ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಸ್ಲಿಮರ ಅಭಿವೃದ್ಧಿ; ವರ್ಗಾಧಾರಿತವಾಗಿರಲಿ’

ಜನನುಡಿಯ ವಿಚಾರಗೋಷ್ಠಿಯಲ್ಲಿ ವ್ಯಕ್ತವಾದ ‘ಮುಸ್ಲಿಮರ ತವಕ ತಲ್ಲಣಗಳು’
Last Updated 20 ಡಿಸೆಂಬರ್ 2015, 7:26 IST
ಅಕ್ಷರ ಗಾತ್ರ

ಮಂಗಳೂರು: ಸಮಾಜದಲ್ಲಿ ಹೆಸರು ಹೇಳಿದರೆ ಮುಂದಿನ ವ್ಯಕ್ತಿಯ ಧ್ವನಿ ಯಲ್ಲಿ ಆಗುವ ಏರಿಳಿತ. ಶಾಲಾ–ಕಾಲೇಜುಗಳಲ್ಲಿ ಮಕ್ಕಳಿಗೆ ಧರ್ಮದ ಹೆಸರಿನಲ್ಲಿ ಕೇಳುವ ಪ್ರಶ್ನೆ, ಯಾವುದೇ ಭಯೋತ್ಪಾದನಾ ಘಟನೆ ನಡೆದಾಗ ಮುಸ್ಲಿಮರನ್ನು ಕಟಕಟೆಯಲ್ಲಿಟ್ಟು, ಸಂದೇಹದಿಂದ ನೋಡುವ ಪರಿಪಾಠ ಸೇರಿದಂತೆ ಮುಸ್ಲಿಮರು ಸಮಾಜದಲ್ಲಿ ಎದುರಿಸುತ್ತಿರುವ ತವಕ ತಲ್ಲಣಗಳು ಅಭಿಮತ ಮಂಗಳೂರು ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಜನನುಡಿ ಯಲ್ಲಿ ವ್ಯಕ್ತವಾದವು.

‘ಮುಸ್ಲಿಮರ ತವಕ ತಲ್ಲಣಗಳು’ – ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳು, ‘ಕೆಲ ಮುಸ್ಲಿ ಮರು ವ್ಯಕ್ತಿ ವಿಶ್ವಮಾನವ ಸಂದೇಶವನ್ನು ಅಳವಡಿಸಿಕೊಂಡು ಬಾಳ್ವೆ ನಡೆಸುತ್ತಿರು ತ್ತಾರೆ. ಅದರಂತೆ ಮಕ್ಕಳಿಗೆ ಧರ್ಮದ ನೆರಳು ಬೀಳದಂತೆ ಬೆಳೆಸುತ್ತಿರುತ್ತಾರೆ. ಆದರೆ, ಸಮಾಜ ಆತನನ್ನು ಮುಸಲ್ಮಾನ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೆ, ‘ಮುಸಲ್ಮಾನರ ಸಮಸ್ಯೆಯನ್ನು ದೇಶದ ಸಮಸ್ಯೆ, ಸಂವಿಧಾನದ ಸಮಸ್ಯೆ, ಜಾತ್ಯತೀತದ ಸಮಸ್ಯೆ ಎಂದು ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ಲೇಖಕ ಪೀರ್‌ ಬಾಷಾ ಮಾತನಾಡಿ, ‘ಮುಸಲ್ಮಾನರಲ್ಲಿ ಮೂಲಭೂತವಾದ ಬೆಳೆಯುತ್ತಿದೆ. ಇದರಿಂದ ಹೊರಬರುವ ದಾರಿ ಕಂಡುಕೊಳ್ಳಬೇಕಾಗಿದೆ. ಮುಸ್ಲಿ ಮರು ಇಂದು ಓಲೈಕೆ ರಾಜಕಾರಣ ಮತ್ತು ದ್ವೇಷದ ರಾಜಕಾರಣದಿಂದ ಸಂತ್ರಸ್ತರಾಗಿದ್ದಾರೆ. ಇವರನ್ನು ಮೇಲಕ್ಕೆ ತ್ತಲು ಪ್ರತ್ಯೇಕ ಅವಕಾಶ ಕೊಡದೆ, ಕಾರ್ಮಿಕ, ದಲಿತರಂತೆ ವರ್ಗಾಧಾರಿತ ವಾಗಿ ಅಭಿವೃದ್ಧಿಪಡಿಸಬೇಕಾಗಿದೆ’ ಎಂದು ಹೇಳಿದರು.

ಲೇಖಕ ಕಲೀಮುಲ್ಲಾ ಮಾತನಾಡಿ, ‘ಸಮುದಾಯಗಳನ್ನು ಒಗ್ಗೂಡಿಸುವ ಆಚರಣೆಗಳನ್ನು, ಸಂಸ್ಕೃತಿಯನ್ನು ಒಡೆ ಯಲಾಗುತ್ತಿದೆ. ಅಲ್ಲದೆ, ಮುಸಲ್ಮಾನರು ಸಾಂಸ್ಕೃತಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದಾರೆ. ಅಲ್ಲದೆ, ತಮ್ಮ ಸಮುದಾಯದಲ್ಲಿರುವ ಪ್ರಗತಿಪರರನ್ನು ಬಿಟ್ಟುಕೊಡುತ್ತಿದ್ದಾರೆ. ಬದಲಾಗುತ್ತಿರುವ ಸಮಯದ ಜತೆಜತೆಗೆ ಮದರಸಗಳು ಬದಲಾಗಬೇಕಿದೆ’ ಎಂದು ಹೇಳಿದರು.

ಪತ್ರಕರ್ತ ಕೆ.ರಂಗನಾಥ ಮಾತನಾಡಿ, ‘ಮುಸ್ಲಿಮರಲ್ಲಿ ಅರಿವಿನ ಪರಿಣಾಮದಿಂದ ಉಂಟಾದ ತಳಮಳ ಕಾಡುತ್ತಿದೆ. ವ್ಯಕ್ತಿಯ ಧೋರಣೆ ಏನೇ ಇರಲಿ, ವ್ಯಕ್ತಿಯನ್ನು ಧರ್ಮದಿಂದಲೇ ನೋಡಲಾಗುತ್ತಿದೆ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕತೆ ಹೆಚ್ಚಳವಾಗುತ್ತಿದೆ. ಈ ಪ್ರತ್ಯೇಕತೆಯಿಂದ ಮೂಲಭೂತವಾದ ಮತ್ತು ಭಯೋತ್ಪಾ ದನೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

ಚಿಂತಕ ಮುಜಾಫ್ಫರ್‌ ಅಸ್ಸಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಇಂದಿನ ದಿನಗಳಲ್ಲಿ ಮುಸ್ಲಿಮರ ಸಮಸ್ಯೆಗಳನ್ನು ಸೂಕ್ಷ್ಮ ಸಮಸ್ಯೆಗಳೆಂದು ಪರಿಗಣಿಸಲಾಗು ತ್ತದೆ. ಬಾಬ್ರ ಮಸೀದಿ ಧ್ವಂಸ, ಸಂಸತ್ತಿನ ಮೇಲೆ ದಾಳಿ, ಮುಂಬೈ ನಗರದ ಮೇಲೆ ನಡೆದ ಭಯೋತ್ಪಾದಕ ದಾಳಿ ಸೇರಿದಂತೆ ಇನ್ನಿತರ ಘಟನೆಗಳಿಂದ ಮುಸ್ಲಿಮರಲ್ಲಿ ತಲ್ಲಣಗಳು ವೃದ್ಧಿಯಾಗು ತ್ತಲೇ ಹೋದವು’ ಎಂದು ಹೇಳಿದರು.

‘ಮುಸ್ಲಿಮರು ತಮಗಾಗಿ, ತಮ್ಮ ಹಕ್ಕುಗಳಿಗಾಗಿ ಮಾತನಾಡಲಿಕ್ಕೆ ಸಾಧ್ಯ ವಿದೆಯೇ, ಅದಕ್ಕೆ ಅವಕಾಶ ಇದೆಯೇ. ಇಂತಹ ಅವಕಾಶಗಳು ಬೆಳೆಯಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಚರ್ಚಿಸಬೇಕಾಗಿದೆ’ ಎಂದು ಹೇಳಿದರು. ಬಿ.ಕೆ. ಇಮ್ತಿಯಾಜ್‌ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT