ಬೆಂಗಳೂರು: ‘ಮಹಿಳೆಯರ ಸಮಸ್ಯೆ ಗಳಿಗೆ ಧ್ವನಿಗೂಡಿಸಲು ಸದ್ಯದಲ್ಲೇ ಮಹಿಳಾ ಸಮ್ಮೇಳನ ನಡೆಸಲು ಚಿಂತಿಸಲಾಗುತ್ತಿದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ 36ನೇ ವಾರ್ಷಿಕೋತ್ಸವ ಹಾಗೂ ದತ್ತಿ ನಿಧಿ ಬಹುಮಾನಗಳ ವಿತರಣೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಮಾತನಾಡಿದರು.

‘ಮಹಿಳೆಯರ ಸಾಹಿತ್ಯವನ್ನು ಟೀಕಿಸುವುದು ಹಾಗೂ ತೇಜೋವಧೆ ಮಾಡುವುದು ಸರಿಯಲ್ಲ. ಪುರುಷರ ಸಾಹಿತ್ಯದಲ್ಲಿನ ತಪ್ಪುಗಳನ್ನು ಪ್ರಶ್ನಿಸುವ ಮಟ್ಟಕ್ಕೆ ಮಹಿಳಾ ಲೇಖಕಿಯರು ಬೆಳೆದಿರುವುದು ಸಾಂಸ್ಕೃತಿಕ ಬೆಳವಣಿ ಯಾಗಿದೆ. ಆದರೆ, ಇದನ್ನು ಒಪ್ಪದ ವ್ಯವಸ್ಥೆ ಸಾಹಿತ್ಯ, ಪತ್ರಿಕೆಗಳ ಮೂಲಕ ಮಹಿಳೆಯರನ್ನು ಟೀಕಿಸು ವುದು ಸಾಂಸ್ಕೃತಿಕ ದಿವಾಳಿತನ’ ಎಂದರು.

ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಕೆ.ವಿ. ನಾರಾಯಣ, ‘ಮುಂದಿನ ಪೀಳಿಗೆಗಾಗಿ ಲೇಖಕಿಯರು ಬರೆದಿರುವ ಸಾಹಿತ್ಯವನ್ನು ಡಿಜಿಟಲೀಕರಣಗೊಳಿಸಿ ಸಂಗ್ರಹಿಸಿಡಬೇಕು. ಹಿಂದೆ ಮಹಿಳೆ ಯರಿಗೆ ಪ್ರತ್ಯೇಕ ಧ್ವನಿ ಇರಲಿಲ್ಲ. ಗಂಡಸರ ಧ್ವನಿಯಲ್ಲೇ ಬದುಕು ನಡೆಸಬೇಕಾಗಿತ್ತು. ಇಂದು ಕಾಲ ಬದಲಾಗಿದೆ. ತಮ್ಮ ಸಮಸ್ಯೆ ಹಾಗೂ ಸಂವೇದನೆಗಳನ್ನು ಲೇಖನಗಳಿಂದ ಸಮಾಜದ ಮುಂದಿಡಬಹುದಾಗಿದೆ’ ಎಂದು ಮಂಜುಳಾ ಮಾನಸ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.