ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗೆ ಆಧುನಿಕ ತಂತ್ರಜ್ಞಾನ ವೇದಿಕೆಯಾಗಲಿ: ಸಾಹಿತಿ ಹಂ.ಪ. ನಾಗರಾಜಯ್ಯ ಅಭಿಮತ

ಯುವ ಬರಹಗಾರರ ಚೊಚ್ಚಲ ಕೃತಿಗಳು ಲೋಕಾರ್ಪಣೆ
Last Updated 7 ಜನವರಿ 2022, 18:55 IST
ಅಕ್ಷರ ಗಾತ್ರ

ಬೆಂಗಳೂರು: ‘ಆಧುನಿಕ ತಂತ್ರಜ್ಞಾನಗಳ ಆವಿಷ್ಕಾರದಿಂದ ಬರವಣಿಗೆ ಸುಲಭವಾಗಿದೆ. ಆನ್‌ಲೈನ್ ಯುಗದಲ್ಲಿ ಪ್ರತಿಭೆಗೆ ವೇದಿಕೆಗಳನ್ನು ಕಂಡುಕೊಂಡು, ವಿದ್ವತ್ತನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 55 ಯುವ ಬರಹಗಾರರಚೊಚ್ಚಲ ಕೃತಿಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು. ‘ಆನ್‌ಲೈನ್ ವೇದಿಕೆಗಳೂ ಬರವಣಿಗೆಗೆ ಅವಕಾಶಗಳನ್ನು ಒದಗಿಸುತ್ತಿವೆ.ಈ ಕಾಲದಲ್ಲಿ ಬರವಣಿಗೆಗೆ ವಿಫುಲ ಅವಕಾಶಗಳಿವೆ. ಸಾಕಷ್ಟು ಸಂಪನ್ಮೂಲಗಳೂ ಲಭ್ಯವಾಗುತ್ತವೆ. ನಮ್ಮ ಕೈಯಲ್ಲಿರುವ ಮೊಬೈಲ್‌ ಫೋನ್ ನೆರವಿನಿಂದ ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳಬಹುದು. ಬರಹಗಾರರ ಪ‍್ರಥಮ ಕೃತಿಯ ಬಿಡುಗಡೆ ಚೊಚ್ಚಲ ಹೆರಿಗೆಯ ಸಂಭ್ರಮ ನೀಡಲಿದೆ. 1964ರಲ್ಲಿ ಪ್ರಕಟವಾದ ‘ನಾಗಶ್ರೀ’ ಕಾದಂಬರಿ ನನ್ನ ಚೊಚ್ಚಲ ಕೃತಿ’ ಎಂದು ತಿಳಿಸಿದರು.

ಕವಿ ಜಯಂತ ಕಾಯ್ಕಿಣಿ, ‘ಬರಹಗಾರ ಬದುಕಿನ ಕಟ್ಟಳೆಗಳಿಂದ ಹೊರಗೆ ಬಂದು ಬರೆಯಬೇಕು.ಬದುಕಿನ ಕಟ್ಟಳೆಗಳನ್ನು ಮುರಿದು ಬರೆದರೆ ಮಾತ್ರ ಅದು ಅನುಭವದ್ರವ್ಯವಾಗುತ್ತದೆ. ಕಟ್ಟಲೆಗಳು ಸೃಜನಶೀಲತೆಯನ್ನು ಕಟ್ಟಿಹಾಕುತ್ತದೆ.ತಾವು ಬರೆದದ್ದನ್ನು ತಾವೇ ವಿಮರ್ಶಿಸಿ, ಕಾವ್ಯ ಗುಣದೋಷಗಳನ್ನು ಗುರುತಿಸಿದಾಗ ಮಾತ್ರ ಲೇಖಕ ಬೆಳೆಯಲು ಸಾಧ್ಯ. ಬರಹಗಾರರಿಗೆಓದುವ ಹವ್ಯಾಸ ಇರಬೇಕು. ಸಹಬಾಳ್ವೆ ಮತ್ತು ಸಮಾನ ಮನಸ್ಸು ಇದ್ದಾಗ ಮಾತ್ರ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತದೆ’ ಎಂದು ಹೇಳಿದರು.

‘ಧಾರವಾಡದ ವಸತಿ ನಿಲಯದಲ್ಲಿ ರಾತ್ರಿ ಜೋಳದ ರೊಟ್ಟಿಗೆ ತಾಟು ಹಿಡಿದುಕೊಂಡು ನಿಂತಿದ್ದಾಗ ನನ್ನ ಮೊದಲ ಪುಸ್ತಕ ಪ್ರಕಟವಾದ ವಿಷಯ ತಿಳಿಯಿತು. ಪುಸ್ತಕ ಮಳಿಗೆಯಲ್ಲಿ ನನ್ನ ಪುಸ್ತಕ ನೋಡಿ ರೋಮಾಂಚನವಾಯಿತು. ಸ್ನೇಹಿತರೊಂದಿಗೆಪೂರಿ ಬಾಜಿ ತಿಂದು ಸಂಭ್ರಮಿಸಿದ್ದೆ’ ಎಂದು ಕಾಲೇಜು ದಿನಗಳನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT