ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ರಾಯಬರೇಲಿಗೆ ರಾಹುಲ್ ಅಭ್ಯರ್ಥಿ?

Published 3 ಮೇ 2024, 1:52 IST
Last Updated 3 ಮೇ 2024, 1:52 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರದಿಂದಲೂ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಆದರೆ, ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಮೇಠಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ಗುರುವಾರ ತಡ‌ರಾತ್ರಿಯವರೆಗೂ ಉತ್ತರ ಸಿಕ್ಕಿರಲಿಲ್ಲ. ಈ ಕ್ಷೇತ್ರದಿಂದ ಗಾಂಧಿಯೇತರ ಕುಟುಂಬದ ವ್ಯಕ್ತಿ ಪಕ್ಷದಿಂದ ಸ್ಪರ್ಧಿಸಬಹುದು ಎಂದು ಹೇಳಿವೆ.

ಅಮೇಠಿ ಮತ್ತು ರಾಯಬರೇಲಿ ಕ್ಷೇತ್ರ‌ಗಳಿಗೆ 5ನೇ ಹಂತದಲ್ಲಿ ಮೇ 20ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮೇ 4 ಕಡೇ ದಿನವಾಗಿದೆ. ಗಡುವು ಹತ್ತಿರವಾಗುತ್ತಿದ್ದರೂ, ಕಾಂಗ್ರೆಸ್‌ ತಡರಾತ್ರಿಯವರೆಗೆ ಈ ಕ್ಷೇತ್ರಗಳಿಗೆ ಉಮೇದುವಾರರನ್ನು ಪ್ರಕಟಿಸಲಿಲ್ಲ.
ಪ್ರಿಯಾಂಕಾ ಗಾಂಧಿ ಅವರ ಆಪ‍್ತರು ಅವರ ಶುಕ್ರವಾರದ ಪ್ರವಾಸ ಕಾರ್ಯಕ್ರಮಗಳನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಮಧ್ಯಾಹ್ನ 3 ಗಂಟೆಗೆ ಫತೇಹ್‌ಪುರ್‌ ಸಿಕ್ರಿಯಲ್ಲಿ ಅವರು ರೋಡ್‌ ಶೋ ನಡೆಸುವರು. ಇದು, ಅವರು ಚುನಾವಣೆಗೆ ಸ್ಪರ್ಧಿಸದಿರುವ ಮುನ್ಸೂಚನೆ ಎಂದು ಮೂಲಗಳು ಹೇಳಿವೆ.

ತಾಯಿ ಸೋನಿಯಾ ಗಾಂಧಿ ಅವರು ತೆರವುಗೊಳಿಸಿರುವ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಒತ್ತಡ ಪ್ರಿಯಾಂಕಾ ಅವರ ಮೇಲಿತ್ತು. ಆದರೆ, ಇದಕ್ಕೆ ಅವರು ಮಣಿದಿಲ್ಲ ಎಂದು ಹೇಳಲಾಗಿದೆ.

ಅಮೇಠಿಯಿಂದ ರಾಹುಲ್ ಗಾಂಧಿ ಮತ್ತು ರಾಯಬರೇಲಿಯಿಂದ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಗೆ ಸ್ಪರ್ಧಿಸಬಹುದು ಎಂಬ ವದಂತಿ ಕಳೆದ ಎರಡು ದಿನಗಳಿಂದ ದಟ್ಟವಾಗಿತ್ತು.

ಕಾಂಗ್ರೆಸ್‌ ಪಕ್ಷವು ಈ ಎರಡೂ ಕ್ಷೇತ್ರಗಳಿಗೆ ಗುರುವಾರ ತಡರಾತ್ರಿಯವರೆಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸದೇ ಕುತೂಹಲವನ್ನು ಕಾಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT