ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಸಾವಿನಲ್ಲೂ ಒಂದಾದ ಸಹೋದರಿಯರು

Published 3 ಮೇ 2024, 16:14 IST
Last Updated 3 ಮೇ 2024, 16:14 IST
ಅಕ್ಷರ ಗಾತ್ರ

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಒಂದೇ ತಾಯಿಯ ಪುತ್ರಿಯರು, ಹುಟ್ಟೂರಿನಲ್ಲಿ ಒಂದೇ ವ್ಯಕ್ತಿಯನ್ನು ವಿವಾಹವಾಗಿ ಬದುಕಿನಲ್ಲೂ ಒಂದಾಗಿದ್ದ ಸಹೋದರಿಯರಿಬ್ಬರೂ ಒಂದೇ ದಿನ ಮೃತರಾಗಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ತಾಲ್ಲೂಕಿನ ತುಂಗಳ ಗ್ರಾಮದಲ್ಲಿ ಬುಧವಾರ ನಡೆದಿದೆ.

ಅಕ್ಕ ಕಿಟ್ಟವ್ವ ಹನಮಂತ ಗೊಲಬಾವಿ(90) ಹಾಗೂ ತಂಗಿ ಕಾಶಿಬಾಯಿ ಹಣಮಂತ ಗೊಲಬಾವಿ(84) ಸಾವಿನಲ್ಲೂ ಒಂದಾದ ಸಹೋದರಿಯರು. ಸಹೋದರಿಯರಿಬ್ಬರೂ ತುಂಗಳ ಗ್ರಾಮದ ರಾಮಪ್ಪ-ಅವ್ವಕ್ಕ ಬೂದಿ ದಂಪತಿಯ ಮಕ್ಕಳು.

ಸಹೋದರಿಯರಿಬ್ಬರೂ ತುಂಗಳ ಗ್ರಾಮದ ಹನಮಂತ ಗೊಲಬಾವಿ ಅವರನ್ನು ಒಂದೇ ದಿನ ಒಂದೇ ಮಂಟಪದಲ್ಲಿ ವಿವಾಹವಾಗಿದ್ದರು. ಕಿಟ್ಟವ್ವ ಅವರಿಗೆ ಒಬ್ಬ ಪುತ್ರ ಹಾಗೂ ಕಾಶಿಬಾಯಿ ಅವರಿಗೆ ನಾಲ್ವರು ಪುತ್ರಿಯರು ಇದ್ದಾರೆ. ಕೆಲವು ವರ್ಷಗಳ ಹಿಂದೆ ಅವರ ಪತಿ ಹಣಮಂತ ನಿಧನರಾಗಿದ್ದಾರೆ.

ಇಳಿವಯಸ್ಸಿನಲ್ಲಿ ಕಾಶಿಬಾಯಿ ಜಮಖಂಡಿಯಲ್ಲಿ ತಮ್ಮ ಮಗಳ ಮನೆಯಲ್ಲಿ ನೆಲೆಸಿದ್ದರು. ಕಿಟ್ಟವ್ವ ಮುಧೋಳ ತಾಲ್ಲೂಕಿನ ರಂಜನಗಿ ಗ್ರಾಮದಲ್ಲಿ ತಮ್ಮ ಮಗನ ಮನೆಯಲ್ಲಿ ನೆಲೆಸಿದ್ದರು. ಇಬ್ಬರೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು 15 ದಿನಗಳಿಂದ ಅವರಿಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಬುಧವಾರ ಬೆಳಿಗ್ಗೆ 7ಕ್ಕೆ ಕಾಶಿಬಾಯಿ ಹಾಗೂ ಬೆಳಿಗ್ಗೆ 9.30ಕ್ಕೆ ಕಿಟ್ಟವ್ವ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ತುಂಗಳ ಗ್ರಾಮದಲ್ಲಿ ಬುಧವಾರ ಸಂಜೆ ನೆರವೇರಿದೆ.

ಕಾಶಿಬಾಯಿ
ಕಾಶಿಬಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT