ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಶೌಚಗೃಹದ ಮುಂದೆ ವಿದ್ಯಾರ್ಥಿಗಳ ಸರತಿ ಸಾಲು

Published 4 ಜನವರಿ 2024, 4:55 IST
Last Updated 4 ಜನವರಿ 2024, 4:55 IST
ಅಕ್ಷರ ಗಾತ್ರ

ಬೆಳಗಾವಿ: ಮರಾಠಿ ಭಾಷಿಕರ ಪ್ರಾಬಲ್ಯವಿರುವ ತಾಲ್ಲೂಕಿನ ಕಂಗ್ರಾಳಿ ಖುರ್ದ್‌ನಲ್ಲಿ 1986ರಲ್ಲಿ ಸ್ಥಾಪಿತ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿದೆ. ಆದರೆ, ಶೌಚಾಲಯದ ಕೊರತೆ ಇದೆ. ವಿದ್ಯಾರ್ಥಿಗಳು ಶೌಚಗೃಹದ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ.

ಇಲ್ಲಿ ಕನ್ನಡ ಶಾಲೆ ಸ್ಥಾಪನೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಪ್ರಬಲ ವಿರೋಧವಿತ್ತು. ಆದರೆ, ಕನ್ನಡಿಗರ ಹೋರಾಟದ ಫಲವಾಗಿ ಆರಂಭಗೊಂಡ ಶಾಲೆ ಇಂದಿಗೂ ಸಮಸ್ಯೆಗಳಿವೆ.

354 ವಿದ್ಯಾರ್ಥಿಗಳು: ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ 354 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಪೈಕಿ ಬಾಲಕಿಯರೇ ಹೆಚ್ಚಿದ್ದಾರೆ. ಕಲಿಕೆಗೆ ಪೂರಕವಾಗಿ 10 ಶಿಕ್ಷಕರು ಮತ್ತು 16 ಕೊಠಡಿಗಳಿವೆ. ಸುಸಜ್ಜಿತ ಪ್ರಯೋಗಾಲಯ, ಕಂಪ್ಯೂಟರ್‌ಗಳು ಮತ್ತು ಪ್ರೊಜೆಕ್ಟರ್‌ ಒಳಗೊಂಡ ಸ್ಮಾರ್ಟ್‌ಕ್ಲಾಸ್‌ ಇದೆ.

ಮೂರು ವರ್ಷದ ಹಿಂದೆ ಕನ್ನಡ ಶಾಲೆಯಲ್ಲಿ 315 ಮಕ್ಕಳಿದ್ದರು. ಈ ಆ ಸಂಖ್ಯೆ 354ಕ್ಕೆ ಏರಿಕೆಯಾಗಿದೆ. ಕನ್ನಡಿಗರೊಂದಿಗೆ ಮರಾಠಿಗರ ಮಕ್ಕಳೂ ಕನ್ನಡ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಈ ಶಾಲೆಯನ್ನು ಉನ್ನತೀಕರಿಸಿದ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಯೂ ಇದೆ.

‘ನಮ್ಮಲ್ಲಿ ಒಂದು ಶೌಚಗೃಹವಿದ್ದು, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಬ್ಲಾಕ್‌ಗಳಿವೆ. ಅವು ವಿದ್ಯಾರ್ಥಿಗಳಿಗೆ ಸಾಲುತ್ತಿಲ್ಲ. ಹಾಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಕೆಲ ಮಕ್ಕಳು ಮೂತ್ರ ವಿಸರ್ಜನೆಗಾಗಿ ಬಯಲಿನತ್ತ ಹೋಗುತ್ತಿದ್ದಾರೆ’ ಎಂದು ಶಿಕ್ಷಕರು ಹೇಳುತ್ತಾರೆ.

‘ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪ ಸೂಚನೆ ಮೇರೆಗೆ ಹೋರಾಟ ಮಾಡಿ ಈ ಶಾಲೆ ಆರಂಭಿಸಿದ್ದೆವು. ಇದಕ್ಕೆ ಅಗತ್ಯ ಸೌಕರ್ಯ ಕಲ್ಪಿಸಿ, ಸರ್ಕಾರ ಗಡಿಯಲ್ಲಿ ಕನ್ನಡ ಶಾಲೆಯನ್ನು ಪೋಷಿಸಬೇಕು’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.

ಶೌಚಗೃಹಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಇನ್ನೆರಡು ಶೌಚಗೃಹ ನಿರ್ಮಿಸಿಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದೇವೆ
–ಎಂ.ಎಸ್.ಅಥಣಿ, ಮುಖ್ಯಶಿಕ್ಷಕ
ಇನ್ನೆರಡು ಶೌಚಗೃಹ ನಿರ್ಮಿಸುವಂತೆ ವಿದ್ಯಾರ್ಥಿಗಳ ಬೇಡಿಕೆಯಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
–ರಾಜೇಶ ಧನವಾಡಕರ, ಕಾರ್ಯನಿರ್ವಾಹಕ ಅಧಿಕಾರಿ ಬೆಳಗಾವಿ ತಾ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT