ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಹುಭಾಷಾ ಕವಿಗೋಷ್ಠಿಗಳು ಹೆಚ್ಚಬೇಕು’

Last Updated 11 ಆಗಸ್ಟ್ 2014, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಸರದಲ್ಲಿನ ಸೂಕ್ಷ್ಮತೆ­ಯನ್ನು ಅವಲೋಕಿಸಿ ಅದನ್ನು ಗ್ರಹಿಸಿದಾಗ ಮಾತ್ರ ಕವಿತೆ ಹುಟ್ಟಲು ಸಾಧ್ಯ’ ಎಂದು ಕವಯತ್ರಿ ಮಮತಾ ಜಿ ಸಾಗರ ಹೇಳಿದರು.

ಪಂಚಮುಖಿ ನಟರ ಸಮೂಹವು ಸೋಮ­­ವಾರ ನಗರದ ರವೀಂದ್ರ ಕಲಾ­ಕ್ಷೇತ್ರ­ದಲ್ಲಿ ಏರ್ಪಡಿಸಿದ್ದ  ‘ಆಮೋದ ರಂಗೋ­ತ್ಸವ’­­ದಲ್ಲಿ ಬಹುಭಾಷಾ ಕವಿಗೋಷ್ಠಿಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕವಿತೆಗಳಿಗೆ ಆರಂಭ ಇರುತ್ತದೆಯೇ ವಿನಾ ಅಂತ್ಯ ಇರುವುದಿಲ್ಲ. ಕವಿತೆಗಳನ್ನು ರಚಿಸು­ವಾಗ ಅದನ್ನು ನಿರೂಪಿಸುವ ಶೈಲಿ  ಉತ್ತಮ­ವಾಗಿದ್ದರೆ ಮಾತ್ರ  ಕಾವ್ಯಪ್ರಿಯರಿಗೆ ಸುಲಭವಾಗಿ  ಗ್ರಹಿ­ಸಲು ಸಾಧ್ಯವಾಗುತ್ತದೆ’ ಎಂದರು. ಕವಿಗೋಷ್ಠಿ­ಯಲ್ಲಿ 11 ಯುವ­ಕವಿ­ಗಳು ವಿವಿಧ ಭಾಷೆ­ಯ ಕವಿತೆ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT