ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದ ಬಟ್ಟೆಗಳ ಗುಡಿಸಲು ವಾಸ!

ಜನಪ್ರತಿನಿಧಿಗಳಿಗೆ ನೆನಪಾಗುವುದು ಚುನಾವಣೆಯಲ್ಲಿ ಮಾತ್ರ: ಆರೋಪ
Last Updated 12 ಅಕ್ಟೋಬರ್ 2016, 9:41 IST
ಅಕ್ಷರ ಗಾತ್ರ

ಬಾಗಲಕೋಟೆ: ವಿದ್ಯುತ್ ಸಂಪರ್ಕ ಇಲ್ಲ. ಸರಿಯಾದ ಕುಡಿಯುವ ನೀರು ಇಲ್ಲ. ಮಳೆ ಬಂದರೆ ಗುಡಿಸಲಿಗೆ ನುಗ್ಗುವ ನೀರು. ಸೀರೆ ಕಟ್ಟಿಕೊಂಡು ಸ್ನಾನ ಮಾಡ ಬೇಕಾದ ಪರಿಸ್ಥಿತಿ.. ಇದು ನಗರದ ರೈಲು ನಿಲ್ದಾಣದ ಹತ್ತಿರದಲ್ಲಿರುವ ಗೊಂದಳಿ, ಮುಸ್ಲಿಂ, ಬುಡ್ಗಾ, ಬುಟ್ಟಿ ಹೆಣೆಯುವ ಕುಟುಂಬಗಳ ದುಸ್ಥಿತಿ.

ಕಳೆದ ಮೂವತ್ತರಿಂದ ನಲವತ್ತು ವರ್ಷಗಳಿಂದ ನಗರದ ವಿವಿಧ ಭಾಗ ಗಳಲ್ಲಿ ಗುಂಪು ಗುಂಪಾಗಿ ವಾಸಿಸುವ ಗೊಂದಳಿ, ಬುಟ್ಟಿ ಹೆಣೆಯುವ ಕುಟುಂಬ ಗಳ ಜನರೇ ಇಲ್ಲಿ ವಾಸವಾಗಿದ್ದಾರೆ. ಮನೆ ಕಟ್ಟಿಸಿ ಕೊಡಿ ಎಂದು ಸುಮಾರು ಸಲ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಲ್ಲಿವರಿಗೂ ಅವರಿಗೆ ಸೂರಿನ ಭಾಗ್ಯ ದೊರೆಯದೆ ಇರುವುದು ದುರ್ದೈವದ ಸಂಗತಿ.

ಅವರಿಗೆ ಚುನಾವಣೆ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್, ಆಧಾರ ಕಾರ್ಡ್‌ಗಳು ಎಲ್ಲವೂ ನಮ್ಮಲ್ಲಿವೆ. ಪ್ರತಿ ಭಾರಿ ಚುನಾವಣೆ ಬಂದಾಗ ಮಾತ್ರ ಎಲ್ಲ ಪಕ್ಷದ ಜನಪ್ರತಿನಿಧಿಗಳು ನಮ್ಮ ಗುಡಿಸ ಲಿಗೆ ಕಡೆಗೆ ಬಂದು ಮತ ಹಾಕಿಸಿ ಕೊಳ್ಳುತ್ತಾರೆ. ಮುಂದೆ ನಮ್ಮನ್ನು ಮರೆತು ಬಿಡುತ್ತಿದ್ದಾರೆ ಎಂದು ದೂರುತ್ತಾರೆ.

ಇಲ್ಲಿನ ಜನರಿಗೆ ಹೊರ ಪ್ರಪಂಚದ ಜ್ಞಾನ ಅಷ್ಟಾಗಿ ಗೊತ್ತಿಲ್ಲ. ಹಗಲುವೇಷ ಹಾಕುವುದು, ಕೌದಿ ಹೊಲೆಯುವುದು, ಬುಟ್ಟಿ ಎಣೆಯುವುದು, ವ್ಯಾಪಾರ ಮಾಡುವುದು, ಜಾತ್ರೆ, ಹಬ್ಬಗಳಲ್ಲಿ ಸಣ್ಣಪುಟ್ಟ ಆಟಿಕೆ ಸಾಮಾನುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಕುಟುಂಬದ ಜೀವನ ನಡಿಸುತ್ತೇವೆ ಎಂದು ಸುರೇಶ ನಾಯ್ಕಲ್ ಹೇಳುತ್ತಾರೆ.

20ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿವೆ. ಇವರು ಬಿದಿರಿನ ಕಟ್ಟಿಗೆಗೆ ಸೀರೆ ಮತ್ತು ಕೌದಿಯ ಬಟ್ಟೆಯನ್ನು ಕಟ್ಟಿಕೊಂಡು ಗುಡಿಸಲು ಕಟ್ಟಿಕೊಂಡಿ ದ್ದಾರೆ. ಕುಡಿಯುವ ನೀರಿಗಾಗಿ ದಿನನಿತ್ಯ ಅಲೆದಾಡುತ್ತಿರುವುದು ಸರ್ವೇ ಸಾಮಾನ್ಯ. ಈ ಸ್ಥಳವು ರೈಲು ನಿಲ್ದಾಣ ಸಮೀಪ ಇರುವುದರಿಂದ ರೈಲು ಸಪ್ಪಳದಲ್ಲೆ ದಿನ ಕಳೆಯುತ್ತಿದ್ದಾರೆ. ತಗ್ಗು ಪ್ರದೇಶ, ಆಗಾಗ ಮಳೆ ಬಂದರೆ ಸಾಕು. ಗುಡಿಸಲಿಗೆ ನೀರು ನುಗ್ಗಿದರೆ ಮಕ್ಕಳು ಮತ್ತು ಪಾಲಕರು ಜಾಗರಣೆ ಮಾಡುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಇದೆ ಎಂದರು.

ಹರಿದ ಸೀರಿಯೇ ಸ್ನಾನಕ್ಕೆ ಆಸರೆ: ಈ ಕುಟುಂಬದ ಸದಸ್ಯರ ಸ್ನಾನ ಮಾಡಲು ಆಸರೆಯಾಗಿರುವುದು ಹರಿದ ಸೀರೆಗಳು. ಸಣ್ಣ ಜಾಗದಲ್ಲಿ ನಾಲ್ಕು ಸೀರೆಗಳನ್ನು ಕಟ್ಟಿ, ಅದರಲ್ಲಿಯೇ ಸ್ನಾನ ಮಾಡುತ್ತಾರೆ. ರೈಲು ಇಳಿದು ಇಲ್ಲಿಯೇ ಜನರು ಬರು ವುದನ್ನು ನೋಡಿ ಮುಜಗುರವಾಗುತ್ತೆ ಆದರೆ, ಅನಿವಾರ್ಯ ಎಂದು ಒಲ್ಲದ ಮನಸ್ಸಿನಿಂದ ಹೇಳುತ್ತಾರೆ ಶೋಭಾ ಶಿಂಧೆ.

ಮಕ್ಕಳಿಗೆ ರೈಲು ಹಳಿಯೇ ಆಟದ ಮೈದಾನ: ಕುಟುಂಬ ಸದಸ್ಯರು ಬೆಳಿಗ್ಗೆ ಎದ್ದು ತಮ್ಮ ತಮ್ಮ ಕೆಲಸಕ್ಕೆ ಹೋಗು ತ್ತಾರೆ. ಆದರೆ, ಸಣ್ಣ ಮಕ್ಕಳಲ್ಲಿ ಕೆಲವು ಮಕ್ಕಳು ಶಾಲೆಗೆ ಹೋಗುತ್ತಾರೆ. ಇನ್ನುಳಿದ ಮಕ್ಕಳನ್ನು ಗುಡಿಸಲಿನಲ್ಲಿ ಬಿಟ್ಟು ಪಾಲಕರು ಹೋಗುತ್ತಾರೆ. ಆದರೆ, ಮಕ್ಕಳು ರೈಲು ಹಳಿಗಳ ಮೇಲೆ ದಿನ ನಿತ್ಯ ಆಟವಾಡುತ್ತಿರುವುದು ಸಾಮಾನ್ಯ. ಪಾಲಕರು ಮನೆಗೆ ಬಂದಾಗ ಅವರೊಂದಿಗೆ ನಲಿಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT