ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲೆಗೆ ಸೇರಲಿವೆ 245 ಬಯೊಮೆಟ್ರಿಕ್ ಯಂತ್ರ

ಪಡಿತರ ವಿತರಣೆಗೆ ಕೂಪನ್‌ ವ್ಯವಸ್ಥೆ: ಬಯೋಮೆಟ್ರಿಕ್‌ ಪದ್ಧತಿಗೆ ವಿದಾಯ
Last Updated 30 ಆಗಸ್ಟ್ 2016, 7:32 IST
ಅಕ್ಷರ ಗಾತ್ರ

ಕಲಬುರ್ಗಿ: ಪಡಿತರ ವಿತರಣೆಯಲ್ಲಿದ್ದ ಬಯೊಮೆಟ್ರಿಕ್ ಪದ್ಧತಿ ಸರ್ಕಾರ ಕೈ ಬಿಟ್ಟು ಕೂಪನ್ ವ್ಯವಸ್ಥೆ ಜಾರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ. ಇದರಿಂದ ಲಕ್ಷಾಂತರ ಹಣ ವೆಚ್ಚ ಮಾಡಿ ಖರೀದಿಸಿದ ಯಂತ್ರಗಳು ಮೂಲೆ ಸೇರುವ ಲಕ್ಷಣಗಳು ಗೋಚರಿಸುತ್ತಿವೆ. ಬಯೊಮೆಟ್ರಕ್ ಯಂತ್ರದ ಮೂಲ ಕವೇ ಪಡಿತರ ವಿತರಣೆಗೆ ಹಿಂದೆ ಆದೇಶಿಸಿದ್ದ ಇಲಾಖೆ ಈಗ ಆದೇಶ ಬದಲಾಯಿಸಿದೆ.

‘ಸರ್ಕಾರ ವರ್ಷಕ್ಕೊಮ್ಮೆ ಪಡಿತರ ವ್ಯವಸ್ಥೆ ಬದಲಿಸುತ್ತಿರುವ ಕಾರಣ, ಹಳ್ಳಿಯ ಜನರು  ತೊಂದರೆ ಅನುಭವಿ ಸುತ್ತಿದ್ದಾರೆ. ಯೋಜನೆಗೆ ನೀಡಿದ ಹಣವೂ ವ್ಯರ್ಥವಾಗುವ ಸ್ಥಿತಿ ನಿರ್ಮಾ ಣವಾಗಿದೆ’ ಎಂದು ಮಹಾಗಾಂವ ನಿವಾಸಿ ಜಗನ್ನಾಥ ದೂರುತ್ತಾರೆ.

ಪಡಿತರ ಚೀಟಿ ಹೊಂದಿದವರು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೊ ಮೆಟ್ರಕ್‌  ಸ್ಕ್ಯಾನರ್‌ನಲ್ಲಿ ಹೆಬ್ಬೆರಳ ಗುರುತು ನೀಡಿದ ನಂತರ ಧಾನ್ಯ ವಿತರಿ ಸಲಾಗುತ್ತಿತ್ತು. ಆದರೆ, ಈ ಪದ್ಧತಿಯಿಂದ ಹಲವು ಸಮಸ್ಯೆಗಳು ತಲೆದೋರಿದ್ದವು. ಈ ತೊಡಕು ನಿವಾರಿಸಲು ರಾಜ್ಯ ಸರ್ಕಾರ ನೂತನ ವ್ಯವಸ್ಥೆ ಅಳವಡಿಸಿ ಕೊಂಡಿದೆ. ಆದರೆ, ಇದರಿಂದ ಈ ಬಯೋಮೆಟ್ರಕ್‌ಗಳ ಖರೀದಿಗೆ ನೀಡಿದ ಅನುದಾನ ವ್ಯರ್ಥವಾಗಲಿದೆ.

ಪ್ರತಿ ಯಂತ್ರಕ್ಕೆ ₹40ರಿಂದ 45 ಸಾವಿರದಂತೆ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 245 ಯಂತ್ರ ಖರೀದಿಸಲಾಗಿದೆ. ಹೊಸ ವ್ಯವಸ್ಥೆಯಿಂದ ಈ ಯಂತ್ರಗಳು ಮೂಲೆ ಸೇರುವ ಸಾಧ್ಯತೆಗಳು ಹೆಚ್ಚು ಎನ್ನುವುದು ಮೂಲಗಳ ಮಾಹಿತಿ.

ನಗರದಲ್ಲಿ 124 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 121 ಬಯೊಮೆಟ್ರಕ್ ಯಂತ್ರಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿ ಸಲಾಗಿದೆ. ಕಲಬುರ್ಗಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕೂಪನ್ ವ್ಯವಸ್ಥೆ ಜಾರಿಯಾದ ಕಾರಣ ಆ ಯಂತ್ರಗಳು ಕಾರ್ಯ ಸ್ಥಗಿತಗೊಳಿಸಿವೆ. ಆದರೆ, ಗ್ರಾಮಾಂತರ ಪ್ರದೇಶದ ಕೆಲವು ಕಡೆ ಬಯೊಮೆಟ್ರಿಕ್ ಮೂಲಕವೇ ಪಡಿತರ ವಿತರಣೆ ಮಾಡಲಾಗುತ್ತಿದೆ.

245 ಬಯೊಮೆಟ್ರಕ್ ಯಂತ್ರಗಳು ನಿರುಪಯುಕ್ತವಾಗುವ ಆತಂಕ ಎದುರಾಗಿದೆ. ಇದರಿಂದ ಸರ್ಕಾರದ ಸುಮಾರ ₹98 ಲಕ್ಷದ ಯಂತ್ರಗಳು ಮೂಲೆ ಸೇರುವ ಅನುಮಾನ ದಟ್ಟವಾಗಿದೆ. ಸರ್ಕಾರ ರಾಜ್ಯದಾದ್ಯಂತ ಪಡಿತರ ವಿತರಣೆಯಲ್ಲಿ ನೂತನ ವ್ಯವಸ್ಥೆ ಜಾರಿಗೆ ತಂದಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅಳವಡಿಸಿದ ಯಂತ್ರಗಳು ಇದೇ ಸ್ಥಿತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT