ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನದ ಮಹಾಪೂರ

Last Updated 27 ಫೆಬ್ರುವರಿ 2013, 5:34 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಸ್ವಾಭಿಮಾನದ ನೆಲೆಬೀಡು, ಶಿವಶರಣರ ನಾಡು ಶಿರಾಳಕೊಪ್ಪ 16,875 ಜನಸಂಖ್ಯೆ ಹೊಂದಿದ್ದು, ಪಟ್ಟಣ ಪಂಚಾಯ್ತಿ 15 ಸದಸ್ಯರ ಬಲ ಹೊಂದಿದೆ.

2007ರ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನ ಹಾಗೂ 4 ಸ್ಥಾನ ಕಾಂಗ್ರೆಸ್ ಪಡೆದಿದ್ದು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೆಜೆಪಿ ಸ್ಪರ್ಧೆ ಬಿಜೆಪಿಗೆ ತೀವ್ರ ಹಿನ್ನಡೆಯುಂಟು ಮಾಡಿದೆ.

ಈ ಬಾರಿ ಚುನಾವಣೆಯಲ್ಲಿ ಕೆಜೆಪಿ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಸ್ವತಂತ್ರವಾಗಿ ಸ್ಪರ್ಧಿಸ್ದ್ದಿದು, ಅತಂತ್ರವಾದ ಫಲಿತಾಂಶದಿಂದ ಪಟ್ಟಣ ಪಂಚಾಯ್ತಿ ಆಡಳಿತ ಕೂಡ ಸಮ್ಮಿಶ್ರವಾಗಿ ರಚನೆ ಆಗಬಹುದು ಎಂದು ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರ ಆದ್ದರಿಂದ ಪಟ್ಟಣ ಪಂಚಾಯ್ತಿಗೆ  5 ವರ್ಷಗಳಲ್ಲಿ ವಿಶೇಷ ಅನುದಾನದ ಮಹಾಪೂರವೇ ಲಭಿಸಿದೆ. ಪಟ್ಟಣದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಲಾಗಿದ್ದು, ಬಾಕ್ಸ್ ಚರಂಡಿಗಳ ನಿರ್ಮಾಣವಾಗಿದೆ.

ಆದರೆ, ನೆಹರೂ ಕಾಲೊನಿ, ಪಂಪ್‌ಹೌಸ್, ಬ್ಯಾಣದಕೆರಿ ಸೇರಿದಂತೆ ಹಲವಾರು ವಾರ್ಡ್‌ಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆ ಭಾಗದ ಜನರು ದೂರುತ್ತಿದ್ದಾರೆ. ಕುಡಿಯುವ ನೀರಿಗೆ ಅಂಜನಾಪುರ ಜಲಾಶಯದಿಂದ ಸಂಪರ್ಕ ಕಲ್ಪಿಸಲಾಗಿದ್ದು ಸಮಾಧಾನಕರ ಸಂಗತಿ ಆಗಿದೆ.

2007-08ರ ಈಚೆಗೆ ವಿವಿಧ ಯೋಜನೆಗಳ ಮೂಲಕ ಪಟ್ಟಣ ಪಂಚಾಯ್ತಿಗೆ ರೂ. 20.95 ಕೋಟಿ  ಬಂದಿದ್ದು, ರೂ. 17.37 ಕೋಟಿ ವಿವಿಧ ಯೋಜನೆಗಳಿಗೆ ಬಳಕೆ ಆಗಿದೆ.

2009-10ನೇ ಸಾಲಿನ ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಅಭಿವೃದ್ಧಿ ನಿಧಿಯಿಂದ ರಸ್ತೆ ನಿರ್ಮಾಣಕ್ಕೆ ರೂ. 1.2 ಕೋಟಿ ನೀಡಲಾಗಿದೆ. ಚರಂಡಿ ನಿರ್ಮಾಣಕ್ಕಾಗಿ ರೂ. 40 ಲಕ್ಷ ನಿಗದಿಪಡಿಸಿದ್ದು, ಸಂತೆ ಮಾರ್ಕೆಟ್‌ಅಭಿವೃದ್ಧಿಗೆ ರೂ. 40 ಲಕ್ಷ ಬಳಸಲಾಗಿದೆ. ವಿಶೇಷ ಅನುದಾನ ರೂ. 2 ಕೋಟಿ ಹಾಗೂ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಲ್ಲಿ ರೂ. 5 ಕೋಟಿ ಟೆಂಡರ್ ಹಂತದಲ್ಲಿ ಇದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ರೂ. 1.7 ಕೋಟಿ ಕಾಮಗಾರಿ ಬಾಕಿ ಇದೆ.

2009-10ನೇ ವಿಶೇಷ ಅನುದಾನ ರೂ. 1 ಕೋಟಿ, ಮುಖ್ಯಮಂತ್ರಿ ವಿಶೇಷ ನಿಧಿ ಬಸ್ ನಿಲ್ದಾಣಕ್ಕೆ ರೂ. 2 ಕೋಟಿ, ವಾಣಿಜ್ಯ ಸಂರ್ಕೀಣಗಳ ಕಟ್ಟಡ ನಿರ್ಮಾಣಕ್ಕೆ ರೂ. 2 ಕೋಟಿ ಬಳಕೆ ಆಗಿದೆ.

ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೆ ಏರಿಸಿ ಪುರಸಭೆ ಮಾಡವಂತೆ ಸರ್ಕಾರಕ್ಕೆ ಪ್ರಸ್ತಾವ  ಕಳುಹಿಸಲಾಗಿದ್ದು, ಶಿರಾಳಕೊಪ್ಪ ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂಬ ಕೂಗು ಸಹ ಸಾರ್ವಜನಿಕ  ವಲಯದಲ್ಲಿ ಕೇಳಿ ಬರುತ್ತಿದೆ.

ನೂತನ ಪಟ್ಟಣ ಪಂಚಾಯ್ತಿ ಕಟ್ಟಡ ನಿರ್ಮಾಣ, ಬಸ್ ನಿಲ್ದಾಣ ಸ್ಥಾಪನೆ, ಆಂಜನೇಯ ಸ್ವಾಮಿ ಹೊಂಡದ ಅಭಿವೃದ್ಧಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಲಗೇಜ್ ಆಟೋ ನಿಲ್ದಾಣ, ಫುಟ್‌ಪಾತ್ ಕ್ಯಾಂಟಿನ್‌ಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವಲ್ಲಿ  ಪಟ್ಟಣ ಪಂಚಾಯ್ತಿ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT