್ಲಿ ಲೇಖ­­ಕಿಯರ ರಚನೆಗಳೇ ಮುಂಚೂಣಿ­ಯಲ್ಲಿವೆ.

ಕಥಾಸ್ಪರ್ಧೆಯಲ್ಲಿ ಕೆ.ಎಂ. ರಶ್ಮಿ ಅವರ ‘ಅದು’ ಹಾಗೂ ಕಾವ್ಯಸ್ಪರ್ಧೆ­ಯಲ್ಲಿ ವೀಣಾ ಬಡಿಗೇರ್‌ ಅವರ ‘ಈ ಶತ­­­ಮಾನದ ಮಾದರಿ ಹೆಣ್ಣು’ ಮೊದಲ ಬಹುಮಾನ ಪಡೆದಿವೆ.

ಆನಂದ್‌ ಗೋಪಾಲ್‌ ಅವರ ‘ರೂಪ ರೂಪ­ಗಳನು ದಾಟಿ’ ಹಾಗೂ ಅರವಿಂದ ಮಿತ್ರ ಅವರ ‘ಗ್ಯಾಲರಿ’ ಕಥೆಗಳು ಕ್ರಮ­ವಾಗಿ ಎರಡು ಮತ್ತು ಮೂರನೇ ಬಹು­ಮಾನ ಪಡೆದಿವೆ. ಆರ್‌.ಕೆ. ಪ್ರಸಾದ್‌ ಶೆಣೈ ಅವರ ‘ಲೂಲು ಟ್ರಾವೆಲ್ಸ್‌’ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆ­­ದಿದೆ.

ಪ್ರಜ್ಞಾ ಮತ್ತೀಹಳ್ಳಿ (ಆಕಾಶ­ಕ್ಕೊಂದೇ ಮೆಟ್ಟಿಲು), ಕರ್ಕಿ ಕೃಷ್ಣ­ಮೂರ್ತಿ (ಉತ್ಸರ್ಗ), ಕೆ. ಶ್ರೀನಿಧಿ (ಮೂರು ಹಿಡಿ ಅನ್ನ), ಎಸ್‌. ಗಂಗಾ­ಧ­ರಯ್ಯ (ಪದುಮ­ದೊಳಗೆ ಬಿಂದು ಸಿಲುಕಿ) ಹಾಗೂ ಎಚ್‌.ಬಿ. ಇಂದ್ರ­ಕುಮಾರ್‌ (ಸಂಧಿ) ಅವರ ಕಥೆಗಳು ತೀರ್ಪು­ಗಾರರ ಮೆಚ್ಚುಗೆ ಪಡೆದಿವೆ. ವಿಮ­ರ್ಶಕಿ ಎಂ.ಎಸ್‌. ಆಶಾದೇವಿ ಹಾಗೂ ಕಥೆಗಾರ ವಿವೇಕ ಶಾನಭಾಗ ಈ ಸ್ಪರ್ಧೆಯ ತೀರ್ಪುಗಾ­ರರಾಗಿ ಕಾರ್ಯ ನಿರ್ವಹಿಸಿದ್ದರು.


ಕವನ ಸ್ಪರ್ಧೆಯಲ್ಲಿ ಪ್ರಜ್ಞಾ ಮತ್ತೀ­ಹಳ್ಳಿ ಅವರ ‘ತಲೆಮಾರು’ ಹಾಗೂ ಸ್ಮಿತಾ ಮಾಕಳ್ಳಿ ಅವರ ‘ಕತ್ತಲು ಮಾತ­ನಾ­ಡು­ವುದಿಲ್ಲ’ ಕವಿತೆಗಳು ಎರ­ಡನೇ ಮತ್ತು ಮೂರನೇ ಬಹುಮಾನ ಪಡೆ­ದಿವೆ. ವಿದ್ಯಾರ್ಥಿ ವಿಭಾಗದಲ್ಲಿ ಮಹಾಂ­ತೇಶ ಪಾಟೀಲ ಅವರ ‘ಚೂಡಿದಾರದ ಸುತ್ತಲ ಸೂಜಿಗಳು’ ಕವಿತೆಗೆ ಬಹು­ಮಾನ ದೊರೆತಿದೆ. ಪಿ.ಬಿ. ಪ್ರಸನ್ನ (ಮಂಗಳದ ಹಾಡು ಮರೆತಿದ್ದಾರೆ), ರೇಣುಕಾ ನಿಡಗುಂದಿ (ಬಿಟ್ಟು ಹೋದವನು), ಮಾಧವಿ ಭಂಡಾರಿ ಕೆರೆ­ಕೋಣ (ಹೊದ್ಲು ಅರಳುವ ಪರಿ), ವಾಸು­ದೇವ ನಾಡಿಗ್ (ಜಗಕೆ ಅನಾ­ಕ­ರ್ಷ­­ಕನಾಗುವ ಸುಖ) ಹಾಗೂ ಎಂ.ಎಸ್‌. ­ಶೇಖರ್ (ಸವ್ವಾ ಸವಾಲು ಹುಟ್ಟಿದ ದಿನ) ಅವರ ಕವಿತೆಗಳು ತೀರ್ಪು­ಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಹಿರಿಯ ಕವಿಗಳಾದ ಸವಿತಾ ನಾಗ­ಭೂಷಣ ಮತ್ತು ಎಸ್‌. ಮಂಜುನಾಥ್‌ ಈ ಸ್ಪರ್ಧೆಯ ನಿರ್ಣಾಯಕರು.

ಬಹುಮಾನದ ಮೊತ್ತ: ಮೊದಲ ಮೂರು ಸ್ಥಾನ ಪಡೆದ ಕಥೆಗಳು ಕ್ರಮ­ವಾಗಿ ರೂ. 20,000, ರೂ. 15,000 ಹಾಗೂ ರೂ. 10,000 ನಗದು ಬಹು­ಮಾನ ಪಡೆಯಲಿವೆ. ಕವನಸ್ಪರ್ಧೆ ವಿಭಾ­ಗ­­­­ದಲ್ಲಿನ ಮೊದಲ ಮೂರು ಕವಿತೆಗಳಿಗೆ ಕ್ರಮ­ವಾಗಿ ರೂ.5,000, ರೂ. 3,000 ಹಾಗೂ ರೂ. 2,000 ಬಹುಮಾನ ದೊರೆ­ಯಲಿದೆ. ವಿದ್ಯಾರ್ಥಿ ವಿಭಾಗ­ದ­ಲ್ಲಿನ ಬಹುಮಾನಿತ ಕಥೆ – ಕವಿತೆಗಳಿಗೆ ಕ್ರಮವಾಗಿ ರೂ. 5000 ಹಾಗೂ ರೂ. 2000 ಬಹುಮಾನ ದೊರೆಯಲಿದೆ.

ಮಕ್ಕಳ ವರ್ಣಚಿತ್ರ ಸ್ಪರ್ಧೆ: ಎಸ್‌. ಬಂಡೇಶ್ (ಎನ್‌. ಗಣೇಕಲ್, ದೇವ­ದುರ್ಗ), ಮಾರುತಿ ರಾಜಶೇಖರ ಪಾಯ­­ಣ್ಣ­­ವರ (ಹೀರೇಮನವಳ್ಳಿ, ಖಾನಾ­ಪುರ), ಯಶ್ವಿ ಜೆ.ರೈ. (ಶಿವ­ಮೊಗ್ಗ), ಅತುಲ್ಯ ಎಂ. ಪಂಡಿತ್ (ಮೂಡ­ಬಿದರೆ), ಅರ್ಣವ್‌ (ಬೆಂಗ­ಳೂರು), ಆಕಾಶ್‌ (ಮಾನ್ವಿ), ಸನತ್ ರಾಘವ ಯು. (ಕೊಂಬೆಟ್ಟು, ಪುತ್ತೂರು) ಹಾಗೂ ಪ್ರಥಮ್ ಕಾಮತ್‌ (ಕಟ್ಪಾಡಿ, ಉಡುಪಿ) ಅವರ ಚಿತ್ರಗಳು ‘ಮಕ್ಕಳ ವರ್ಣಚಿತ್ರ ಸ್ಪರ್ಧೆ’ಯಲ್ಲಿ ಬಹು­ಮಾನ ಪಡೆದಿವೆ. ಸಂಧ್ಯಾ ಅಣ್ಣಯ್ಯ ಅವರು ಈ ಸ್ಪರ್ಧೆಯ ತೀರ್ಪುಗಾರ­ರಾ­ಗಿದ್ದರು.

ಬಹುಮಾನ ವಿತರಣೆ: ಅಕ್ಟೋಬರ್‌ 18ರ ಶನಿವಾರ ತುಮಕೂರಿನಲ್ಲಿ ಬಹು­ಮಾನ ವಿತರಣಾ ಕಾರ್ಯಕ್ರಮ ನಡೆ­ಯಲಿದೆ. ಹಿರಿಯ ಲೇಖಕ ಡಾ. ಬರ­ಗೂರು ರಾಮ­ಚಂದ್ರಪ್ಪ ಹಾಗೂ ತುಮ­ಕೂರು ವಿಶ್ಚ­ವಿದ್ಯಾ­­ಲ­ಯದ ಕುಲಪತಿ ಡಾ. ರಾಜಾ­ಸಾಬ್‌ ಅವರು ಅತಿಥಿ­ಗಳಾಗಿ ಭಾಗವಹಿ­ಸುವರು.

ತೀರ್ಪುಗಾರರ ಟಿಪ್ಪಣಿಗಳು
‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ಯ ಬಗ್ಗೆ ನಮ್ಮಲ್ಲಿ ಕುತೂ­ಹಲ ಯಾಕೆಂದರೆ, ನಮ್ಮ ಪರಿಸರದ ಬದ­ಲಾಗುತ್ತಿರುವ ಚಲನೆಗಳ, ಗ್ರಹಿಕೆ­ಗಳ ಸುಳಿ­ವು­ಗಳು ಹೊಸ ರೂಪಕಗಳಲ್ಲಿ, ನುಡಿಗಟ್ಟುಗಳಲ್ಲಿ, ಕಥನ ತಂತ್ರಗಳಲ್ಲಿ ಕಾಣಿಸುತ್ತದೆ ಎನ್ನುವ ಕಾರಣಕ್ಕೆ. –ಎಂ.ಎಸ್‌. - -ಆಶಾದೇವಿ

ಈ ಕವಿತೆಗಳ ಓದಿನಿಂದ ಒಂದು ಅಚ್ಚರಿ, ಒಂದು ಸಂತೋಷ ನಿಜವಾ­ಗಿಯೂ ನನಗೆ ದೊರಕಿತು. ಈ ದಿವಸ­ಗಳಲ್ಲಿ ಕವಿತಾ ಪ್ರವಾಹದಲ್ಲಿ ಕಸ–ಕಡ್ಡಿ, ಕೆಲವೊಮ್ಮೆ ಹೆಣಗಳನ್ನೂ ನೋಡಿ ದಿಗಿಲುಗೊಂಡಿದ್ದ ನನಗೆ ಅಪರೂಪದ ಪ್ರೇಮಪುಷ್ಪಗಳನ್ನೂ ನೋಡಿ ಸಂತಸ­ವಾಯಿತು.  – ಸವಿತಾ ನಾಗಭೂಷಣ

ಕೊನೆ ಸುತ್ತಿನಲ್ಲಿ ಓದಿದ ಬಹುತೇಕ ಕಥೆಗಳ ವಸ್ತು­ಗಳು ನಗರ,ಸಣ್ಣ ಪಟ್ಟಣಗಳ ಜೀವ­ನದ ಸುತ್ತ ಇದ್ದವು. ದಲಿತ ಅಥವಾ ಕೆಳವರ್ಗದ ಅನು­­ಭ­ವ­ಗ­ಳನ್ನು ಶೋಧಿ­ಸುವ, ಹಳ್ಳಿಯನ್ನು ಕೇಂದ್ರೀ­ಕ­­ರಿ­ಸಿದ ಕಥೆ­ಗಳು ಕಡಿಮೆ. ಈ ಕಥಾಸ್ಪರ್ಧೆಯ ಇತಿ­ಹಾಸ ಹಾಗೂ ಮಹತ್ವವನ್ನು ಗಮನ­ದಲ್ಲಿಟ್ಟು­ಕೊಂ­ಡಾಗ ಈ ಸಂಗ­ತಿಯು ವಿಚಾರಯೋಗ್ಯ­ವಾಗಿದೆ­ಯೆ­­ನಿಸುತ್ತದೆ.
–ವಿವೇಕ ಶಾನಭಾಗ

ಒಟ್ಟಾರೆ ಈಗ ಕನ್ನಡದಲ್ಲಿ ಬರೆಯುತ್ತಿರುವ ಹೊಸ ಕವಿಗಳು ಅನುಭವ­ವನ್ನು ಆಗಿಸಿಕೊಳ್ಳುವ ಪ್ರಕ್ರಿ­ಯೆಯ ಮತ್ತು ಕವಿತೆಯ ಕಲೆಗಾರಿಕೆಯ ಬಗ್ಗೆ ಹೆಚ್ಚು ಲಕ್ಷ್ಯ ವಹಿಸುತ್ತಿಲ್ಲವೆಂದೇ ನನಗನ್ನಿಸಿತು.
–ಎಸ್‌. ಮಂಜುನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT