ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | ದೇಗಲಮಡಿ: ಆಳೆತ್ತರ ಬೆಳೆದ ಕಬ್ಬು

Published 16 ಅಕ್ಟೋಬರ್ 2023, 6:08 IST
Last Updated 16 ಅಕ್ಟೋಬರ್ 2023, 6:08 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ದೇಗಲಮಡಿಯ ಪ್ರಗತಿಪರ ರೈತ ಸಿದ್ದು ಮಗಿ ಅವರ ಹೊಲದಲ್ಲಿ ಆಳೆತ್ತರ ಬೆಳೆ ಜನರ ಗಮನ ಸೆಳೆಯುತ್ತಿದೆ.

ಬಾಳೆ, ಪಪ್ಪಾಯ, ವೀಳ್ಯೆದೆಲೆ ಹಾಗೂ ಸೀಬೆ ಹಣ್ಣಿನ ಬೇಸಾಯ ಮಾಡುವ ಸಿದ್ದು ಮಗಿ ಅವರು ಇದೇ ಮೊದಲ ಬಾರಿಗೆ 2 ಎಕರೆ ಹೊಲದಲ್ಲಿ 9392 ತಳಿಯ ಕಬ್ಬು ಬೆಳೆದಿದ್ದಾರೆ.

ಕಬ್ಬಿನ ಒಂದೊಂದು ದಂಟು 15ರಿಂದ 18 ಗಣಕಿ ಬಿಟ್ಟಿದ್ದು ಎತ್ತರವಾಗಿಯೂ ಬೆಳೆದಿದೆ. ಎರಡು ಬಾರಿ ಕಬ್ಬು ಕಟ್ಟಿದ ರೈತ ಬೆಳೆಗೆ ನೀರು ಬಿಟ್ಟಾಗ ಕಬ್ಬು ಮಣ್ಣಿನಿಂದಾಗಿ ನೆಲ ಸಡಿಲಾಗಿ ಬೆಳೆ ನೆಲಕ್ಕೆ ಒರಗುತ್ತಿದೆ. 

‘2022ರ ಡಿಸೆಂಬರ್‌ನಲ್ಲಿ ಬೀಜ ಹಾಕಿದ್ದು ಸದ್ಯ ಸುಮಾರು 10 ತಿಂಗಳ ಅವಧಿಯ ಬೆಳೆಯಿದೆ. ನಿರೀಕ್ಷೆಗಿಂತಲೂ ಎತ್ತರದ ಬೆಳೆದಿದೆ. ಇಷ್ಟು ಎತ್ತರ ನಮ್ಮೂರಿನಲ್ಲಿ ಬೇರೆ ರೈತರ ಹೊಲದಲ್ಲಿ ಕಬ್ಬು ಬೆಳೆ ಬೆಳೆದಿಲ್ಲ’ ಎಂದು ರೈತ ಸಿದ್ದು ಮಗಿ ಪ್ರಜಾವಾಣಿ ತಿಳಿಸಿದರು.

‘ಎಕರೆಗೆ 60ರಿಂದ70 ಟನ್ ಇಳುವರಿ ಬರುವ ನಿರೀಕ್ಷೆಯಿದೆ. ಹೊಲದಲ್ಲಿ ಒಟ್ಟು 120 ಟನ್‌ನಿಂದ 140 ಟನ್ ಇಳುವರಿ ಬರುವ ಸಾಧ್ಯತೆಯಿದೆ’ ಎಂದು ಅವರು ವಿವರಿಸಿದರು.

ಅಫಜಲಪುರದ ನಮ್ಮ ಸಮೀಪದ ಬಂಧುಗಳ ಬಳಿ ಬೀಜ ತಂದು ಹೊಲದಲ್ಲಿ ಊರಿ ಬೆಳೆಸಿದ್ದೇನೆ. ಹೆಚ್ಚು ಇಳುವರಿ ಪಡೆಯಬೇಕೆಂಬ ರೈತರಿಗೆ ಇದು ಉಪಯುಕ್ತವಾಗಿದೆ. ಕಳೆದ ವರ್ಷ ಈ ಹೊಲದಲ್ಲಿ ಸೋಯಾ ಬೆಳೆದಿದ್ದೇನೆ. ಬೀಜ ಹಾಕುವುದಕ್ಕಿಂತ ಮುಂಚೆ ತಿಪ್ಪೆ ಗೊಬ್ಬರ ನಂತರ ಒಮ್ಮೆ ಡಿಎಪಿ, ಯುರಿಯಾ ಹಾಗೂ ಎಂಒಪಿ ಮಿಶ್ರಣ ಹಾಕಿದ್ದು ಒಮ್ಮೆ ಜೀವಾಮೃತವೂ ಹಾಕಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕಬ್ಬು ಬೆಳೆಗಾರರ ಸಿದ್ದು ಮಗಿ 9900351366

ಚಿತ್ರಶೇಖರ ಪಾಟೀಲ  ಕೃಷಿಕರು ದೇಗಲಮಡಿ
ಚಿತ್ರಶೇಖರ ಪಾಟೀಲ  ಕೃಷಿಕರು ದೇಗಲಮಡಿ
ವೀರಾರೆಡ್ಡಿ ಪಾಟೀಲ  ಪ್ರಗತಿಪರ ರೈತ ಕಲ್ಲೂರು
ವೀರಾರೆಡ್ಡಿ ಪಾಟೀಲ  ಪ್ರಗತಿಪರ ರೈತ ಕಲ್ಲೂರು
ಪ್ರಗತಿಪರ ರೈತ ಸಿದ್ದುಮಗಿ ಶ್ರಮ ಜೀವಿಯಾಗಿದ್ದು ಕೃಷಿಯನ್ನೇ ಉಸಿರಾಗಿಸಿಕೊಂಡು ಬಹುಬೆಳೆ ಬೇಸಾಯದಲ್ಲಿ ತೊಡಗಿದ್ದಾರೆ. ಕಬ್ಬು ಬೆಳೆಯನ್ನು ಇಷ್ಟಪಟ್ಟು ಬೆಳೆಸಿದ್ದಾರೆ
ಚಿತ್ರಶೇಖರ ಪಾಟೀಲ ರೈತ ದೇಗಲಮಡಿ
ಚಿಂಚೋಳಿಯಲ್ಲಿ ಕಬ್ಬು ಬೇಸಾಯಕ್ಕೆ ಪೂರಕ ವಾತಾವರಣವಿದೆ ಜತೆಗೆ ಅತಿದೊಡ್ಡ ಎಥನಾಲ್ ಘಟಕ ಸ್ಥಾಪನೆಯಾಗಿದ್ದರಿಂದ ಕಬ್ಬು ಬೆಳೆಗಾರರ ಜೀವನ ಸುಧಾರಿಸಲಿದೆ
ವೀರಾರೆಡ್ಡಿ ಪಾಟೀಲ ಪ್ರಗತಿಪರ ರೈತ ಕಲ್ಲೂರು
ಸಿದ್ಧಸಿರಿ ಎಥನಾಲ್ ಘಟಕ ಕಳೆದ ವರ್ಷ ಪ್ರಾಯೋಗಿಕವಾಗಿ ಕಬ್ಬು ನುರಿಸಿದೆ. ಪ್ರಸಕ್ತ ವರ್ಷ ಕಬ್ಬು ನುರಿಸುವ ಪ್ರಾರಂಭದ ದಿನ ಇನ್ನೂ ನಿಗದಿಯಾಗಿಲ್ಲ. ನವೆಂಬರ್ ಅಥವಾ ಅದರ ಬಳಿಕ ತಾಲ್ಲೂಕಿನಲ್ಲಿ ಕಬ್ಬು ಕಟಾವಿಗೆ ಬರುವ ಮಾಹಿತಿ ಇದೆ
ಅರುಣಕುಮಾರ ಕಬ್ಬು ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT