ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಡುವೆ ಗುಂಡಿ, ಮಾಲಿನ್ಯದ ಮಡಿಲು

ವಾರ್ಡ್‌ 23, 24: ಜನಜೀವನ ಅಸ್ತವ್ಯವಸ್ಥ
Last Updated 11 ಆಗಸ್ಟ್ 2018, 17:27 IST
ಅಕ್ಷರ ಗಾತ್ರ

ಬೆಳಗಾವಿ: ವಾರ್ಡ್‌ ನಂಬರ್‌23 ಮತ್ತು 24 ರ ವ್ಯಾಪ್ತಿಯ ಹಳೆಬೆಳಗಾವಿಯ ಖಾಸಭಾಗ, ಹೊಸೂರು, ಶಹಪುರಗಳಲ್ಲಿ ಮಳೆಗಾಲದೊಂದಿಗೆ ಆರಂಭವಾದ ಸಮಸ್ಯೆಗಳು ಈಗ ಜನಜೀವನ ಅಸ್ತವ್ಯಸ್ತಗೊಳಿಸಿವೆ. ಹದಗೆಟ್ಟ ರಸ್ತೆಗಳು ಸುಗಮ ಸಂಚಾರಕ್ಕೆ ಸಂಚಕಾರ ನೀಡಿವೆ.ಮಾಲಿನ್ಯ ಹಾಗೂ ಕೊಳಚೆ ನೀರು ಆರೋಗ್ಯವನ್ನು ಹದಗೆಡಿಸಿವೆ. ಓಂನಗರ, ಶೃಂಗೇರಿ ಕಾಲೊನಿ, ಬಸವೇಶ್ವರ ವೃತ್ತ, ನಾರ್ವೇಕರ ಗಲ್ಲಿ, ಶಿಕ್ಷಕರ ಕಾಲೊನಿ, ಗಾಡೆ ಮಾರ್ಗ, ಸಂಭಾಜಿ ಗಲ್ಲಿ, ಉಪ್ಪಾರ ಗಲ್ಲಿ, ವರ್ದಪ್ಪ ಗಲ್ಲಿ ಸೇರಿ ಈ ಭಾಗದಬಹುತೇಕ ಗಲ್ಲಿಗಳಲ್ಲಿ ಅನಾರೋಗ್ಯಕರ ಸ್ಥಿತಿಗೆ ಜನ ಬೇಸತ್ತಿದ್ದಾರೆ.

ಹಳೆ ಪಿಬಿ ರಸ್ತೆಯ ಹಿಂದ್‌ಎಂಜಿನಿಯರಿಂಗ್‌ ಕಾರ್ಖಾನೆಬಳಿ ಇರುವ ತೆರೆದ ದೊಡ್ಡ ಚರಂಡಿ ಎರಡೂ ಬದಿಗಿನ ಜನಜೀವನಕ್ಕೆ ಮಾರಕವಾಗಿದೆ.ದುರ್ನಾತ, ಕೊಳೆದ ತ್ಯಾಜ್ಯಗಳಿಂದಾಗಿ ಈ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಈಗ ಸಾಮಾನ್ಯವಾಗಿವೆ. ಪ್ರತಿ ಮನೆಗಳಲ್ಲಿ ಒಂದಿಬ್ಬರಾರೂ ಡೆಂಗಿ, ಚಿಕುನ್‌ ಗುನ್ಯಾ, ಕಾಲರಾಗಳ ಜತೆಗೆಅನಿರೀಕ್ಷಿತ ಕಾಡುವ ಜ್ವರಭಾದೆಗಳಿಂದ ನಿತ್ಯಮೆಡಿಸಿನ್‌ ಇಲ್ಲದೇ ಬದುಕೇ ಇಲ್ಲ ಎನ್ನುವ ಸ್ಥಿತಿ ಅನುಭವಿಸುತ್ತಿದ್ದಾರೆ.

ಈ ಭಾಗದಲ್ಲಿ ಇಂಥ ಅನಾರೋಗ್ಯಕರ ಸನ್ನಿವೇಶ ಸಾಮಾನ್ಯ. ಅದಕ್ಕಾಗಿಯೇ ಬೇಸಿಗೆಯಲ್ಲಿಯೇ ಅಗತ್ಯ ಕ್ರಮಕೈಕೊಂಡು, ಸೌಲಭ್ಯ ಕಲ್ಪಿಸಿದ್ದರೆ ಈಗ ಈ ಜನರಿಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎಂದುಇಲ್ಲಿನ ನಿವಾಸಿ ಭರಮಗೌಡ ವಡಗಾಂವಕರ ಹೇಳಿದರು.

ಮಹಾನಗರದ ಮೇಲ್ಭಾಗದ 20 ವಾರ್ಡ್‌ಗಳಿಂದ ಹರಿದು ಬರುವ ಕೊಳಚೆ ನೀರು ಇದೇ ಭಾಗದಲ್ಲಿ ಹರಿಯುತ್ತದೆ. ಹಿಂದ್‌ಎಂಜಿನಿಯರಿಂಗ್‌ ವರ್ಕ್ಸ್‌ ಕಟ್ಟಡ ಬದಿ ಹರಿದು ಮುಂದೆ ಬಳ್ಳಾರಿ ನಾಲಾ ಸೇರುವ ಈ ಮಹಾಚರಂಡಿಯು ಮಹಾನಗರದ ದೊಡ್ಡ ಶಾಪದಂತಾಗಿದೆ.

ಈ ನಾಲಾ ಪಕ್ಕದಲ್ಲಿಯೇ 60 ಅಡಿ ಅಗಲದ ರಸ್ತೆ ನಕ್ಷೆಯಲ್ಲಿದೆ. ಇದು ಹಳೆ ಬಿಪಿ ರಸ್ತೆಯಿಂದ ಒಂದೂವರೆ ಕಿಲೊಮೀಟರ್‌ ದೂರದ ಹೊಸ ಪಿಬಿಹೆದ್ದಾರಿಯಸಾಂಬ್ರಾ ರಸ್ತೆಯ ಸೇತುವೆ ಬಳಿ ಸಂಪರ್ಕಿಸುತ್ತದೆ.ಆದರೆ ಈಗ ಅದು ಹತ್ತಡಿ ಅಗಲವೂ ಉಳಿದಿಲ್ಲ. ಇದನ್ನುದುರಸ್ತಿಗೊಳಿಸಿಲ್ಲ. ಇಲ್ಲಿ ನೂರಾರು ಮನೆಗಳು, ಹೊಲಗದ್ದೆಗಳಿದ್ದು, ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಅಲ್ಲಿ ಹೋಗುವುದೇ ಕಷ್ಟವಾಗಿದೆ, ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಕಷ್ಟ ಕೇಳುತ್ತಿಲ್ಲಎನ್ನುವುದುತವನು ಘಾಡಿ ಅವರ ವಿಷಾದ.

ಪ್ಯಾಟ್ಸನ್‌ ಎಜೆನ್ಸಿ ಬಳಿಯ ಓಂ ನಗರ, ಶೃಂಗೇರಿ ಕಾಲೊನಿಗಳ ಬಹುತೇಕ ರಸ್ತೆಗಳು ಸಂಚರಿಸಲೂ ಬಾರದಷ್ಟು ಕೆಟ್ಟಿವೆ. ಸೊಳ್ಳೆ ಹಾವಳಿ ಆರೋಗ್ಯಕೆಡಿಸಿದೆ. ಸೊಳ್ಳೆ ನಾಶಕ ಪಾವಡರ್‌ ಸಿಂಪಡಿಸಬೇಕು, ಆರೋಗ್ಯ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದುಅವರು ಹೇಳಿದರು.

ವಾರ್ಡ್‌ 24 ರ ಖಾಸಬಾಗ ಬಸವೇಶ್ವರ ವೃತ್ತದ ಸುತ್ತಲಿನ ರಸ್ತೆಗಳನ್ನೆಲ್ಲ ವಿದ್ಯುತ್‌, ಜಲಮಂಡಳಿಯವರು ಅಗಿದು, ಮತ್ತೇದುರಸ್ತಿಗೊಳಿಸಿಲ್ಲ. ಬಿಚ್ಚುಗಲ್ಲಿ, ಹೊಸೂರು ಮೆಟರ್ನಿಟಿ ಆಸ್ಪತ್ರೆ, ವಿಠಲದೇವ ಗಲ್ಲಿ, ಶಹಪುರ ಪೊಲೀಸ ಠಾಣೆಯ ಪೊಲೀಸ ಕ್ವಾರ್ಟರ್ಸ್‌, ದಾನೆ ಗಲ್ಲಿ, ಬಸವಣ ಗಲ್ಲಿ, ಭಾರತನಗರದ ವ್ಯಾಪ್ತಿಯಲ್ಲಿ ಮಾಲಿನ್ಯ, ಹದಗೆಟ್ಟ ಬೀದಿಗಳು, ರೋಗಕರ ವಾತಾವರಣ ಸಾಮಾನ್ಯವಾಗಿವೆ. ಮಹಾನಗರ ಪಾಲಿಕೆಯವರು ಸೌಲಭ್ಯ ಕಲ್ಪಿಸದಿರುವುದುಸಾರ್ವಜನಿಕರನ್ನು ನಿಸ್ಸಾಯಕರನ್ನಾಗಿಸಿವೆ.

ಹಣದ ಕೊರತೆ:ಮಹಾನಗರ ಪಾಲಿಕೆಯ ಸಭೆಯಲ್ಲಿ ಅನೇಕ ಸಲ ಚರ್ಚಿಸಿದರೂ ಪ್ರಯೋಜವಾಗಿಲ್ಲ. ಜನರಿಗೆ ಸೌಲಭ್ಯ ಕಲ್ಪಿಸಲು ಪಾಲಿಕೆಯಲ್ಲಿ ಹಣ ಇಲ್ಲ ಎಂದು ಮೇಯರ್‌ ಮತ್ತು ಆಯುಕ್ತರುಹೇಳುತ್ತಾರೆ. ಹಣ ಕೊಡದಿದ್ದರೆ ಕೆಲಸ ಹೇಗೆ ಮಾಡಿಸೋದು ?. ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆ, ಗಟಾರ ಸುಧಾರಣೆಗೆ ಉದ್ದೇಶಿಸಲಾಗಿದೆ. ಆದರೆ ಅದರ ಕಾರ್ಯ ನಿಧಾನವಾಗಿದ್ದುಜನರಿಗೆ ತೊಂದರೆಯಾಗುತ್ತಿದೆ
ರಾಜು ಬಿರ್ಜೆ, ಮನಪಾ ಸದಸ್ಯರು ಬೆಳಗಾವಿ.

ಸಮಸ್ಯೆಗೆ ಸ್ಪಂದಿಸಲಿ:ವಿದ್ಯುತ್‌ ಹಾಗೂ ನೀರಿನ ಪೈಪ್‌ ಹಾಕಲು ರಸ್ತೆ ಹದಗೆಡಿಸಿದವರವಿರುದ್ದ ಕ್ರಮ ಕೈಕೊಳ್ಳಬೇಕು ಎಂದು ಅನೇಕ ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆಯುಕ್ತರು ಸಂಬಂಧಿಸಿದ ಇಲಾಖೆಯವರಿಗೆ ನೋಟಿಸ್‌ ನೀಡಲಾಗಿದೆ ಎನ್ನುತ್ತಾರೆ. ನೋಟಿಸ್‌ ನೀಡಿದರೆ ಪ್ರಯೋಜನ ಏನು ?ಸಾರ್ವಜನಿಕರಿಗೆ ಸೌಲಭ್ಯ ಇಲ್ಲದೇ ಆಗುತ್ತಿರುವ ತೊಂದರೆಗೆ ಕೂಡಲೇ ಸ್ಪಂದಿಸಬೇಕು.
ಸುಧಾ ಭಾತಖಾಂಡೆ ಮನಪಾ ಸದಸ್ಯರು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT