ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ‌ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಮೇತ ಮಳೆ

Published 3 ಮೇ 2024, 13:57 IST
Last Updated 3 ಮೇ 2024, 13:57 IST
ಅಕ್ಷರ ಗಾತ್ರ

ಕೋಲಾರ: ‌ಜಿಲ್ಲೆಯ ವಿವಿಧೆಡೆ ಸತತ ಎರಡನೇ ದಿನವೂ ಮಳೆಯಾಗಿದ್ದು, ತಿಂಗಳಿಂದ ಬಿರು ಬಿಸಿಲಿಗೆ ಕಾದ ನೆಲಕ್ಕೆ ತಂಪೆರೆದಿದೆ.

ಕೋಲಾರ, ಮಾಲೂರು, ಬಂಗಾರಪೇಟೆ, ಬೇತಮಂಗಲ, ಶ್ರೀನಿವಾಸಪುರದ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಬಿರುಗಾಳಿ ಸಮೇತ ಮಳೆಯಾಯಿತು.

ಬಂಗಾರಪೇಟೆಯಲ್ಲಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ. ಗಾಳಿ ಹಾಗೂ ಆಲ್ಲಿಕಲ್ಲು ಮಳೆಗೆ ಬೇತಮಂಗಲದಲ್ಲಿ ಬಾಳೆ, ಕ್ಯಾಪ್ಸಿಕಂ, ಟೊಮೆಟೊ, ಪಪ್ಪಾಯಿ ಬೆಳೆಗೆ ಹಾನಿ ಉಂಟಾಗಿದೆ. ಬಂಗಾರಪೇಟೆ ಪಟ್ಟಣದ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಕೋಲಾರ ನಗರದ ಕೆಲವೆಡೆ ತುಂತುರು ಮಳೆಯಾಯಿತು. ತಾಲ್ಲೂಕಿನ ತೊಟ್ಲಿ, ಕಾಕಿನತ್ತ, ಚಿತ್ತನಗಳ್ಳಿ, ಹೊರಟಿ ಅಗ್ರಹಾರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಜೆಯವರೆಗೆ ಸುರಿಯುತ್ತಲೇ ಇತ್ತು.

ಹವಾಮಾನ ಇಲಾಖೆ ಪ್ರಕಾರ ಮುಂದಿನ ನಾಲ್ಕೈದು ದಿನ ಜಿಲ್ಲೆಯ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT