ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ಯಾಗ, ಮಮತೆ, ಪ್ರೀತಿ, ವಾತ್ಸಲ್ಯ ಪದಗಳಿಗೆ ಅನ್ವರ್ಥ ಮಹಿಳೆ’

ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಶಿಕಲಾ ರವಿಶಂಕರ್
Published 27 ಏಪ್ರಿಲ್ 2024, 15:48 IST
Last Updated 27 ಏಪ್ರಿಲ್ 2024, 15:48 IST
ಅಕ್ಷರ ಗಾತ್ರ

ಹಿರಿಯೂರು: ‘ವರ್ತನೆ, ಕರ್ತವ್ಯ ಪಾಲನೆ ಮೂಲಕ ಮಹಿಳೆಯರು ತ್ಯಾಗ, ಮಮತೆ, ಪ್ರೀತಿ, ವಾತ್ಸಲ್ಯ ಪದಗಳಿಗೆ ಅನ್ವರ್ಥವಾಗಿದ್ದಾರೆ’ ಎಂದು ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಹೇಳಿದರು.

ನಗರದ ರೋಟರಿ ಸಭಾಂಗಣದಲ್ಲಿ ಶನಿವಾರ ಏಕನಾಥೇಶ್ವರಿ ಸಂಗೀತ ವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮನುಕುಲಕ್ಕೆ ಮಹಿಳೆಯರ ಕೊಡುಗೆ’ ವಿಚಾರ ಕುರಿತು ಅವರು ಮಾತನಾಡಿದರು.

‘ಆದಿ ಮಾನವನ ಯುಗದಿಂದ, ನದಿ ತೀರದ ನಾಗರಿಕತೆಗಳಿಂದ, ಕೃಷಿ ಬೆಳಕಿಗೆ ಬಂದ ದಿನಗಳಿಂದ ಹಿಡಿದು ಇಂದಿನವರೆಗೆ ಇಡೀ ಕುಟುಂಬದ ಬೆಳವಣಿಗೆಗೆ ಮಹಿಳೆಯರು ನೀಡಿರುವ ಕೊಡುಗೆ ಅನನ್ಯವಾದುದು. ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಮಹಿಳೆಯರು ನೀಡಿರುವ ಪ್ರೋತ್ಸಾಹ ಬಹುದೊಡ್ಡದು. ಮಕ್ಕಳ ಶಿಕ್ಷಣ, ಕುಟುಂಬದ ಆರ್ಥಿಕತೆಯ ನಿರ್ವಹಣೆಯಲ್ಲಿ ಹೆಣ್ಣುಮಕ್ಕಳು ತಮ್ಮ ಛಾಪು ತೋರಿಸಿದ್ದಾರೆ. ಈಚಿನ ವರ್ಷಗಳಲ್ಲಿ ರಾಜಕೀಯ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಕ್ಷೇತ್ರವನ್ನು ಮಹಿಳೆಯರು ವಿಸ್ತರಿಸಿಕೊಂಡಿರುವುದು ಸಂತಸದ ಸಂಗತಿ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅರ್ಬನ್ ಬ್ಯಾಂಕ್ ಮಾಜಿ ನಿರ್ದೇಶಕಿ ಮೋಹಿನಿ ಶ್ರೀನಿವಾಸ್, ‘ಸಮಾನ ಮನಸ್ಕ ಮಹಿಳೆಯರು ಜೊತೆಗೂಡಿ ಸಮಾಜದಲ್ಲಿ ಸೇವೆಯ ಅಗತ್ಯ ಇರುವವರ ನೆರವಿಗೆ ನಿಲ್ಲಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಎಂ.ಕಿರಣ್ ಮಿರಜ್ಕರ್ ಮಾತನಾಡಿ, ‘ಮಹಿಳೆಯರು ಕೇವಲ ತೊಟ್ಟಿಲು ತೂಗುವ ಕೆಲಸಕ್ಕೆ ಸೀಮಿತವಾಗಿರದೆ, ದೇಶವನ್ನು ಆಳುವ ಸಾಮರ್ಥ್ಯ ಪಡೆದಿರುವುದು ನಿಜಕ್ಕೂ ಅಭಿನಂದನೀಯ. ರಾಜಕೀಯ, ಶಿಕ್ಷಣ, ಔದ್ಯೋಗಿಕ ಕ್ಷೇತ್ರದಲ್ಲಿ ಅವರು ಇನ್ನಷ್ಟು ಸಾಧನೆ ತೋರಿಸುವಂತಾಗಲಿ’ ಎಂದರು.

ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಆರ್. ತಿಪ್ಪೇಸ್ವಾಮಿ, ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ನಿಜಲಿಂಗಪ್ಪ, ಮಂಜಮ್ಮ, ರೋಟರಿ ಅಧ್ಯಕ್ಷ ದೇವರಾಜಮೂರ್ತಿ, ಶಂಕರಲಿಂಗಯ್ಯ, ಜಗದಾಂಬ, ವಿನುತಾ, ದಿವ್ಯಶ್ರೀ ಹಾಜರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಮೋಹಿನಿ ಶ್ರೀನಿವಾಸ್, ಡಾ.ಚಂಪಾ, ಲಕ್ಷ್ಮೀರಾಜೇಶ್, ಸೌಮ್ಯಾ ಪ್ರಶಾಂತ್, ಗೀತಾರಾಧಾಕೃಷ್ಣ, ತಿಪ್ಪಮ್ಮ, ನಿರ್ಮಲಾ, ಗಂಗಮ್ಮ, ಭಾರತಿ, ಸುಲೋಚನಮ್ಮ, ನಾಗಸುಂದರಮ್ಮ, ನೈನಾಲತಾ, ಅಮೃತಾ ಲಕ್ಷ್ಮೀ, ತ್ರಿವೇಣಿ, ಕೃಷ್ಣಕುಮಾರಿ, ಶಾರದಾ, ಶೈಲಾ, ಸುಗುಣದೀಕ್ಷಿತ್, ತಾಯಿಮುದ್ದಮ್ಮ, ಶಶಿಪ್ರಕಾಶ್, ಹೇಮಾವತಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT