ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದಲ್ಲಿ ಗಾಂಧಿ ವಿಚಾರಧಾರೆ ಇರಬೇಕಿತ್ತು

ಹೆಗ್ಗೋಡು: ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಚಿಂತಕ ಆಶೀಶ್‌ ನಂದಿ ಅಭಿಮತ
Last Updated 7 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸಾಗರ: ದೇಶದ ಸಂವಿಧಾನ ಅತ್ಯುತ್ತ­ಮ­­ವಾಗಿ­ದ್ದರೂ, ಅದು ಐರೋಪ್ಯ ಮಾದರಿ­ಯನ್ನೇ ಅನುಸರಿಸಿದೆ. ಈ ನೆಲದ ಗಾಂಧಿ ಹಾಗೂ ಟ್ಯಾಗೋರ್ ಅವರ ವಿಚಾರ­ಧಾರೆಯನ್ನು ಅದು ಒಳಗೊಂಡಿ­ದ್ದರೆ, ಇನ್ನಷ್ಟು ಭಿನ್ನವಾಗಿ­ರುತ್ತಿತ್ತು ಎಂದು ಚಿಂತಕ ಆಶೀಶ್‌ ನಂದಿ ಅಭಿಪ್ರಾ­ಯ­ಪಟ್ಟರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯು­ತ್ತಿ­ರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ‘ಭಾರತೀಯ, ಭಾರತೀ­ಯತೆ, ಭಾರತತ್ವದ ಪರಿಕಲ್ಪನೆ’ ಕುರಿತು ಅವರು ಮಾತನಾಡಿ­ದರು.

ಸದ್ಯಕ್ಕೆ ದೇಶವು ಸಾವರ್ಕರ್ ಪ್ರತಿಪಾದಿಸಿದ ಏಕಾಕೃತಿಯ ರಾಷ್ಟ್ರ­ಪ್ರಭುತ್ವದ ದಾರಿ ಹಿಡಿದಿದೆ ಎಂದೆನಿಸಿ­ದರೂ, ಅಂತಿಮವಾಗಿ ಸಾಮುದಾ­ಯಿಕ ಪ್ರಜ್ಞೆಯು ದೇಶವನ್ನು ಆ ಸ್ವರೂ­ಪಕ್ಕೆ ಕೊಂಡೊಯ್ಯದು ಎಂಬ ವಿಶ್ವಾಸ­ವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಆಧುನಿಕ ಕಾಲಘಟ್ಟದಲ್ಲಿ ರಾಷ್ಟ್ರ­ಪ್ರಭುತ್ವ ಎನ್ನುವುದು ಪ್ರಮುಖವಾ­ಗಿದೆ. ವಸಾಹತು­ಶಾಹಿಯೂ ಇದಕ್ಕೆ ಪೂರಕ­ವಾಗಿದೆ. ಐರೋಪ್ಯ ಮಾದ­ರಿಯ ರಾಷ್ಟ್ರಪ್ರಭುತ್ವದ ಹಿನ್ನೆಲೆಯಲ್ಲಿ ಸಾವರ್ಕರ್, ಗಾಂಧಿ ಅವರನ್ನು ವಿರೋ­ಧಿ­­ಸಿದ್ದರು ಎಂದು ನೆನಪಿಸಿ­ಕೊಂಡರು.

ಭಾರತೀಯ ನಾಗರಿಕತೆ ಮೌಖಿಕ ಪಠ್ಯಗಳನ್ನು ಆಧರಿಸಿದೆ. ದೇಶದ ಐವತ್ತು ವಿಶ್ವವಿದ್ಯಾಲಯಗಳು ಸಂಗೀತ­ದಲ್ಲಿ ಪದವಿ ನೀಡುತ್ತಿದ್ದರೂ, ಇವುಗ­ಳಲ್ಲಿ ಪದವಿ ಪಡೆದವರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿಲ್ಲ ಎನ್ನುವುದೇ ಉದಾಹರಣೆ ಎಂದರು.

ಜೀವನಕ್ರಮದಲ್ಲೇ ವಿಶ್ವಪ್ರಜ್ಞೆ: ಭಾರತೀಯರ ನಿತ್ಯ ಜೀವನ ಕ್ರಮ­ದಲ್ಲೆ ವಿಶ್ವಪ್ರಜ್ಞೆ ಎಂಬುದು ಮಿಳಿತಗೊಂಡಿದೆ. ಅದು ಯೂರೋಪ್‌­ನಿಂದ ಎರವಲು ಪಡೆದ ಪ್ರಜ್ಞೆ ಅಲ್ಲ. ಆಧುನಿಕತೆ­ಗಿಂ­ತಲೂ ಮೊದಲೇ ರೂಪು­ಗೊಂಡ ಸಶಕ್ತವಾದ ವಿಶ್ವಪ್ರಜ್ಞೆ ಎಂದರು.

ಭಾರತತ್ವದ ಪರಿಕಲ್ಪನೆಯನ್ನು ನಿಖ­ರ­ವಾಗಿ ಹೇಳಲು ಪ್ರಯತ್ನ­ಪಟ್ಟಷ್ಟೂ ಅದು ಬೆರಳ ಸಂಧಿಯಿಂದ ಜಾರಿ ಹೋಗು­ತ್ತದೆ. ಅದರ ವ್ಯಾಖ್ಯಾನ ಆ ಕ್ಷಣಕ್ಕೆ ಸರಿ ಅನಿಸಿದರೂ ನಂತರ ಬೇರೆ­ಯದ್ದೇ ಆಗಿರುತ್ತದೆ. ಭಾರತೀಯ ನಾಗರಿಕತೆ ಚಲನಶೀಲಗುಣ ಹೊಂದಿದೆ ಎಂದು ವಿಶ್ಲೇಷಿಸಿದರು.

ದೇಸಿಯ ಮೌಖಿಕ ಪರಂಪರೆ ಯಾವು­­ದನ್ನು ಮರೆಯಬೇಕು, ಯಾವು­ದನ್ನು ಉಳಿಸಿಕೊಳ್ಳಬೇಕು ಎಂಬ ನೀತಿ­ಪ್ರಜ್ಞೆ ಹೊಂದಿದೆ. ನಮ್ಮಲ್ಲಿ­ರುವ ಸಾಮು­ದಾಯಿಕ ಕಲ್ಪನೆ­ಯಿಂ­ದಾಗಿ ವೈರಿಗಳನ್ನು ಎಚ್ಚರದಿಂದ ಆರಿ­ಸುವ ವಿವೇಕವಿದೆ. ದೇಶ ವಿಭಜನೆ ಕಾಲ­ದಲ್ಲಿ ನಡೆದ ತೀವ್ರ ಹಿಂಸೆಯ ಸಂದರ್ಭ­ದಲ್ಲಿದ್ದ ಸಮುದಾಯ ಪ್ರಜ್ಞೆ ಗುಜರಾತ್‌­ನಲ್ಲಿ ನಡೆದ ಕೋಮು ಗಲಭೆಯ ಪರಿಸ್ಥಿತಿಯಲ್ಲಿ ಇಲ್ಲ­ವಾಯ್ತು ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT