ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಪ್ರಭಾವ: ಗೆಲುವಿನ ವಿಶ್ವಾಸ

ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಹೇಳಿಕೆ
Published 27 ಏಪ್ರಿಲ್ 2024, 15:46 IST
Last Updated 27 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಮತದಾರರನ್ನು ಪ್ರಭಾವಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಅಭಿಪ್ರಾಯಪಟ್ಟರು.

‘ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೇ ಕಾಂಗ್ರೆಸ್‌ ಗೆಲುವಿನ ಭಾವನೆ ಮಹಿಳೆಯರ ಮೊಗದಲ್ಲಿ ಗೋಚರಿಸುತ್ತಿತ್ತು. ಬಿರುಸಿನ ಮತದಾನ ನಡೆದಿರುವುದನ್ನು ಗಮನಿಸಿದರೆ ಕ್ಷೇತ್ರ ವ್ಯಾಪ್ತಿಯ ಅತಿ ಹೆಚ್ಚು ಮತದಾರರು ಕಾಂಗ್ರೆಸ್‌ ಬೆಂಬಲಿಸಿರುವ ಸಾಧ್ಯತೆ ಇದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೆ ಔಷಧ ಖರೀದಿಸುವುದಕ್ಕೂ ಗ್ರಾಮೀಣ ಪ್ರದೇಶದ ಬಹುತೇಕರು ಕಷ್ಟಪಡುತ್ತಿದ್ದರು. ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಶ್ರಮಿಕ ವರ್ಗಕ್ಕೆ ಅನುಕೂಲವಾಗಿದೆ. ಬದುಕಿನ ಬಗೆಗೆ ಕಾಂಗ್ರೆಸ್‌ ಆತ್ಮವಿಶ್ವಾಸ ಮೂಡಿಸಿದೆ. ಇದು ಮತಗಳ ರೂಪದಲ್ಲಿ ಕಾಂಗ್ರೆಸ್‌ಗೆ ಮರಳಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಶ್ರಮದ ಫಲವಾಗಿ ಪಕ್ಷಕ್ಕೆ ಮತಗಳು ಸಿಕ್ಕಿವೆ. ಗೆಲುವಿನ ಬಗೆಗೆ ಅಚಲವಾದ ನಂಬಿಕೆ ಇದೆ. ಮತಗಳ ಅಂತರದ ಬಗ್ಗೆ ಬಿಜೆಪಿ ನಾಯಕರಂತೆ ಊಹೆ ಮಾಡುವುದಿಲ್ಲ. ನಿರೀಕ್ಷೆಯಂತೆ ಪಕ್ಷಕ್ಕೆ ಮತಗಳು ಸಿಕ್ಕಿರುವುದು ಖುಷಿ ಮೂಡಿಸಿದೆ. ಮತ ಎಣಿಕೆಗೆ ಇನ್ನೂ ಸಾಕಷ್ಟು ದಿನ ಕಾಲಾವಕಾಶವಿದ್ದು, ಸಮಾಧಾನದಿಂದ ಕಾಯುವೆ’ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಇದ್ದರು.

ರಾಜ್ಯದ ಇನ್ನುಳಿದ ಕ್ಷೇತ್ರಗಳ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದೇನೆ. ಬೆಳಗಾವಿ ಕಲಬುರಗಿ ಸೇರಿ ಎಡಗೈ ಸಮುದಾಯ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವೆ

. ಬಿ.ಎನ್‌.ಚಂದ್ರಪ್ಪ ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT