ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯಕ್ಕಾಗಿ ದಾಖಲೆ ಸಂಗ್ರಹ

ಸ್ವಚ್ಛ ಭಾರತ ಮಿಷನ್ ಅಡಿ ಬಯಲುಶೌಚಮುಕ್ತ ನಗರ ನಿರ್ಮಾಣಕ್ಕೆ ಪಣ
ಅಕ್ಷರ ಗಾತ್ರ

ಕಲಬುರ್ಗಿ: ‘ಸ್ವಚ್ಛ ಭಾರತ ಮಿಷನ್’ ಯೋಜನೆ ಅಡಿಯಲ್ಲಿ ನಗರವನ್ನು ಬಯಲುಶೌಚ ಮುಕ್ತ ಮಾಡುವುದಕ್ಕಾಗಿ ಮಹಾನಗರ ಪಾಲಿಕೆಯು ಪಣತೊಟ್ಟು ಕೆಲಸ ಆರಂಭಿಸಿದೆ.

ಅರ್ಹರಿಂದ ದಾಖಲೆಗಳನ್ನು ಸಂಗ್ರಹಿಸಲು ಮೈರಾಡ್ ಸಂಸ್ಥೆಯವರಿಗೆ ವಹಿಸಲಾಗಿದೆ. ನಗರದ 55 ವಾರ್ಡ್‌ಗಳಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಅಗತ್ಯ ನೆರವು ಒದಗಿಸಲು ಯೋಜಿಸಲಾಗಿದೆ. ‘ಸರ್ಕಾರಿ ಆದೇಶದಂತೆ ನಗರದಲ್ಲಿ 11,300 ಜನ ಶೌಚಾಲಯವಿಲ್ಲದ ಮನೆಗಳನ್ನು ಗುರುತಿಸಲಾಗಿದೆ.

ಸ್ವಚ್ಛ ಭಾರತ ಅಭಿ ಯಾನದ ಅಡಿಯಲ್ಲಿ ₨4,000 ಹಾಗೂ ರಾಜ್ಯ ಸರ್ಕಾರದಿಂದ ಬರುವ ₨1,300 ಹಣದಲ್ಲಿ ಶೌಚಾಲಯ ಕಟ್ಟಿಕೊಡಲಾಗುವುದು. ಈಗಾಗಲೇ ನಗರದ 55 ಕಾಲೊನಿಗಳಲ್ಲಿ ಸಾಮೂಹಿಕ ಶೌಚಾಲಯ ಗಳಿದ್ದು, ಅವುಗಳು ಹಾಳಾಗಿದ್ದರಿಂದ ಸಮಸ್ಯೆಯಾಗಿತ್ತು.

ಈಗ ತುರ್ತು ಕ್ರಮ ಕೈಗೊಂಡು ಎಲ್ಲ ಸಾಮೂಹಿಕ ಶೌಚಾಲ ಯಗಳಿಗೆ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀಕಾಂತ ಕಟ್ಟಿಮನಿ ಹೇಳಿದರು.

ನಗರದಲ್ಲಿ ಶೌಚಾಲಯ ಕಟ್ಟಿಸಿಕೊ ಳ್ಳಲು ಜಾಗವಿಲ್ಲದವರಿಗೆ ಸರ್ಕಾರಿ ಜಾಗದಲ್ಲಿ ಸಾಮೂಹಿಕ ಶೌಚಾಲಯ ಕಟ್ಟಿಸಲು ವ್ಯವಸ್ಥೆ ಮಾಡಲಾಗುವುದು. ಅದಕ್ಕೆ ಮೈರಾಡ್ ಸಂಸ್ಥೆಯವರು ಫಲಾ ನುಭವಿಗಳಿಂದ ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್, ಆರ್.ಆರ್.ನಂಬರ್, ಮನೆಯ ಪತ್ರಗಳು, ಭಾವಚಿತ್ರ ಸೇರಿ ದಂತೆ ಎಲ್ಲ ದಾಖಲೆ ಸಂಗ್ರಹಿಸುತ್ತಿದ್ದಾರೆ.

ಎಲ್ಲೆಲ್ಲಿ ನಿರ್ಮಾಣ: ನಗರದಲ್ಲಿ ಹಿಂದು ಳಿದ ಪ್ರದೇಶಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅದರಲ್ಲಿ ಕಪನೂರ ಕೈಗಾರಿಕಾ ಪ್ರದೇಶ, ತಾರಫೈಲ್, ಬುದ್ಧನಗರ, ಹನುಮಾನ ನಗರಗಳಲ್ಲಿ ಹಾಗೂ ಕೊಳೆಗೇರಿಗಳಲ್ಲಿ ಶೌಚಾಲಯವಿ ಲ್ಲದ ಅತಿಹೆಚ್ಚು ಮನೆಗಳು ಕಂಡು ಬಂದಿವೆ.

ಕಾಲೊನಿಗಳಲ್ಲಿ ವಾಸಿಸುವ ಕೆಲವು ಜನರು ಸಾಮೂಹಿಕ ಶೌಚಾಲ ಯಕ್ಕೆ ಹೋಗುತ್ತಿದ್ದಾರೆ. ಇನ್ನು ಕೆಲವು ಜನ ಬಯಲು ಶೌಚಕ್ಕೆ ಗಿಡಗಳ ಮರೆಗೆ, ರಸ್ತೆ ಪಕ್ಕದಲ್ಲಿ, ಹಳೆಯ ಕಟ್ಟಡಗಳಲ್ಲಿ, ಬಯಲು ಶೌಚಕ್ಕೆ ಹೋಗುವುದು ಸಾಮಾನ್ಯವಾಗಿದೆ.
‘ಶೌಚಾಲಯ ನಿರ್ಮಾಣ ಯೋಜನೆ ಒಂದು ವರ್ಷದಿಂದ ಜಾರಿಯಲ್ಲಿದ್ದರೂ ಇದುವರೆಗೂ ಯಾವ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಡಲು ಮುಂದೆ ಬಂದಿಲ್ಲ.

ವಿಳಂಬವಾದರೂ ಜನರ ಕಷ್ಟವನ್ನರಿತು ಮಹಾನಗರ ಪಾಲಿಕೆ ಶೌಚಾಲಯ ನಿರ್ಮಿಸಲು ಮುಂದಾಗಿರು ವುದು ಕೊಂಚ ಭರವಸೆ ಮೂಡಿಸಿದೆ. ಅರ್ಜಿ ತೆಗೆದುಕೊಳ್ಳವುದರಿಂದ ಬಡವ ರಿಗೆ, ನಿರ್ಗತಿಕರಿಗೆ ಶೌಚಾಲಯಗಳು ಸಿಗುವ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ತಾರಫೈಲ್ ಬಡಾವಣೆಯ ನಿವಾಸಿ ಮಾರ್ತಾಂಡಪ್ಪ.

ಉತ್ತಮ ಪ್ರತಿಕ್ರಿಯೆ: ‘ನಗರದಲ್ಲಿ ಅರ್ಜಿ ತೆಗೆದುಕೊಳ್ಳಲು ಹೊರಟ ಮೈರಾಡ್ ಸಂಸ್ಥೆಯವರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮನೆ ಮನೆಗೆ ಹೋಗುವ ಸಿಬ್ಬಂದಿಗೆ ಉತ್ತಮ ಪ್ರತಿ ಕ್ರಿಯೆ ನೀಡಿ ಸಂಪೂರ್ಣ ಮಾಹಿತಿ ನೀಡು ತ್ತಾರೆ. ಜನರು ಸಮೀಕ್ಷೆ ಮುಗಿದ ಕೂಡಲೇ ಶೌಚಾಲಯ ಕಟ್ಟಿಸಿಕೊಡು ತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ’ಎನ್ನುತ್ತಾರೆ ಮೈರಾಡ್ ಸಂಸ್ಥೆಯ ಸಂಯೋಜನಾ ಧಿಕಾರಿ ಗುರುಲಿಂಗಪ್ಪ.

ಸ್ಥಳದ ಅಭಾವ: ನಗರದಲ್ಲಿ ಹಲವು ಜನರಿಗೆ ಜಾಗದ ಕೊರತೆ ಇದ್ದುದರಿಂದ ಅವರಿಗೆ ಶೌಚಾಲಯ ಕಟ್ಟಿಸಲು ಜಾಗ ವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣ ವಾಗುತ್ತಿದೆ. ಕಡಿಮೆ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಶೌಚಾಲಯ ಕಟ್ಟಿಸಲು ಜಾಗದ ಅವಶ್ಯಕತೆ ಇದೆ. ಅಲ್ಲದೇ ಶೌಚಾಲಯಕ್ಕೆ ನೀರಿನ ತೊಂದರೆಯಾಗುತ್ತದೆ.

ಕುಡಿಯುವ ನೀರಿಗಾಗಿಯೇ ಪರದಾಡುವ ಪರಿಸ್ಥಿತಿ ಇರುವಾಗ ಶೌಚಾಲ ಯಕ್ಕೆ ನೀರು ತರುವುದು ಕಷ್ಟ. ಇದಕ್ಕೆ ಮಹಾನಗರ ಪಾಲಿಕೆ ಜಾಗವಿಲ್ಲದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎನ್ನು ವುದು ತಾರಫೈಲ್ ಮತ್ತು ಹನುಮಾನ ನಗರದ ನಿವಾಸಿಗಳ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT