ಇತ್ತೀಚೆಗೆ ಬಿಳಿ ಬಣ್ಣದ ದಿಂಬು ಹಿಡಿದುಕೊಂಡು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಜಾಹ್ನವಿ ಕಪೂರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು. ಈ ಹಿಂದೆ ಬಾಲಿವುಡ್ ನಟ ಅಮೀರ್ ಖಾನ್ ಕೂಡ ವಿಮಾನ ನಿಲ್ದಾಣಕ್ಕೆ ದಿಂಬು ಹಿಡಿದುಕೊಂಡು ಬಂದಿದ್ದರು. ದಿಂಬಿನ ಕಾರಣಕ್ಕೆ ಅಮೀರ್ ಖಾನ್ ಟ್ರೋಲ್ ಆಗಿದ್ದರು.
ಸದ್ಯ ಜಾಹ್ನವಿ ಕಪೂರ್ ಜೂನಿಯರ್ ಎನ್‌ಟಿಆರ್ ಅವರ ‘ದೇವರಾ’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ರಾಜ್‌ಕುಮಾರ್ ರಾವ್ ಅವರೊಂದಿಗೆ ‘ಮಿಸ್ಟರ್ ಆ್ಯಂಡ್ ಮಿಸ್ಸಸ್’ ಮಹಿ ಚಿತ್ರದಲ್ಲೂ ನಟಿಸಲಿದ್ದಾರೆ. ಅಲ್ಲದೇ ಹೊಸ ಚಿತ್ರ ‘ಉಲಾಜ್’ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.