ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷರ ಆಯ್ಕೆ: ದಲಿತರಿಗೂ ಪ್ರಾತಿನಿಧ್ಯ

‘ಹೊಲೆಯ’ ಪದಕ್ಕೆ ತಪ್ಪು ಅರ್ಥ: ಪುಂಡಲೀಕ ಹಾಲಂಬಿ ಕ್ಷಮೆ ಯಾಚನೆ
Last Updated 12 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ದಲಿತ ಸಾಹಿ­ತ್ಯಕ್ಕೆ ನಾಲ್ಕು ದಶಕದ ಇತಿ­ಹಾಸ­ವಿ­ದ್ದರೂ ಇಂದಿಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇ­ಳನದ ಸರ್ವಾ­­ಧ್ಯಕ್ಷ­ರಾಗಿ ದಲಿತ ಸಾಹಿತಿ­ಯೊಬ್ಬರು ಆಯ್ಕೆ­ಯಾ­ಗಿಲ್ಲ ಏಕೆ?

–ಇಲ್ಲಿನ ಜೆ.ಎಚ್‌. ಪಟೇಲ್‌ ಸಭಾಂಗ­ಣ­ದಲ್ಲಿ ಕನ್ನಡ ಸಾಹಿತ್ಯ ಪರಿ­ಷತ್ತಿನ ಶತಮಾ­ನೋತ್ಸ­ವದ ಅಂಗ­ವಾಗಿ ಭಾನುವಾರ ಹಮ್ಮಿ­ಕೊಂಡಿದ್ದ ದಲಿತ ಸಾಹಿತ್ಯ ಸಮಾ­ವೇಶ­­ದಲ್ಲಿ ಅಧ್ಯಕ್ಷತೆ ವಹಿ­ಸಿದ್ದ ಪರಿ­ಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಪುಂಡ­ಲೀಕ ಹಾಲಂಬಿ ಸೇರಿದಂತೆ ಪಾಲ್ಗೊಂಡಿದ್ದ ಸಭಿಕ­ರಿಗೆ ಈ ಪ್ರಶ್ನೆ ಕಾಡಿತು.

ಕನ್ನಡ ಸಾಹಿತ್ಯ ಪರಿಷತ್‌ ಈಗ ನೂರು ವರ್ಷ ಪೂರೈ­ಸಿದ ಸಂಭ್ರಮ­ದಲ್ಲಿದೆ. ಆದರೆ, ದಲಿತ ಸಾಹಿತ್ಯಾ­ಸ­ಕ್ತರು ಅಥವಾ ದಲಿತ ಸಾಹಿತಿ­ಯೊ­ಬ್ಬರು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆ­­­–ಯಾಗಿಲ್ಲ ಏಕೆ ಎನ್ನುವ ಮತ್ತೊಂದು ಪ್ರಶ್ನೆಗೆ ಸಮಾವೇಶ­ದಲ್ಲಿ ಉತ್ತರ ಹುಡು­ಕಾಟ ನಡೆಯಿತು. ಸಮಾವೇಶದಲ್ಲಿ ಹಾಜರಿದ್ದ ಪ್ರೇಕ್ಷ­­ಕರು, ಸಾಹಿತ್ಯಾ­ಸ­ಕ್ತರು, ಸಾಹಿ­ತಿ­­­ಗಳ ಮನಸ್ಸಿನಲ್ಲಿ ಕಾಡಿದ ಈ ಪ್ರಶ್ನೆ­­­ಗಳಿಗೆ ಉತ್ತರ ನೀಡಲು ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರೇ ಮುಂದಾದರು.

‘ಇಲ್ಲಿಯವರೆಗೆ 80 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆ­ದಿವೆ. ಆದರೆ, ಇಂದಿಗೂ ಪೂರ್ಣ ಪ್ರಮಾಣ­ದಲ್ಲಿ ದಲಿತ ಸಾಹಿತಿ­ಯೊಬ್ಬರು ಸಮ್ಮೇಳ­ನಾ­ಧ್ಯ­ಕ್ಷರಾಗಿ ಆಯ್ಕೆಯಾ­ಗಿಲ್ಲ. ಪರಿಷತ್‌ ಅಧ್ಯಕ್ಷರಾಗಿಯೂ ಆಯ್ಕೆಯಾ­ಗಿಲ್ಲ. ಈ ಕೊರತೆಯನ್ನು ಪರಿಷತ್‌ ತುಂಬಿ­­ಸಲಿದೆ’ ಎಂದು ಹಾಲಂಬಿ ಹೇಳಿ­ದಾಗ ಸಭಿಕರು ಕರತಾ­ಡ­ನದ ಮೂಲಕ ಸ್ವಾಗತಿಸಿದರು.

ಕನ್ನಡ ಸಾಹಿತ್ಯದಲ್ಲಿ ದಲಿತ ಸಾಹಿತಿ­­ಗಳು ಉತ್ಕೃಷ್ಟ­ವಾದ ಸಾಹಿತ್ಯ ರಚಿಸಿದ್ದಾರೆ. ಸಮ್ಮೇಳ­ನಾ­ಧ್ಯ­ಕ್ಷ­­­ರಾಗಲು ಅರ್ಹತೆ ಇರುವ ಹಲವು ದಲಿತ ಸಾಹಿ­ತಿಗಳಿದ್ದಾರೆ. ಕೆಳ­­ವರ್ಗದವರನ್ನು ಸಮಾ­ಜದ ಮುಖ್ಯ­­ವಾಹಿನಿಗೆ ತರುವುದೇ ಪರಿ­ಷತ್ತಿನ ಮುಖ್ಯ ಉದ್ದೇಶವಾಗಿದೆ ಎಂದರು.
ಕ್ಷಮೆಯಾಚನೆ: 2011ರ ಪರಿಷ್ಕೃತ ಕನ್ನಡ ರತ್ನ­ಕೋಶದಲ್ಲಿ ‘ಹೊಲೆಯ’ ಎನ್ನುವ ಪದಕ್ಕೆ ‘ದುಷ್ಟ’ ಎನ್ನುವ ಅರ್ಥವಿದೆ. ಹೊಲೆಯ ಪದ ಒಂದು ಸಮುದಾಯದ ಸೂಚಕ­ವಾಗಿದೆ. ಯಾವುದೋ ಸಂದರ್ಭದಲ್ಲಿ ಈ ತಪ್ಪಾಗಿದೆ. ಇದರಿಂದ ಸಮುದಾ­ಯಕ್ಕೆ ನೋವುಂಟಾಗಿದೆ. ಇದಕ್ಕಾಗಿ ನಾನು ಬೇಷರತ್‌ ಕ್ಷಮೆ ಯಾಚಿಸು­ತ್ತೇನೆ ಎಂದು ಹಾಲಂಬಿ ಹೇಳಿದರು.

ಜತೆಗೆ, ಮುಂದಿನ ಪರಿಷ್ಕೃತ ಮುದ್ರಣದಲ್ಲಿ ಈ ಪದವನ್ನು ಕೈಬಿಡು­ತ್ತೇವೆ ಎಂದು ಸ್ಪಷ್ಟ­ಪಡಿಸಿ­ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಸಮಾವೇಶ ಉದ್ಘಾ­ಟಿ­ಸಿದರು. ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಲೇಖಕಿ ಡಾ.ಲತಾ ರಾಜಶೇಖರ್‌, ಚಾಮರಾಜ­ನಗರ ತಾಲ್ಲೂಕು ಪಂಚಾ­­­ಯಿತಿ ಅಧ್ಯಕ್ಷೆ ಶಶಿಕಲಾ, ನಗರಸಭೆ ಅಧ್ಯಕ್ಷ ಎಸ್‌. ನಂಜುಂಡ­ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT