ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಲಿಗೆ ಮಾಡಿದ್ದೋ, ಲಂಚ ಪಡೆದಿದ್ದೋ?’

Published 27 ಏಪ್ರಿಲ್ 2024, 16:24 IST
Last Updated 27 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಬೀದರ್‌: ‘ಈಶ್ವರ ಖಂಡ್ರೆಯವರ ಕಲೆಕ್ಷನ್ ಏಜೆಂಟ್‌ ಎಂದೇ ಕರೆ‌ಸಿಕೊಳ್ಳುವ ಶರಣು ಮೋದಿ ಅವರ ಬಳಿಯಿಂದ ಆದಾಯ ತೆರಿಗೆ ಇಲಾಖೆಯವರು ₹2 ಕೋಟಿ ಜಪ್ತಿ ಮಾಡಿದ್ದಾರೆ. ಆ ದುಡ್ಡು ಸುಲಿಗೆ ಮಾಡಿದ್ದೋ ಅಥವಾ ಲಂಚ ಪಡೆದಿದ್ದೋ ಎಂಬುದರ ಬಗ್ಗೆ ಖಂಡ್ರೆ ಸ್ಪಷ್ಟೀಕರಣ ನೀಡಬೇಕು’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಬಲಗೈ ಬಂಟ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಶರಣು ಮೋದಿ ಅವರ ಬಳಿ ಅಕ್ರಮ ಹಣ ಖಂಡ್ರೆ ಬಚ್ಚಿಟ್ಟಿದ್ದಾರೆ. ಇವರು ಮಾಡಿರುವ ಕಲೆಕ್ಷನ್ ದುಡ್ಡಿನಿಂದ ಚುನಾವಣೆ ಎದುರಿಸುತ್ತಿದ್ದಾರೆ. ಖಂಡ್ರೆಯವರು ಮಾಡಿರುವ ಪಾಪದ ಕೂಪದಲ್ಲಿ ಶರಣು ಮೋದಿ ಸಿಕ್ಕಿ ಬಿದ್ದಿದ್ದಾರೆ. ಇನ್ನೂ ಚುನಾವಣೆ ಮುಗಿದಿಲ್ಲ. ಈಗಲೇ ಇಷ್ಟು ಅಕ್ರಮ ಹಣ ಈಶ್ವರ ಖಂಡ್ರೆ ಬಚ್ಚಿಟ್ಟಿದ್ದಾರೆ ಎಂದರೆ ಜಿಲ್ಲೆಯಲ್ಲಿ ಯಾರ‍್ಯಾರ ಮನೆಯಲ್ಲಿ ಅಕ್ರಮ ಹಣ ಇಟ್ಟಿದ್ಧಾರೋ? ಜಿಲ್ಲಾಡಳಿತ ಇದರ ಬಗ್ಗೆ ಹೆಚ್ಚಿನ ನಿಗಾ ಇಡಬೇಕು ಎಂದು ಶನಿವಾರ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಅಕ್ರಮ ಹಣದ ಮೇಲೆ ಗೆಲುವು ಸಾಧಿಸುತ್ತೇನೆಂದು ಈಶ್ವರ ಖಂಡ್ರೆ ಅಂದುಕೊಂಡರೆ ಅದು ಅವರ ಮೂರ್ಖತನ. ಕೂಡಲೇ ಈ ಅಕ್ರಮ ಹಣದ ಬಗ್ಗೆ ಖಂಡ್ರೆ ತಪ್ಪೊಪ್ಪಿಕೊಂಡು, ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಕೆಲ ದಿನಗಳ ಹಿಂದೆ ಬೀದರ್‌ ಡಿ.ಸಿ.ಸಿ. ಬ್ಯಾಂಕ್ ಮೇಲೆ ಐ.ಟಿ. ದಾಳಿಯಾದಾಗ, ಈಶ್ವರ ಖಂಡ್ರೆ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಹಿಟ್ ಅಂಡ್‌ ರನ್ ಮಾಡಿದ್ದರು. ಆದರೆ ಇಂದು ಅವರ ಕಲೆಕ್ಷನ್ ಏಜೆಂಟ್‌, ಐ.ಟಿಯವರಿಗೆ ರೆಡ್ಡ ಹ್ಯಾಂಡ್ ಹಾಗಿ ಸಿಕ್ಕಿಬಿದ್ದಿದ್ದಾನೆ. ಈಗ ಮತ್ಯಾವ ಸುಳ್ಳು ಹೇಳುತ್ತಾರೆ ಖಂಡ್ರೆ. 60 ವರ್ಷಗಳಿಂದ ಅಧಿಕಾರ ನಡೆಸಿದ ಖಂಡ್ರೆ ಕುಟುಂಬದ ಮತ್ತೊಂದು ಮುಖ ಹೊರಬಿದ್ದಿದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT