ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಪ್ಪ ಕಲಾ ಗ್ಯಾಲರಿಗೆ ನವ ರೂಪ

Last Updated 14 ಮಾರ್ಚ್ 2015, 20:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರವಾಸಿ ಆಕರ್ಷಣೆಯ ಕೇಂದ್ರಗಳಾಗಿರುವ ವೆಂಕಟಪ್ಪ ಕಲಾ ಗ್ಯಾಲರಿ ಹಾಗೂ ಸರ್ಕಾರಿ ವಸ್ತು ಸಂಗ್ರಹಾಲಯ ಇನ್ನು ಮುಂದೆ ಹೊಸ ರೂಪದಲ್ಲಿ ಕಂಗೊಳಿಸಲಿವೆ.

ರಾಜ್ಯ ಪುರಾತತ್ವ ಇಲಾಖೆಯು ಗ್ಯಾಲರಿ ಮತ್ತು ವಸ್ತು ಸಂಗ್ರಹಾಲಯಗಳ ನವೀಕರಣ ಕಾಮಗಾರಿ ಕೈಗೊಂಡಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ.

‘ರಾಜ್ಯ ಪುರಾತತ್ವ ಇಲಾಖೆಯು ವೆಂಕಟಪ್ಪ ಕಲಾ ಗ್ಯಾಲರಿಗೆ ₨ 50 ಲಕ್ಷ ಹಾಗೂ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ₨ 44 ಲಕ್ಷ  ಅನುದಾನ ಬಿಡುಗಡೆ ಮಾಡಿದೆ. ಆರು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, ಕಟ್ಟಡಗಳಿಗೆ ಬಣ್ಣ ಬಳಿಯುವ ಹಾಗೂ ಪ್ರವೇಶ ದ್ವಾರದಲ್ಲಿ ಕಮಾನು ನಿರ್ಮಾಣ ಕಾರ್ಯ ಪೂರ್ಣ ಗೊಳ್ಳಬೇಕಿದೆ’ ಎಂದು ಕಾಮಗಾರಿ ಎಂಜಿನಿಯರ್‌ ರಾಚಪ್ಪ ತಿಳಿಸಿದರು.

‘ಕಲಾ ಗ್ಯಾಲರಿ ಮತ್ತು ವಸ್ತು ಸಂಗ್ರಹಾಲಯಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು, ಎರಡೂ ಕಟ್ಟಡಗಳ ಸುತ್ತಮುತ್ತ ಹುಲ್ಲು ಹಾಸು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

‘ಬ್ರಿಟಿಷರ ಕಾಲದಲ್ಲಿ ವಿನ್ಯಾಸಗೊಳಿಸ ಲಾಗಿದ್ದ ಸರ್ಕಾರಿ ವಸ್ತು ಸಂಗ್ರಹಾಲಯದ ಮೇಲ್ಛಾವಣಿ ಮಳೆಗಾಲದಲ್ಲಿ ಸೋರು ತ್ತಿತ್ತು. ಹೀಗಾಗಿ

ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಬರುತ್ತಾರೆ. ಹಾಗೆಯೇ ನಮ್ಮ ಸಂಗ್ರಹಾಲಯಗಳಿಗೂ ವೀಕ್ಷಕರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಬಹುತೇಕ ಕಾಮಗಾರಿ ಪೂರ್ಣ ಗೊಂಡಿದೆ.
ರಾಚಪ್ಪ, ಕಾಮಗಾರಿ ಎಂಜಿನಿಯರ್.

ಸಂಗ್ರಹಾಲಯ ದಲ್ಲಿನ ಕಲಾಕೃತಿಗಳನ್ನು ರಕ್ಷಿಸಲು ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ’  ಎಂದು ಮಾಹಿತಿ ನೀಡಿದರು.  ವಿವಿಧ ಜಿಲ್ಲೆಗಳಲ್ಲಿ ದೊರೆತಿದ್ದ ಕಲ್ಲಿನ ಶಾಸನಗಳು ಮತ್ತು ಮಧ್ಯಕಾಲೀನ ಕರ್ನಾಟಕದ ಅಪರೂಪದ ಕಲ್ಲಿನ ಶಿಲ್ಪಗಳು ಹಾಗೂ ವಿವಿಧ ಕಾಲ ಘಟ್ಟಗಳಲ್ಲಿ ದೊರೆತಿರುವ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.

ಸರ್ಕಾರಿ ವಸ್ತು ಸಂಗ್ರಹಾಲಯವು ಅತ್ಯಂತ ಹಳೆಯ ಹಾಗೂ ದಕ್ಷಿಣ ಭಾರತದ ಎರಡನೆ ಪುರಾತನ ಕಟ್ಟಡ ಎಂಬ ಹಿರಿಮೆ ಹೊಂದಿದೆ. ಇಲ್ಲಿ ಹಲವು ವರ್ಷಗಳ ಪುರಾತನವಾದ ಕನ್ನಡ ಶಾಸನಗಳು, ಹಳೆಯ ಆಭರಣಗಳು, ನಾಣ್ಯಗಳು, ಲಿಪಿಗಳು, ಪುರಾತತ್ವ ಮತ್ತು ಭೂ ವೈಜ್ಞಾನಿಕ ಭಾಗಗಳೂ ಸೇರಿದಂತೆ ಅಪರೂಪದ ಮತ್ತು ಮೌಲ್ಯಯುತ ಪುರಾತನ ವಸ್ತುಗಳನ್ನು ಇಡಲಾಗಿದೆ.

‌ಜಾಗದ ಕೊರತೆ ಇರುವುದರಿಂದ ಕೆಲ ಕಲ್ಲಿನ ಮೂರ್ತಿಗಳು ಸಂಗ್ರ­ಹಾಲಯದ ಆವರಣದಲ್ಲಿ ಅನಾಥವಾಗಿ ಬಿದ್ದಿವೆ. ನವೀಕರಣ ಕಾರ್ಯದಿಂದ ಈ ಮೂರ್ತಿಗಳಿಗೆ ನೆಲೆ ದೊರೆಯಲಿದೆ.

ಸಂಗ್ರಹಾಲಯದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಬಯಲು ಗ್ಯಾಲರಿಯಲ್ಲಿ ಸುಮಾರು 70 ಶಿಲಾಮೂರ್ತಿಗಳಿಗೆ ನೆಲೆ ಕಲ್ಪಿಸುವ ಯೋಜನೆಯನ್ನು ಇಲಾಖೆ ಹೊಂದಿದೆ.

ಎರಡೂ ಕಟ್ಟಡಗಳ  ಸುತ್ತಲೂ ತಡೆಗೋಡೆ ನಿರ್ಮಿಸಿ, ಕಟ್ಟಡಗಳ ಸುತ್ತ ಸುಮಾರು 5 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಆಕರ್ಷಕ ಹುಲ್ಲಿನ ಹಾಸು ಬೆಳೆಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT