ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂದನೆ ಶಾಲೆಯ ವಿಶೇಷ ಒಂದೆರಡಲ್ಲ!

ಗ್ರಾಮೀಣ ಮಕ್ಕಳ ಆಶಾಕಿರಣ; ಶಾಲಾ ಆವರಣಕ್ಕೆ ಜೀವಕಳೆ ತಂದ ಕೈತೋಟ
Last Updated 28 ಸೆಪ್ಟೆಂಬರ್ 2016, 5:49 IST
ಅಕ್ಷರ ಗಾತ್ರ

ಕಲಬುರ್ಗಿ: ಇಂದಿನ ಖಾಸಗಿ ಶಾಲೆಗಳ ಹಾವಳಿಯಿಂದ ಗುಣಾತ್ಮಕ ಶಿಕ್ಷಣ ಗ್ರಾಮೀಣ ಪ್ರದೇಶದ ಮಕ್ಕಳ ಪಾಲಿಗೆ ಗಗನ ಕುಸುಮವಾಗಿದೆ. ಕೆಲ ಪೋ ಷಕರು ಗ್ರಾಮೀಣ ಪ್ರದೇಶದಲ್ಲಿ ವಾಸವಿ ದ್ದರೂ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಇಚ್ಛಿ ಸುತ್ತಾರೆ.  ಅಂತಹ ಪೋಷಕರ ಮನ ಸೆಳೆದು, ಮಕ್ಕಳನ್ನು ದಾಖಲಿಸಿಕೊಳ್ಳು ವಲ್ಲಿ ಆಳಂದ ತಾಲ್ಲೂಕಿನ ಶ್ರೀಚಂದ ಸರ್ಕಾರಿ ಪ್ರೌಡಶಾಲೆ ಯಶಸ್ಸು ಕಂಡಿದೆ.

ಶ್ರೀಚಂದ ಗ್ರಾಮದ ಹೊರ ವಲಯದಲ್ಲಿ ಎರಡುವರೆ ಎಕರೆ ವಿಸ್ತಿರ್ಣದಲ್ಲಿ ಶಾಲಾ ಆವರಣವಿದೆ. ಆವರಣದಲ್ಲಿ 300ಕ್ಕೂ ಹೆಚ್ಚು  ಗಿಡಮರಗಳ ಸುಂದರ ತೋಟವಿದೆ. ವಿಶಾಲವಾದ ಕ್ರೀಡಾಂಗಣ, ಕೈತೋಟ, ಗ್ರಂಥಾಲಯ, ವಿಜ್ಞಾನ ಪ್ರಯೋ ಗಾಲಯ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ.

ನಗರ ಪ್ರದೇಶದಲ್ಲಿನ ಶಾಲೆಗಳಂತೆ ತನ್ನತ್ತ ಸಹಜವಾಗಿ ಗ್ರಾಮೀಣ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ಶಾಲೆ ಸುತ್ತ ಮೂತ್ತಲಿನ ಅಪಚಂದ, ಬಬ ಲಾದ, ಜವಳಗಾ, ಹೊಡಲ ಸೇರಿದಂತೆ ವಿವಿಧ ಗ್ರಾಮದದವರಿಗೆ ಆಕರ್ಷಣೆ ಶಾಲೆ ಯಾಗಿದೆ.

2010ರ ಶೈಕ್ಷಣಿಕ ಶಾಲೆಯಲ್ಲಿ 79 ವಿದ್ಯಾರ್ಥಿಗಳಿದ್ದರು. ಸದ್ಯ ವಿದ್ಯಾರ್ಥಿಗಳ ಸಂಖ್ಯೆ 133ಕ್ಕೆ ಹೆಚ್ಚುತ್ತಾ, ಪ್ರತಿ ವರ್ಷ ಏರಿಕೆ ಕಾಣುತ್ತಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾ ಸಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲೂ ಮುಂದಿರುವುದು ಮತ್ತೊಂದು ವಿಶೇಷ. 2015–16ನೇ ಸಾಲಿನಲ್ಲಿ ಶಾಲೆಯ ಫಲಿತಾಂಶ ಶೇ 96 ರಷ್ಟಾಗಿದೆ. ಒಟ್ಟು 50 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಉನ್ನತದರ್ಜೆ, 25 ಪ್ರಥಮ ದರ್ಜೆ, 12 ದ್ವಿತೀಯ ದರ್ಜೆ, 7 ತೃತೀಯ ದರ್ಜೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ ಎಂದು ಶಿಕ್ಷಕ ಆನಂದ ನಾಯಕ ತಿಳಿಸಿದರು.

ವಿಶೇಷ ಕಾಳಜಿ:  ಶಾಲೆಯ ವಿದ್ಯಾರ್ಥಿಗಳ ಫಲಿತಾಂಶ ಮತ್ತು ಹಾಜ ರಾತಿ ಹೆಚ್ಚಳಕ್ಕೆ ಶಾಲಾ ಶಿಕ್ಷಕರು ವಿಶೇಷ ಕಾಳಜಿ ವಹಿಸಿದ್ದಾರೆ. ವಿದ್ಯಾರ್ಥಿ ಗಳಲ್ಲಿ ನಾಲ್ಕು ವಿಭಾಗ ಗಳನ್ನಾಗಿ ವಿಂಗಡಿಸಿ, ಪ್ರತಿ ಶುಕ್ರವಾರ ದಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿ ಸುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲಾಗುವುದು. ಅಲ್ಲದೇ ಪ್ರತಿ ದಿನ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸ ಲಾಗುವುದು. ಇದರಿಂದ ಮಕ್ಕಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತೇವೆ  ಎಂದು ಅವರು ತಿಳಿಸಿದರು.

ವಿವಿಧ ಪ್ರಯೋಗ: ಪ್ರತಿ ವರ್ಷ ಎಲ್ಲಾ ಶಿಕ್ಷಕರು ಡಿಸೆಂಬರ್ ಅಂತ್ಯಕ್ಕೆ ಸಿಲೆಬಸ್‌ ಮುಗಿಸುತ್ತಾರೆ. ನಂತರ ವಿಷಯಗಳ ರಿವೀಜನ್‌, ವಿಶೇಷ ತರಗತಿ, ಕಿರು ಪರೀಕ್ಷೆ, ಸರಣಿ ಪರೀಕ್ಷೆ, ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು, ಗುಂಪು ಚರ್ಚೆ ಮುಂತಾದವು ನಡೆಯುತ್ತವೆ. ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸು ತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾರೆ ಎಂದು ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಲಾಗೇಶ ಹೇಳಿದರು.

ಗ್ರಾಮಸ್ಥರಿಂದ ದೇಣಿಗೆ: ಶಾಲೆ ಕುರಿತು ಗ್ರಾಮಸ್ಥರು ಕಾಳಜಿ ಹೊಂದಿ ದ್ದಾರೆ. ಶಾಲೆಯಲ್ಲಿ ನಡೆಯುವ ಪ್ರತಿ ಚಟುವಟಿ ಕೆಗಳಲ್ಲಿ ಭಾಗ ವಹಿಸಿ, ಶಿಕ್ಷಕರನ್ನು ಮತ್ತು ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಶಾಲೆ ಅಲಂಕಾರಕ್ಕೆ ಗ್ರಾಮದ ಪ್ರಮುಖರು ಮತ್ತು ಶಿಕ್ಷಕರಿಂದ ₹ 70 ಸಾವಿರ ದೇಣಿಗೆ ಸೇರಿಸಿ, ಶಾಲೆಯ ಗೋಡೆಯ ಮೇಲೆ ಸಾಧಕರ ಚಿತ್ರ  ಬಿಡಿಸಿ ಶಾಲೆ ಮತ್ತಷ್ಟು ಅಂದ ಮಾಡಲಾಗಿದೆ.

ಮಕ್ಕಳ ಸಾಧನೆ: ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಮುಂದಿರುವ ವಿದ್ಯಾ ರ್ಥಿಗಳು ತಾಲ್ಲೂಕು, ಜಿಲ್ಲಾ ಹಾಗೂ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ. ಪ್ರತಿ ವರ್ಷ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರತಿಭಾ ನ್ವೇಷಣ ಪರೀಕ್ಷೆಯಲ್ಲಿ ಉತ್ತೀರ್ಣ ರಾಗುತ್ತಾರೆ.

ಇತ್ತೀಚಿಗೆ ಕೇಂದ್ರ ಸರ್ಕಾರ ಕೊಡುವ ‘ಸ್ವಚ್ಛ ವಿದ್ಯಾಲಯ ಪುರ ಸ್ಕಾರ’ಕ್ಕೆ ಶಾಲೆ ಆಯ್ಕೆಯಾಗಿದೆ. ಅದೇ ರೀತಿ ಪ್ರತಿ ವರ್ಷ  ‘ಪ್ರಜಾವಾಣಿ ಕ್ವಿಜ್‌ (ರಸಪ್ರಶ್ನೆ) ಚಾಂಪಿಯನ್‌ ಶಿಪ್‌’ನಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT