ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಗಣಪನ ತಯಾರಿ ಜೋರು!

Last Updated 11 ಆಗಸ್ಟ್ 2018, 17:20 IST
ಅಕ್ಷರ ಗಾತ್ರ

ಸಂಡೂರು: ಗಣೇಶ ಚತುರ್ಥಿಗೆ ಪರಿಸರಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳ ತಯಾರಿ ಒಂದು ತಿಂಗಳ ಮುಂಚೆಯೇ ಭರದಿಂದ ನಡೆದಿದೆ.

ಗಣೇಶನ ಮೂರ್ತಿಗಳು ಗಲ್ಲಿಗಳಲ್ಲಿ, ಮನೆ–ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳಲು ಇನ್ನೊಂದು ತಿಂಗಳು ಬಾಕಿ ಇದೆ. ಅದಕ್ಕಾಗಿಯೇಮ ಗಣೇಶ ಮೂರ್ತಿಗಳ ತಯಾರಕರು ತಮ್ಮ ಇತರೆ ಕೆಲಸಗಳನ್ನು ಬದಿಗೊತ್ತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪಟ್ಟಣದ ಮೇನ್ ಬಜಾರಿನ ನಿವಾಸಿ ಸುಂದರಕೃಷ್ಣ ಅವರ ಮನೆಯ ಆವರಣಲ್ಲಿ ಈಗ ಗಣಪನ ಮೂರ್ತಿಗಳು ಮೈದಾಳುತ್ತಿವೆ. ಅವರು ಹಿಟ್ಟಿನ ಗಿರಣಿ ನಡೆಸುತ್ತಿದ್ದರೂ, ಅದನ್ನು ಬದಿಗಿಟ್ಟು, ನೂರಾರು ಮೂರ್ತಿಗಳನ್ನು ತಯಾರಿಸಲು ಆರಂಭಿಸಿದ್ದಾರೆ.

ಮಣ್ಣಿನ ಗಣಪ: ಪಿಒಪಿ ಮೂರ್ತಿಗಳ ತಯಾರಿ ಮತ್ತು ಮಾರಾಟ ನಿಷೇಧವಾಗಿರುವುದರಿಂದ ಮಣ್ಣಿನ ಮೂರ್ತಿಗಳ ತಯಾರಿಕೆಗೆ ಈ ಬಾರಿ ಹೆಚ್ಚಿನ ಒತ್ತಡವೂ ಉಂಟಾಗಿದೆ.

ಇತರೆಡೆಯಿಂದ ಪಿಓಪಿ ಮೂರ್ತಿಗಳನ್ನು ಖರೀದಿಸಿ ತಂದು ಮಾರುತ್ತಿದ್ದವರೂ ಮಣ್ಣಿನ ಮೂರ್ತಿಗಳತ್ತ ಮುಖ ಮಾಡಿದ್ದಾರೆ. ‘ಈ ವರ್ಷ ಪಿಒಪಿ ಗಣೇಶ ಮೂರ್ತಿಗಳ ನಿಷೇಧದಿಂದ ನಿಜವಾದ ಕಲಾವಿದರಿಗೆ ಬೆಲೆ ಬಂದಂತಾಗಿದೆ. ಮೂರ್ತಿಗಳನ್ನು ತಯಾರಿಸುವವರೇ ಮಾರಾಟ ಮಾಡಲು ಅನುಕೂಲವಾಗಿದೆ’ ಎಂಬುದು ಸುಂದರಕೃಷ್ಣ ಅವರ ಸಮಾಧಾನದ ನುಡಿ.

‘ಪಿಒಪಿ ಮೂರ್ತಿಗಳ ಮಾರಾಟಗಾರರ ಪೈಪೋಟಿಯಿಂದಾಗಿ ಮಣ್ಣಿನ ಮೂರ್ತಿಗಳ ಜೊತೆಗೆ ಪಿಒಪಿ ಮೂರ್ತಿಗಳನ್ನೂ ಮಾರುವುದು ಅನಿವಾರ್ಯವಾಗಿತ್ತು. ಈಗ ಅಂಥ ಸನ್ನಿವೇಶವಿಲ್ಲ’ ಎಂದು ಹರ್ಷ ವ್ಯಕ್ತಪಡಿಸಿದರು.

ಈಗಾಗಲೇ ನೂರಾರು ಮೂರ್ತಿಗಳನ್ನು ಸಿದ್ಧಗೊಳಿಸಿರುವ ಅವರು ಹಗಲಿರುಳೆನ್ನದೆ ಮೂರ್ತಿಗಳ ತಯಾರಿಯಲ್ಲಿ ತೊಡಗಿದ್ದಾರೆ. ಒಂದು ಅಡಿಯಿಂದ 7-8 ಅಡಿ ಎತ್ತರದವರೆಗಿನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

‘ಮಣ್ಣಿನ ಮೂರ್ತಿಗಳು ಭಾರ ಇರುವುದರಿಂದ, 3-4 ಅಡಿಯ ಮೂರ್ತಿಗಳನ್ನೇ ಹೆಚ್ಚಾಗಿ ತಯಾರಿಸುತ್ತಿದ್ದೇವೆ’ ಎಂದರು.

ಮೂರ್ತಿ ತಯಾರಿಸುವುದನ್ನು ಅವರಿಗೆ ಹೇಳಿಕೊಟ್ಟ ತಾಯಿ ಮಂಜುಳಾದೇವಿ ಹಾಗೂ ಕುಟುಂಬದ ಸದಸ್ಯರು ಅವರೊಂದಿಗೆ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT