ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರಹಗಾರರಿಗೆ ಅಪ್ಪಚ್ಚ ಕವಿ ಆದರ್ಶ’

ಸಮಿತಿಯಿಂದ ಅಪ್ಪಚ್ಚ ಕವಿ ಪ್ರತಿಮೆ ಮೆರವಣಿಗೆ
Last Updated 1 ಜುಲೈ 2014, 11:24 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕಲೆ ಮತ್ತು ಸಾಹಿತ್ಯದ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ ಆದರ್ಶ ಸಮಾಜ ನಿರ್ಮಾಣದ  ಕನಸು ಕಂಡಿದ್ದ ಹರದಾಸ ಅಪ್ಪನೆರಂಡ ಅಪ್ಪಚ್ಚ ಕವಿ ಬಗ್ಗೆ ಯುವಜನತೆಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಬಾಳೆಲೆ ಕಾಫಿ ಬೆಳೆಗಾರ ಕಳ್ಳಿಚಂಡ ಪ್ರಕಾಶ್ ಹೇಳಿದರು.

ಸಮೀಪದ ಬಾಳೆಲೆ ವಿಜಯಲಕ್ಷ್ಮೀ ಪದವಿಪೂರ್ವ ಕಾಲೇಜಿನಲ್ಲಿ ವಿರಾಜಪೇಟೆ ಅಪ್ಪಚ್ಚ ಕವಿ ಪ್ರತಿಮೆ ನಿರ್ಮಾಣ ಸಮಿತಿ ಮತ್ತು ತೂಕ್ ಬೊಳಕ್  ಕಲೆ ಕ್ರೀಡಾ ಅಕಾಡೆಮಿ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಅಪ್ಪಚ್ಚಕವಿ ಪ್ರತಿಮೆ ಮೆರವಣಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಅವರು ಮಾತನಾಡಿದರು.

ಓದುವುದಕ್ಕೆ ಆರ್ಥಿಕವಾಗಿ ಬಹಳ ಕಷ್ಟವಿದ್ದ ಸಂದರ್ಭದಲ್ಲಿ ಅಪ್ಪಚ್ಚಕವಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಆದರೂ ತಮ್ಮ ಪರಿಶ್ರಮದ ಮೂಲಕ ಪುರಾಣ ಗ್ರಂಥಗಳನ್ನು ಓದಿ, ಕೇಳಿ ತಿಳಿದುಕೊಂಡಿದ್ದರು. ಕವಿತೆಗಳನ್ನು ರಚಿಸಿ ಹಾಡುತ್ತಿದ್ದರು. ಹೀಗಾಗಿ ಕವಿ ಎಂಬ ಹೆಸರನ್ನು ಗಳಿಸಿಕೊಂಡರು.
ಅಪ್ಪಚ್ಚ ಕವಿಯ ನಡೆ ನುಡಿ ಯುವಜನಾಂಗಕ್ಕೆ ದಾರಿದೀಪವಾಗಬೇಕು. ‘ಅಂಬಿಕೆ ಸುಗಮಾಡು ಈ ಜಗಕೆ’ ಎಂದು ಜಗತ್ತಿಗೆ ಸುಖ ಬಯಸಿದ ಕವಿಯ ಸ್ಮರಣೆ ಅಗತ್ಯ  ಎಂದು ನುಡಿದರು.

ಬಾಳೆಲೆ ಕೊಡವ ಸಮಾಜದ ಅಧ್ಕಕ್ಷ ಮಲಚೀರ್ ಬೋಸ್ ಮಾತನಾಡಿ, ಕವಿಯ ಪ್ರತಿಮೆ ಸ್ಥಾಪನೆ ಮೂಲಕ ಮುಂದಿನ ಪೀಳಿಗೆಗೆ ಕವಿಯ ಪರಿಚಯಕ್ಕೆ  ಅವಕಾಶ  ನೀಡಿದಂತಾಗುತ್ತದೆ. ಜಾತಿಮತ ಭೇದ ಮರೆತು ಎಲ್ಲರೂ ಕೈಜೋಡಿಸಿದಾಗ ಮಾತ್ರ ಪ್ರತಿಮೆ ಅನಾವರಣ ಕಾರ್ಯಕ್ರಮ ಸುಲಭವಾಗಿ ಜರುಗಲಿದೆ ಎಂದು ಹೇಳಿದರು.

ಪ್ರಾಂಶುಪಾಲ ಶ್ರೀಮೂರ್ತಿ , ಮುಕ್ಕಾಟೀರ ಪೊನ್ನಪ್ಪ, ಐನಂಡ ಕಾರ್ಯಪ್ಪ, ಕೋಲತಂಡ ಕುಟ್ಟಪ್ಪ, ಕಳ್ಳೇಂಗಡ ಶಾಂತು ಉತ್ತಯ್ಯ ಮುಂತಾದವರು ಹಾಜರಿದ್ದರು.

ಪ್ರತಿಮೆ ಸ್ಥಾಪನಾ ಸಮಿತಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷೆ ವಹಿಸಿದ್ದರು
.
ನಾಟಿ ವೈದ್ಯ ದೇರಪಂಡ ಗಣಪತಿ ಮತ್ತು ರೇವತಿ ಗಣಪತಿ, ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಕೆ.ಪಿ. ಪೊನ್ನಮ್ಮ  ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT