ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಿಗೆ ಜನಪದ ಕತೆ ತಿಳಿಸಿ’

Last Updated 15 ಮಾರ್ಚ್ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಪದ ಮಹಾಕಾವ್ಯ­ದೊಳಗಿನ ರೋಚಕ ಕಥೆಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು ಇಂದಿನ ಅಗತ್ಯ’ ಎಂದು ಕವಿ ಎಚ್‌.ಎಸ್­ವೆಂಕಟೇಶಮೂರ್ತಿ ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಅಂಕಿತ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಕ್ಕಳಿಗೆ ಒಳ್ಳೆಯ ಕಥೆಗಳನ್ನು ಬರೆಯುವವರು ಬಹಳ ಕಡಿಮೆ­ಯಾಗಿದ್ದಾರೆ. ಗದ್ಯದ ಬಗ್ಗೆ ನಮ್ಮ ಲೇಖಕರು ಯಾಕೆ ಈ ರೀತಿಯ ಪಕ್ಷಪಾತ ವಹಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಒಳ್ಳೆಯ ಗದ್ಯ ಬರೆಯುವುದು ಒಂದು ಸವಾಲು ಎನ್ನುವುದೇ ಇದಕ್ಕೆ ಕಾರಣ­ವಿರಬಹುದು’ ಎಂದು ಹೇಳಿದರು.

‘ಮಕ್ಕಳಿಗೆ ಒಳ್ಳೆಯ ಗದ್ಯ ಬರೆಯು­ವುದು ಬಹಳ ಅಗತ್ಯ. ನಮ್ಮಲ್ಲಿ ಅದಕ್ಕೆ ಒಂದು ದೊಡ್ಡ ಪರಂಪರೆಯೇ ಇದೆ. ಮಕ್ಕಳಿಗೆ ಗದ್ಯ ಬರೆಯುವುದು ಬಹಳ ಕಷ್ಟ. ಅದು ಚಿಕ್ಕ, ಚೊಕ್ಕ ಮತ್ತು ಸುಂದರವಾಗಿರಬೇಕು. ಈ ರೀತಿಯಲ್ಲಿ ಪ.ರಾಮಕೃಷ್ಣಶಾಸ್ತ್ರಿ ಅವರು ಉತ್ತಮ ಕಥೆಗಳನ್ನು ಬರೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ತೇಜಸ್ವಿ ಅವರ ಬರವಣಿಗೆಯಿಂದ ಸಾಕಷ್ಟು ಪ್ರಭಾವಿತರಾದ ಕೆ.ಎನ್‌.­ಗಣೇಶಯ್ಯ ಅವರು ವೈಜ್ಞಾನಿಕ, ಪೌರಾಣಿಕ, ಐತಿಹಾಸಿಕ...
ಈ ಎಲ್ಲ ಸಂಗತಿಗಳಲ್ಲಿ ಇರುವ ರೋಚಕತೆಯ ಅಂಶವನ್ನು ಗುರುತಿಸಿ, ಅದು ಸತ್ಯ ಎಂದು ಭಾಸವಾಗುವಂತೆ ಸಂಶೋಧನೆಯ ನೆಲೆಯಲ್ಲಿ ಕೃತಿಗಳನ್ನು ಕಟ್ಟುತ್ತಾರೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ವಿಮರ್ಶಕ ಬೈರಮಂಗಲ ರಾಮೇಗೌಡ, ಸಾಹಿತಿ ಸಂಪಟೂರು ವಿಶ್ವನಾಥ್ ಮತ್ತು ಲೇಖಕರಾದ  ಕೆ.ಎನ್‌.­ಗಣೇಶಯ್ಯ ಮತ್ತು ಪ.ರಾಮಕೃಷ್ಣಶಾಸ್ತ್ರಿ ಉಪಸ್ಥಿತರಿದ್ದರು.

ಬಿಡುಗಡೆಗೊಂಡ ಪುಸ್ತಕಗಳು
* ಡಾ.ಕೆ.ಎನ್‌.ಗಣೇಶಯ್ಯ ಅವರ ಮಿಹಿರಾಕುಲ (ಕಥೆಗಳು) – ₨95 ಭಿನ್ನ–ಬಿಂಬ (ಲೇಖನಗಳು)– ₨80

* ಪ.ರಾಮಕೃಷ್ಣಶಾಸ್ತ್ರಿಯ ಅವರ ಮಣ್ಣಿಗೆ ಮಣ್ಣು (ಮಕ್ಕಳ ಕಥೆಗಳು) – ₨50
* ವಿನಯವಿಲ್ಲದ ವಿದ್ಯೆ (ಮಕ್ಕಳ ಕಥೆಗಳು) – ₨50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT