ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಇ ಷೇರುಮೌಲ್ಯ ಶೇ 13ರಷ್ಟು ಕುಸಿತ

Published 29 ಏಪ್ರಿಲ್ 2024, 16:16 IST
Last Updated 29 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ನವದೆಹಲಿ: ಶುಲ್ಕ ಲೆಕ್ಕಾಚಾರದ ವಿಧಾನದಲ್ಲಿ ಬದಲಾವಣೆ ತರಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸೂಚಿಸಿರುವ ಪರಿಣಾಮವಾಗಿ, ಮುಂಬೈ ವಿನಿಮಯ ಕೇಂದ್ರವು (ಬಿಎಸ್‌ಇ) ಹೆಚ್ಚಿನ ಶುಲ್ಕವನ್ನು ತೆರಬೇಕಾಗಿದೆ.

ಪ್ರೀಮಿಯಂ ಮೌಲ್ಯದ ಬದಲು ನೋಷನಲ್ ಮೌಲ್ಯವನ್ನು ಆಧರಿಸಿ ಶುಲ್ಕವನ್ನು ಲೆಕ್ಕ ಹಾಕಬೇಕು ಎಂದು ಸೆಬಿ ಸೂಚಿಸಿದೆ. ಹಿಂದಿನ ವರ್ಷಗಳಿಗೆ ಅನ್ವಯವಾಗುವ ಹೆಚ್ಚುವರಿ ಮೊತ್ತವನ್ನು ಬಡ್ಡಿಸಹಿತ ಪಾವತಿಸಬೇಕು ಎಂದು ಕೂಡ ಸೆಬಿ ಸೂಚನೆ ನೀಡಿದೆ. ಬಿಎಸ್‌ಇ ಸಿದ್ಧಪಡಿಸಿರುವ ಪ್ರಾಥಮಿಕ ಅಂದಾಜಿನ ಪ್ರಕಾರ, ಅದು ₹165 ಕೋಟಿ ಶುಲ್ಕ ಹಾಗೂ ಅದಕ್ಕೆ ಸಂಬಂಧಿಸಿದ ಜಿಎಸ್‌ಟಿ ಮೊತ್ತ ಪಾವತಿಸಬೇಕಿದೆ.

ಸೆಬಿ ಸೂಚನೆಯ ಪರಿಣಾಮವಾಗಿ ಬಿಎಸ್‌ಇ ಷೇರುಮೌಲ್ಯವು ಸೋಮವಾರದ ದಿನದ ವಹಿವಾಟಿನಲ್ಲಿ ಶೇ 18.64ರವರೆಗೆ ಕುಸಿತ ಕಂಡಿತ್ತು. ದಿನದ ವಹಿವಾಟಿನ ಅಂತ್ಯಕ್ಕೆ, ಷೇರುಮೌಲ್ಯವು ಶೇ 13.31ರಷ್ಟು ಕುಸಿತ ಕಂಡಿದೆ.

ನೋಷನಲ್ ಮೌಲ್ಯ (ಡಿರೈವೇಟಿವ್ಸ್‌ ವಹಿವಾಟಿನ ಆಪ್ಷನ್ ಒಪ್ಪಂದಗಳ ಸ್ವತ್ತಿನ ಒಟ್ಟು ಮೌಲ್ಯ) ಹಾಗೂ ಪ್ರೀಮಿಯಂ ಮೌಲ್ಯದ (ಡಿರೈವೇಟಿವ್ಸ್‌ ವಹಿವಾಟಿನ ಆಪ್ಷನ್ ಒಪ್ಪಂದಗಳ ಸ್ವತ್ತಿನ ಮೇಲೆ ಪಾವತಿಸುವ ಪ್ರೀಮಿಯಂ) ನಡುವೆ ಗಣನೀಯ ವ್ಯತ್ಯಾಸ ಇರುವ ಕಾರಣ, ಬಿಎಸ್‌ಇ ಪಾವತಿಸಬೇಕಿರುವ ಶುಲ್ಕದ ಮೊತ್ತವು ಹೆಚ್ಚಾಗುವ ನಿರೀಕ್ಷೆ ಇದೆ.

ಡಿರೈವೇಟಿವ್ಸ್‌ ಒಪ್ಪಂದಗಳ ವಹಿವಾಟಿಗೆ ಅವಕಾಶ ಕಲ್ಪಿಸಿದಾಗಿನಿಂದ ಬಿಎಸ್‌ಇ, ಶುಲ್ಕಗಳನ್ನು ನೋಷನಲ್ ಮೌಲ್ಯದ ಬದಲು ಪ್ರೀಮಿಯಂ ಮೌಲ್ಯ ಆಧರಿಸಿ ಲೆಕ್ಕಹಾಕುತ್ತಿದೆ ಎಂದು ಸೆಬಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT