ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಸಂಭ್ರಮದಿಂದ ಮೆಥೋಡಿಸ್ಟ್‌ ಚರ್ಚ್‌ ಜಾತ್ರೆ

Published 18 ಮೇ 2024, 16:07 IST
Last Updated 18 ಮೇ 2024, 16:07 IST
ಅಕ್ಷರ ಗಾತ್ರ

ಬೀದರ್‌: ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ಸಾ ಉತ್ಸವ ಸಂಭ್ರಮದಿಂದ ನಡೆಯಿತು.

ಶುಕ್ರವಾರ ಜಾತ್ರೆಗೆ ಚಾಲನೆ ದೊರೆತಿದ್ದು, ಭಾನುವಾರ ಕೊನೆಗೊಳ್ಳಲಿದೆ. ಶುಕ್ರವಾರ ಸಂಜೆ ಏಸು ಕ್ರಿಸ್ತನ ಭಾವಚಿತ್ರ, ಶಿಲುಬೆ ಸೇರಿದಂತೆ ಇತರೆ ಸ್ತಬ್ಧಚಿತ್ರಗಳ ಮೆರವಣಿಗೆ ಮಾಡಲಾಯಿತು. ಬೈಕ್‌ ಮೇಲೆ ಯುವಕ/ಯುವತಿಯರು ರ್‍ಯಾಲಿ ನಡೆಸಿದರು. ಏಸು ಕ್ರಿಸ್ತನ ಗುಣಗಾನ ಮಾಡುವ ಸಂಗೀತಕ್ಕೆ ಹೆಜ್ಜೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಎರಡನೇ ದಿನವಾದ ಶನಿವಾರ ಕೂಡ ವಿಶೇಷ ಪ್ರಾರ್ಥನೆ, ದೈವ ಸಂದೇಶ ಪ್ರವಚನ, ಭಜನಾ ಸ್ಪರ್ಧೆಗಳು ನಡೆದವು. ಭಾನುವಾರವೂ ಮುಂದುವರೆಯಲಿವೆ. ಭಜನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ. ಕರ್ನಾಟಕದ ಬಿಷಪ್‌ ಎನ್‌.ಎಲ್‌. ಕರ್ಕರೆ ಅವರು ಕೂಡ ಪಾಲ್ಗೊಳ್ಳುವರು. ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ರೆವರೆಂಡ್‌ ನೆಲ್ಸನ್‌ ಸುಮಿತ್ರ, ರೆವರೆಂಡ್‌ ಇಮ್ಯಾನುವೆಲ್‌ ಪ್ರದೀಪ್‌, ರೆವರೆಂಡ್‌ ತುಕಾರಾಂ, ರೆವರೆಂಡ್‌ ಸೈಮನ್‌, ರೆವರೆಂಡ್‌ ಜೈಪಾಲ್‌ ಅವರು ನಡೆಸಿಕೊಟ್ಟರು. 

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮೆಥೋಡಿಸ್ಟ್‌ ಚರ್ಚ್‌ ಆವರಣದಲ್ಲಿ ಸಂಭ್ರಮ ನೆಲೆಸಿದೆ. ವಿದ್ಯುತ್‌ ದೀಪಗಳಿಂದ ಚರ್ಚ್‌ ಹಾಗೂ ಇಡೀ ಆವರಣ ಕಂಗೊಳಿಸುತ್ತಿದೆ.

ಮೆಥೋಡಿಸ್ಟ್‌ ಚರ್ಚ್‌ ವಾರ್ಷಿಕ ಜಾತ್ರೆ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಏಸು ಕ್ರಿಸ್ತನ ಭಾವಚಿತ್ರದ ಎದುರು ಭಕ್ತಿಯಿಂದ ಹೆಜ್ಜೆ ಹಾಕಿದ ಭಕ್ತರು
ಮೆಥೋಡಿಸ್ಟ್‌ ಚರ್ಚ್‌ ವಾರ್ಷಿಕ ಜಾತ್ರೆ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಏಸು ಕ್ರಿಸ್ತನ ಭಾವಚಿತ್ರದ ಎದುರು ಭಕ್ತಿಯಿಂದ ಹೆಜ್ಜೆ ಹಾಕಿದ ಭಕ್ತರು
ಬೀದರ್‌ನ ಮಂಗಲಪೇಟ್‌ ಸಮೀಪದ ಶಿಲುಬೆ ವೃತ್ತದಲ್ಲಿ ಮೆರವಣಿಗೆ ಸಾಗಿದಾಗ ಸೇರಿದ ಜನಸ್ತೋಮ
ಬೀದರ್‌ನ ಮಂಗಲಪೇಟ್‌ ಸಮೀಪದ ಶಿಲುಬೆ ವೃತ್ತದಲ್ಲಿ ಮೆರವಣಿಗೆ ಸಾಗಿದಾಗ ಸೇರಿದ ಜನಸ್ತೋಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT