ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ವಿಲ್ಮರ್‌ ಲಾಭ ಶೇ. 60ರಷ್ಟು ಕುಸಿತ

Published 3 ಮೇ 2023, 16:30 IST
Last Updated 3 ಮೇ 2023, 16:30 IST
ಅಕ್ಷರ ಗಾತ್ರ

ನವದೆಹಲಿ : ಫಾರ್ಚೂನ್‌ ಬ್ರ್ಯಾಂಡ್‌ ಅಡಿಯಲ್ಲಿ ಅಡುಗೆ ಎಣ್ಣೆ ಮಾರಾಟ ಮಾಡುವ ಪ್ರಮುಖ ಕಂಪನಿ ಅದಾನಿ ವಿಲ್ಮರ್‌ನ ನಿವ್ವಳ ಲಾಭವು 2023ರ ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 60ರಷ್ಟು ಇಳಿಕೆ ಕಂಡು ₹ 93.61 ಕೋಟಿಗೆ ತಲುಪಿದೆ.

ಅಡುಗೆ ಎಣ್ಣೆ ದರ ಇಳಿಕೆ ಆಗಿರುವುದರಿಂದ ವರಮಾನವು ಕಡಿಮೆ ಆಗಿದ್ದು, ನಿವ್ವಳ ಲಾಭದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಕಂಪನಿ ಹೇಳಿದೆ.

2022ರ ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ₹ 234 ಕೋಟಿಯಷ್ಟು ಇತ್ತು. ಒಟ್ಟು ವರಮಾನ ₹ 14,979 ಕೋಟಿಯಿಂದ ₹ 13,945 ಕೋಟಿಗೆ ಇಳಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

2022–23ನೇ ಹಣಕಾಸು ವರ್ಷಕ್ಕೆ ನಿವ್ವಳ ಲಾಭ ₹ 803 ಕೋಟಿಯಿಂದ ₹ 582 ಕೋಟಿಗೆ ಇಳಿಕೆ ಆಗಿದೆ. ಆದರೆ, ವರಮಾನವು ₹ 54,327 ಕೋಟಿಯಿಂದ ₹ 58,446 ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT