ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ

Last Updated 2 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ನೀಡುವ 2012 ಮತ್ತು 2013ನೇ ಸಾಲಿನ ಗೌರವ ಪ್ರಶಸ್ತಿ­ಗಳನ್ನು ಶನಿವಾರ ಘೋಷಿಸಲಾಗಿದೆ.

2012ನೇ ಸಾಲು: ಬಸಪ್ಪ ಕಾಳಪ್ಪ ಕಂಚಗಾರ, ಸುರಪುರ (ಸಗರನಾಡಿನ ಜಾನಪದ ಶೈಲಿ), ಬಿ. ಜಯಮ್ಮ, ಮೈಸೂರು (ಕಾಷ್ಠಶಿಲ್ಪ), ನಾಗಪ್ಪ ಪ್ರಧಾನಿ, ರಾಯಚೂರು (ಸಮಕಾಲೀನ ಶಿಲ್ಪ), ವೈ. ಚಂದ್ರಶೇಖರ ಶಿಲ್ಪಿ, ಗುಲ್ಬರ್ಗ (ಕಾಷ್ಠಶಿಲ್ಪ), ಭೀಮಾ­ಚಾರ್ಯ, ಶಿವಾರಪಟ್ಟಣ, ಕೋಲಾರ (ಶಿಲಾ ಶಿಲ್ಪ).

2013ನೇ ಸಾಲು: ಏಕಪ್ಪ ಆರ್‌. ಚಿತ್ರ­ಗಾರ, ಕಿನ್ನಾಳ, ಕೊಪ್ಪಳ ಜಿಲ್ಲೆ (ಕಿನ್ನಾಳ ಶೈಲಿ ಶಿಲ್ಪ), ಶ್ಯಾಮಲಾ ನಂದೀಶ್‌ ಮತ್ತು ತೇಜೇಂದ್ರ ಸಿಂಗ್‌ ಬೋನಿ, ಬೆಂಗಳೂರು (ಸಮಕಾಲೀನ ಶಿಲ್ಪ), ಗಂಗಾಧರ ಆಚಾರ್ಯ, ಕೆಳಗಿನ ಇಡ­ಗುಂಜಿ, ಉತ್ತರ ಕನ್ನಡ (ರಥ ಶಿಲ್ಪ), ಟಿ. ಶಿವಶಂಕರ್‌, ಚಿತ್ರದುರ್ಗ (ಗೋಪುರ ಶಿಲ್ಪ).

ಪುರಸ್ಕೃತರಿಗೆ ತಲಾ ₨ 10 ಸಾವಿರ ನಗದು, ಸ್ಮರಣಿಕೆ ನೀಡಲಾಗುವುದು. ಪ್ರಶಸ್ತಿ ಪ್ರದಾನದ ದಿನ ಮತ್ತು ಸ್ಥಳ ನಿಗದಿಯಾಗಬೇಕಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್‌ ಎಚ್‌.ವಿ. ಇಂದ್ರಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT