ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಡತೆ: 28 ಕೈದಿಗಳ ಬಿಡುಗಡೆ ಇಂದು

14 ವರ್ಷಗಳ ಸೆರೆವಾಸ ಅಂತ್ಯ: ಸ್ವಾತಂತ್ರ್ಯ ದಿನಾಚರಣೆಯಂದೇ ಮುಕ್ತಿ
Last Updated 15 ಆಗಸ್ಟ್ 2016, 11:42 IST
ಅಕ್ಷರ ಗಾತ್ರ

ಕಲಬುರ್ಗಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಇಲ್ಲಿನ ಕೇಂದ್ರ ಕಾರಾಗೃಹದ ಕೆಲ ಕೈದಿಗಳ ಮೊಗದಲ್ಲಿ ನಗು ಅರಳಲಿದೆ. ಇಬ್ಬರು ಮಹಿಳೆಯರು ಸೇರಿದಂತೆ 28 ಕೈದಿಗಳ ಬೇಡಿ ಕಳಚ ಲಿದ್ದು, ಬಿಡುಗಡೆ ಭಾಗ್ಯ ಲಭಿಸಲಿದೆ.

ಹಲವು ವರ್ಷಗಳ ಸೆರೆ ವಾಸದಿಂದ ಮುಕ್ತರಾಗಲಿರುವ ಕೈದಿಗಳು ಕುಟುಂಬ ಸದಸ್ಯರೊಂದಿಗೆ ಇಡೀ ಜೀವನ ಕಳೆಯುವ ಅವಕಾಶ ದೊರೆಯಲಿದೆ.
ಸನ್ನಡತೆ ಆಧರಿಸಿ 28 ಕೈದಿಗಳು ಬಿಡುಗಡೆಯಾಗಲಿದ್ದಾರೆ.

ಜುಲೈನಲ್ಲಿ ನಡೆದ ಕೇಂದ್ರ ಕಾರಾಗೃಹ ಸಲಹಾ ಮಂಡಳಿ ಸಭೆಯಲ್ಲಿ ಸನ್ನಡತೆ ಆಧಾರದ ಮೇಲೆ 30 ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಸರ್ಕಾರಕ್ಕೆ ಶಿಫಾರಸು ಸಹ ಮಾಡಲಾಗಿತ್ತು. ಬಿಡುಗಡೆಯಾಗ ಲಿರುವ ಬಹುತೇಕ ಕೈದಿಗಳು ಕೊಲೆ, ಕಳವು, ದರೋಡೆ, ವಂಚನೆ ಆರೋಪ ಹೊತ್ತವರು. ಹಲವು ವರ್ಷ  ಶಿಕ್ಷೆ ಅನುಭ ವಿಸಿರುವ ಅವರಲ್ಲಿ ಮತ್ತೆ ಕುಟುಂಬ ಸದಸ್ಯರೊಂದಿಗೆ ಜೀವನ ನಡೆಸುವ ಆಶಾಭಾವ ಈಗ ಮೊಳಕೆಯೊಡದಿದೆ.

ಸೂಕ್ಷ್ಮ ನಿಗಾ: ‘ಸನ್ನಡತೆ ಆಧರಿಸಿ ಕೈದಿಗಳನ್ನು ಬಿಡುಗಡೆ ಮಾಡುವ ಮುನ್ನ ಅವರ ಚಲನವಲನ ಸೂಕ್ಷ್ಮವಾಗಿ ಗಮನಿ ಸುತ್ತೇವೆ. ಸಹಕೈದಿಗಳೊಂದಿಗೆ ಹೇಗೆ ವರ್ತಿಸುತ್ತಾರೆ, ದಿನಚರಿ ಹೇಗಿರುತ್ತದೆ, ಯಾವ ಹವ್ಯಾಸ ರೂಢಿಸಿಕೊಂಡಿದ್ದಾರೆ ಮುಂತಾದವುಗಳನ್ನು ಗಮನಿಸುತ್ತೇವೆ.

ಉತ್ತಮ ವ್ಯಕ್ತಿಯಾಗುವ ಲಕ್ಷಣಗಳು ಕಂಡು ಬಂದಲ್ಲಿ, ಅವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವು ದರ ಬಗ್ಗೆ ಚಿಂತನೆ ಮಾಡುತ್ತೇವೆ. ನಂತರ ಸರ್ಕಾರದ ಮಾರ್ಗದರ್ಶಿ ಅನ್ವಯ ಪೂರಕ ಕಾರ್ಯಗಳು ನಡೆಯುತ್ತವೆ’ ಎಂದು ಕಾರಾಗೃಹ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬಿಡುಗಡೆಗೊಳ್ಳುವ ಕೈದಿಗಳನ್ನು ಸಮಾಜವು ಆತ್ಮೀಯತೆಯಿಂದ ಸ್ವಾಗತಿಸ ಬೇಕು. ಅವರನ್ನು ಕೀಳಾಗಿ ಕಾಣ ಬಾರದು. ಬಹುತೇಕ ಕೈದಿಗಳು ಹೊಸ ಜೀವನ ರೂಪಿಸಿಕೊಳ್ಳುವ ಹಂಬಲದಲ್ಲಿ ಇರುತ್ತಾರೆ. ಹೊಸ ಬದುಕು ಕಂಡುಕೊಳ್ಳಲು ಮತ್ತು ಉದ್ಯೋಗಾವ ಕಾಶ ಪಡೆಯಲು ಜನರು ಅವರಿಗೆ ನೆರ ವಾಗಬೇಕು. ಅವರಲ್ಲಿ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸಬೇಕೆ ಹೊರತು ಅವರಲ್ಲಿ ಖಿನ್ನತೆ ಭಾವ ಮೂಡಲು ಆಸ್ಪದ ನೀಡಬಾರದು’ ಎಂದು ಅವರು ತಿಳಿಸಿದರು.

50 ಕೈದಿಗಳಿಗೆ ಮುಕ್ತಿ: ಕಳೆದ ಗಣರಾಜ್ಯೋತ್ಸವ ದಿನಾಚರಣೆ ಸಂದ ರ್ಭದಲ್ಲಿ ರಾಜ್ಯದ ವಿವಿಧ ಕಾರಾಗೃಹ ಗಳಿಂದ 375 ಕೈದಿಗಳು ಬಿಡುಗಡೆಯಾ ಗಿದ್ದರು. ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ 50 ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರತಿತ್ತು. ಅವರಲ್ಲಿ 14 ವರ್ಷ ವಾಸ್ತವ ಶಿಕ್ಷೆ ಪಡೆದ 20 ಪುರುಷ ಕೈದಿಗಳು ಮತ್ತು ಮಾಫಿ ಸೇರಿ 14 ವರ್ಷ ಜೀವಾವಧಿ ಶಿಕ್ಷೆ ಪೂರೈಸಿದ 30 ಪುರುಷ ಕೈದಿಗಳು ಒಳಗೊಂಡಿದ್ದರು.

ಬಿಡುಗಡೆಗೆ ಪ್ರಕ್ರಿಯೆ ಹೇಗೆ? 
ಕೈದಿಗಳ ನಡವಳಿಕೆ ಮತ್ತು ವರ್ತನೆ ಸೂಕ್ಷ್ಮವಾಗಿ ಗಮನಿಸಲಾ ಗುತ್ತದೆ. ಜಿಲ್ಲಾಧಿಕಾರಿ ನೇತೃತ್ವದ ಹಿರಿಯ ಅಧಿಕಾರಿಗಳ ಒಳಗೊಂಡ ಸದಸ್ಯರು ಕೈದಿಗಳ ಬಿಡುಗಡೆ ಪಟ್ಟಿ ಸಿದ್ಧಪಡಿಸುತ್ತಾರೆ.

ಆನಂತರ ಆ ಪಟ್ಟಿ ಬಂದಿಖಾನೆಯ ಮುಖ್ಯ ಕಚೇರಿಗೆ ರವಾನಿಸುತ್ತಾರೆ. ಇಲಾಖೆ ಹಿರಿಯ ಅಧಿಕಾರಿಗಳ ಪರಿಶೀಲನೆ ನಂತರ ಆ ಪಟ್ಟಿ ಸಚಿವ ಸಂಪುಟದ ಒಪ್ಪಿಗೆಗಾಗಿ ಕಳುಹಿಲಾಗುತ್ತದೆ. ಅಂತಿಮವಾಗಿ ರಾಜ್ಯಪಾಲರು ಕೈದಿಗಳ ಬಿಡುಗಡೆಗೆ ಅಂಕಿತ ಹಾಕುತ್ತಾರೆ.

***
30 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವ ಸಂಬಂಧ ಜುಲೈನಲ್ಲಿ ನಡೆದ ಸಲಹಾ ಮಂಡಳಿ ಸಭೆಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಸ್ವಾತಂತ್ರ್ಯೋತ್ಸವ ದಿನ 28 ಕೈದಿಗಳ ಬಿಡುಗಡೆಗೆ ಸಮ್ಮತಿಸಿದೆ.
-ಸೋಮಶೇಖರ, ಕಲಬುರ್ಗಿಯ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT