ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಹಂದಿಗಳ ಉಪಟಳ ಹೆಚ್ಚಳ

ಪಾಲಿಕೆ ನಿರ್ಲಕ್ಷ: ಬಡಾವಣೆಯ ಜನರ ಕಷ್ಟ ಕೇಳೋರಿಲ್ಲ
ಅಕ್ಷರ ಗಾತ್ರ

ಕಲಬುರ್ಗಿ: ನಗರದ 41ನೇ ವಾರ್ಡ್‌ ವ್ಯಾ‍ಪ್ತಿಗೆ ಬರುವ ರಾಮನಗರ ಉತ್ತಮ ರಸ್ತೆ, ಕುಡಿಯುವ ನೀರು ಸೇರಿದಂತೆ  ಸೌಕರ್ಯಗಳಿಂದ ವಂಚಿತವಾಗಿದೆ.

ಲಕ್ಷ್ಮಿ ಕಾಲೊನಿ, ಮಹಾನಗರ ಪಾಲಿಕೆ ಕಚೇರಿ–2, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಘಟಕ ನಂ–2 ಸುತ್ತಲಿನ ಪ್ರದೇಶ ಸಹ ಈ ಬಡಾವಣೆಯಲ್ಲಿವೆ. ರಾಮನಗರಕ್ಕೆ ಕಾಲಿಡುತ್ತಿದ್ದಂತೆ ದುರ್ವಾಸನೆ ಬರುತ್ತದೆ. ಬಡಾವಣೆ ನಿವಾಸಿಗಳು ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೆ ಬಳಕೆಗೆ ಬಾರದಂತಾಗಿದೆ. ಇಕ್ಕಟ್ಟಾದ ರಸ್ತೆಗಳಿಂದ ಸಂಚಾರಕ್ಕೆ ಬಹಳ ತೊಂದರೆ ಆಗಿದೆ. ಮಕ್ಕಳು ಆಟವಾಡಲೂ ಉತ್ತಮ ಆಟದ ಮೈದಾನ ಇಲ್ಲಿಲ್ಲ.

ನೀರಿನ ಸಮಸ್ಯೆ: ಎಂಟು ದಿನಕ್ಕೊಮ್ಮೆ, ಬರುವ ಕುಡಿಯುವ ನೀರು ಕೂಡ ಶುದ್ಧವಾಗಿಲ್ಲ. ಇದರಿಂದ ಬಡಾವಣೆಯ ಜನರು ಹಲವು ರೋಗಕ್ಕೆ ತುತ್ತಾಗಿದ್ದಾರೆ. ಕಲುಷಿತ ನೀರು ಕುಡಿದವರಲ್ಲಿ ರೋಗದ ಭೀತಿ ಮೂಡಿದೆ.

ಒಳಚರಂಡಿ ಸರಿಯಿಲ್ಲ: ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕಿರಿದಾದ ಚರಂಡಿಗಳಿದ್ದು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬದಲಾವಣೆ ಆಗಿಲ್ಲ ಎನ್ನುತ್ತಾರೆ
ನಿವಾಸಿ ನಾಗರಾಜ.

ಹಲವು ದಿನದಿಂದ ಚರಂಡಿ ಸ್ವಚ್ಛ ಮಾಡಿಲ್ಲ. ತ್ಯಾಜ್ಯ ಸಂಗ್ರಹವಾಗಿ ನೀರು ಕಟ್ಟಿಕೊಂಡಿದೆ. ಸೊಳ್ಳೆ, ಹಂದಿ, ನಾಯಿಗಳ ಹಾವಳಿ ಅಧಿಕವಾಗಿದೆ. ಕೊಳಚೆ ನೀರಿನಲ್ಲಿ ಪ್ರಾಣಿಗಳು ಹೊರಳಾ ಡುವುದರಿಂದ ದುರ್ವಾಸನೆ ಮತ್ತಷ್ಟು ಹೆಚ್ಚಿದೆ. ‘ಸಮಸ್ಯೆ ವಾರ್ಡ್ ಮೆಂಬರ್‌ಗೆ ಹೇಳಿ ಹೇಳಿ ಸಾಕಾಗೇತ್ರಿ, ಪಾಲಿಕೆಯಲ್ಲಿ ಕೆಲಸ ಮಾಡೋರಿಗೆ ಹೇಳಿದ್ರೆ ಬರಾಕಿಲ್ಲ ಅಂತಾರೆ. ತಿಂಗಳಿಗೊಮ್ಮೆ, ಎರಡು ತಿಂಗ ಳಿಗೊಮ್ಮೆ ಚರಂಡಿ ಸ್ವಚ್ಛ ಮಾಡ್ತಾರಿ, ಇಲ್ಲಿ ಚರಂಡಿ ಬ್ಲಾಕ್ ಆಗಿದ್ದರಿಂದ  ಇಷ್ಟೊಂದು ಸಮಸ್ಯೆ ಆಗೇತ್ರಿ. ನಮ್ಮ ಗೋಳು ಕೇಳೋರು ಯಾರು ಇಲ್ಲ’ ಎಂದು ನಿವಾಸಿ ರಮೇಶ ತಮ್ಮ ಗೋಳನ್ನು ಹೇಳಿಕೊಂಡರು.

ವಾರ್ಡ್‌ನ ಅವ್ಯವಸ್ಥೆಗೆ ಇಲ್ಲಿನ ನಿವಾಸಿಗಳು ಕೊಡುಗೆ ನೀಡುತ್ತಿದ್ದಾರೆ. ರಸ್ತೆ ಮೇಲೆ ಬಟ್ಟೆ ತೊಳೆಯುವುದು, ಕೊಳಚೆ ನೀರು ರಸ್ತೆಗೆ ಹರಿಸು ವುದು...ಇತ್ಯಾದಿಗಳಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಸೂಕ್ತ ಪರಿಹಾರ:  ‘ಬಡಾವಣೆಯ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಎಲ್ಲವನ್ನು ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಪೂರೈಸುವ ಹಳೆಯ ಪೈಪ್ ಒಡೆದಿದ್ದ ರಿಂದ ತೊಂದರೆಯಾಗಿದೆ.

ಈ ಬಗ್ಗೆ ಕ್ರಮಕೈಗೊಂಡು ಪಾಲಿಕೆ ಕುಡಿಯುವ ನೀರಿನ ಬಗ್ಗೆ ಚರ್ಚಿಸಿ ಎಸ್‌ಇಪಿ ಯೋಜನೆ ಅಡಿಯಲ್ಲಿ ₨27 ಲಕ್ಷ ಮೊತ್ತ ದಲ್ಲಿ ಹೊಸ ಪೈಪ್‌ಲೈನ್ ವ್ಯವಸ್ಥೆ ಮಾಡ ಲಾಗುವುದು. ಇದಕ್ಕಾಗಿ ತುರ್ತು ಕ್ರಮ ಕೈಗೊಳ್ಳಲಾಗಿದೆ. ಜನರು ಕೆಲವು ದಿನಗಳ ಮಟ್ಟಿಗೆ ಸಹಿಸಿಕೊಳ್ಳಬೇಕು’ ಎನ್ನುತ್ತಾರೆ ಪಾಲಿಕೆ ಸದಸ್ಯ ಪರಶುರಾಮ ನಸಲ್ವಾಯಿ. 

ನಮ್ಮ ವ್ಯಾಪ್ತಿಯಲ್ಲಿ ಬರುವ ನಗರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ತೊಂದರೆಯಾಗಿದೆ. ಕೂಡಲೆ ಪರಿಹಾರ ಕಲ್ಪಿಸಲಾಗುವುದು.
ಪರಶುರಾಮ ನಸಲ್ವಾಯಿ, ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT