ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಕ್ತ ರಹಿತ’ ಸೈಬರ್‌ ಯುದ್ಧ: ಮೋದಿ ಕಳವಳ

‘ಡಿಜಿಟಲ್‌ ಇಂಡಿಯಾ ಅಭಿಯಾನ’ಕ್ಕೆ ಚಾಲನೆ
Last Updated 1 ಜುಲೈ 2015, 15:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಜಗತ್ತು ಇಂದು ‘ರಕ್ತ ರಹಿತ’ ಸೈಬರ್‌ ಯುದ್ಧದ ಆತಂಕವನ್ನು ಎದುರಿಸುತ್ತಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಡಿಜಿಟಲ್‌ ಇಂಡಿಯಾ ಸಪ್ತಾಹ’ಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಮೋದಿ, ‘ಡಿಜಿಟಲ್‌ ಇಂಡಿಯಾ ಅಭಿಯಾನದಿಂದ ₹ 4.5 ಲಕ್ಷ ಕೋಟಿ ಹೂಡಿಕೆಯ ಜತೆಗೆ 18 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ತಿಳಿಸಿದ್ದಾರೆ.

‘ಸರ್ಕಾರ ಇ- ಆಡಳಿತ, ಎಂ (ಮೊಬೈಲ್‌)- ಆಡಳಿತಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಸರ್ಕಾರದ ಮಾಹಿತಿ ಹಾಗೂ ಸೇವೆ ಕೊನೆಯ ಪ್ರಜೆಗೂ ತಲುಪಬೇಕೆಂಬ ಉದ್ದೇಶದಿಂದ ಡಿಜಿಟಲ್‌ ಇಂಡಿಯಾ ಪರಿಕಲ್ಪನೆ ಜಾರಿಗೆ ತರಲಾಗಿದೆ’ ಎಂದು ಹೇಳಿದ್ದಾರೆ.

‘ಡಿಜಿಟಲ್‌ ಇಂಡಿಯಾ ಅಭಿಯಾನದ ಮೂಲಕ ನಾಳಿನ ಭಾರತ ಮಹತ್ತರ ಬದಲಾವಣೆ ಕಾಣಲಿದೆ. ತಂತ್ರಜ್ಞಾನ ಹಳ್ಳಿ ಹಳ್ಳಿಗೂ ಪಸರಿಸಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT