ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಕ್ರಿಕೆಟ್‌ ಟೂರ್ನಿಗೆ ಮಡಿಕೇರಿ ಸಜ್ಜು

ಇಂದಿನಿಂದ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್‌
Published 1 ಮೇ 2024, 5:33 IST
Last Updated 1 ಮೇ 2024, 5:33 IST
ಅಕ್ಷರ ಗಾತ್ರ

ಮಡಿಕೇರಿ: ಈಗಷ್ಟೇ ಗೌಡ ಕ್ರಿಕೆಟ್ ಪ್ರೀಮಿಯರ್‌ ಲೀಗ್ ಮುಕ್ತಾಯ ಕಂಡಿತು. ಬಾಳೆಲೆಯಲ್ಲಿ ಅರಮಣಮಾಡ ಕೊಡವ ಕೌಟುಂಬಿಕ ಟೂರ್ನಿ ನಡೆಯುತ್ತಿದೆ. ಈ ಸಾಲಿಗೆ ಮಡಿಕೇರಿಯಲ್ಲಿ ಮೇ 1ರಿಂದ ಆರಂಭವಾಗಲಿರುವ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್‌ ಸಹ ಸೇರ್ಪಡೆಯಾಗಲಿದೆ. ಈ ಮೂಲಕ ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ರಸದೌತಣ ಸಿಗಲಿದೆ.

ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಷನ್‌ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ (ಲೆದರ್‌ಬಾಲ್) ಆಯೋಜಿಸಿದೆ.

ಒಟ್ಟು 10 ಫ್ರಾಂಚೈಸಿಗಳ 210 ಆಟಗಾರರು ಇಲ್ಲಿ ಆಟವಾಡುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.

ಲೀಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯು 20 ಓವರ್‌ಗಳಿಂದ ಕೂಡಿದೆ. ನಿತ್ಯವೂ ಇಲ್ಲಿ 2 ಪಂದ್ಯಗಳು ನಡೆಯಲಿವೆ.

ದಿ ಕೊಡವ ಟ್ರೈಬ್, ಕೊಡವ ವಾರಿಯರ್ಸ್, ವೈಲ್ಡ್ ಫ್ಲವರ್ ಹಾತೂರು, ಪ್ರಗತಿ ಕ್ರಿಕೆಟರ್ಸ್, ಕೂರ್ಗ್ ಬ್ಲಾಸ್ಟರ್ಸ್, ರಾಯಲ್ ಟೈಗರ್ಸ್, ಕೂರ್ಗ್ ಯುನೈಟೆಡ್, ಎಂಟಿಬಿ ರಾಯಲ್ಸ್, ಟೀಮ್ ಲೆವರೇಜ್, ಅಂಜಿಗೇರಿ ನಾಡ್ ತಂಡಗಳು ಇದರಲ್ಲಿ ಭಾಗವಹಿಸಲಿವೆ.

ಅವರೆಮಾದಂಡ ಶರಣ್ ಪೂಣಚ್ಚ, ಮಾದಂಡ ತಿಮ್ಮಯ್ಯ, ಬೊಪ್ಪಂಡ ಸೂರಜ್ ಗಣಪತಿ, ಪಾಲಚಂಡ ಜಗನ್ ಉತ್ತಪ್ಪ, ಮುಂಡ್ಯೋಳಂಡ ನಂದ ನಾಣಯ್ಯ, ಪರವಂಡ ಹೇಮಂತ್, ಪರವಂಡ ಮಿಥುನ್, ಬಾಚೆಟ್ಟಿರ ತೇಜಸ್ವಿ ತಿಮ್ಮಯ್ಯ, ಚೆಟ್ಟಿಯಾರಂಡ ನಿರನ್ ಗಣಪತಿ, ಕೋಟೆರ ಸುನಿಲ್, ಐಚೋಡಿಯಂಡ ಜೋಯಪ್ಪ, ಶಿಪ್ರಜ್ ಸೋಮಣ್ಣ, ತ್ಯಾಗಿ, ಬೇರೆರ ಪ್ರಣಯ್ ಮಾಚಯ್ಯ, ತಂಬುಕುತ್ತಿರ ಮಧು ಮಂದಣ್ಣ ಇವರು ತಂಡಗಳ ಫ್ರಾಂಚೈಸಿಗಳಾಗಿದ್ದಾರೆ.

ಚೇರಂಡ ಕಿಷನ್, ಪೊರುಕೊಂಡ ಸುನಿಲ್, ಪಾಲಚಂಡ ಜಗನ್ ಉತ್ತಪ್ಪ, ಚೆರುಮಂದಂಡ ಸೋಮಣ್ಣ, ಮಡ್ಲಂಡ ದರ್ಶನ್, ಪೆಮ್ಮಯ್ಯ, ಕುಲ್ಲೇಟಿರ ಶಾಂತ ಕಾಳಪ್ಪ, ಬಲ್ಲಂಡ ರೇಣ, ಪೊರುಕೊಂಡ ಅನಿಲ್, ಮಣವಟ್ಟಿರ ಲಿಖಿತ ರಾಯ್ ಆಯೋಜನಾ ಸಮಿತಿಯಲ್ಲಿದ್ದಾರೆ.

ಯುವಕರನ್ನು ಲೆದರ್‌ಬಾಲ್‌ ಕ್ರಿಕೆಟ್‌ ತರಬೇತಿಗೊಳಿಸುವುದು.

ಪಂದ್ಯಾವಳಿಯ ಮುಖ್ಯ ಸಂಚಾಲಕ ಪೊರುಕೊಂಡ ಸುನಿಲ್ ಪ್ರತಿಕ್ರಿಯಿಸಿ, ‘ನಾವು 8 ವರ್ಷಗಳ ಸಂಶೋಧನೆ ಮಾಡಿದೆವು. ಹಾಕಿ ಆಡುವ ನಾವು ಸಾಮರ್ಥ್ಯವಿದ್ದರೂ ಕ್ರಿಕೆಟ್ ಏಕೆ ಆಡಬಾರದು ಎಂಬ ಪ್ರಶ್ನೆ ಮೂಡಿತು. ಕಳೆದ ವರ್ಷ ಕೊಡವ ಪ್ರೀಮಿಯರ್ ಲೀಗ್ ಕುರಿತು ಪತ್ರಿಕಾಗೋಷ್ಠಿ ಮಾಡುತ್ತಿದ್ದಂತೆ ನೂರಾರು ಅಟಗಾರರು ನೋಂದಣಿಯಾದರು. 14 ಫ್ರಾಂಚೈಸಿಗಳೂ ಮುಂದಾದರು. ನಮಗೆ ಬೇಕಿದ್ದು 10 ಫ್ರಾಂಚೈಸಿಗಳು. ಸಿಗದಿದ್ದವರಿಗೆ ಮುಂದಿನ ವರ್ಷದ ಆದ್ಯತೆ ನೀಡಲಾಗುವುದು ಎಂದು ಹೇಳಿದೆವು. ಕೊಡಗಿನಲ್ಲಿ ಕ್ರಿಕೆಟ್ ಕುರಿತು ಒಲವು ಮಾತ್ರವಲ್ಲ ಆಡುವ ಸಾಮರ್ಥ್ಯ ಇರುವ ಆಟಗಾರರು ಇದ್ದಾರೆ. ಅವರಿಗೊಂದು ವೇದಿಕೆ ಕೊಡುವುದು ನಮ್ಮ ಕೆಲಸ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT