ಬೆಂಗಳೂರು (ಪಿಟಿಐ): ಅತಿ ಕಡಿಮೆ ವೆಚ್ಚದ ಮಂಗಳಯಾನ ನೌಕೆಯು ನಾಳೆಯಿಂದ 22 ದಿನಗಳವರೆಗೆ ಭೂಮಿಯಿಂದ ಸಂಪರ್ಕ ಕಡಿದು ಕೊಳ್ಳಲಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ.

ಭಾರತದ ಮಹತ್ವಾಕಾಂಕ್ಷೆಯ ಈ ಯೋಜನೆ ವಿಶ್ವದ ಗಮನ ಸೆಳೆದಿತ್ತು. ಸೂರ್ಯ ಮತ್ತು ಮಂಗಳ ಗ್ರಹಗಳ ಮಧ್ಯೆ ಭೂಮಿ ಅಡ್ಡ ಬರುವುದರಿಂದ ನೌಕೆ ಸ್ಥಗಿತಗೊಂಡು ಬ್ಲಾಕೌಟ್ ಹಂತವನ್ನು ತಲುಪಲಿದೆ. ಇದರಿಂದ ಭೂಮಿಯಿಂದ ನೌಕೆಗೆ ಸಂಪರ್ಕ ಸಾಧ್ಯವಾಗುವುದಿಲ್ಲ.

ಇದೇ 22ರವರೆಗೂ ನೌಕೆಯು ಬ್ಲಾಕೌಟ್ ವಲಯದಲ್ಲಿರುತ್ತದೆ. ನಂತರ ನೌಕೆಯ ಸಂಪರ್ಕ ಪಡೆಯಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಇದೇ ಮೊದಲ ಬಾರಿಗೆ ನೌಕೆಯು ದೀರ್ಘ ಕಾಲದವರೆಗೆ ಸಂಪರ್ಕ ಕಡಿದುಕೊಳ್ಳಲಿದೆ. ಮುಂದಿನ ವರ್ಷ ಮೇ ತಿಂಗಳಲ್ಲಿ ಮತ್ತೆ ನೌಕೆ ಸಂಪರ್ಕ ಕಡಿದುಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.