ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಕತೆ ಹೇಳುವ ಕೊಂಕಣಿಚಿತ್ರ ‘ನಿರ್ಮಿಲ್ಲೆಂ ನಿರ್ಮೋಣೆಂ’

Last Updated 18 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಪ್ರೇಸ್ಟನ್ ಎಂಟರ್ ಪ್ರೈಸಸ್ ಬ್ಯಾನರಿನಡಿ ಮೆಲ್ವಿನ್‌ ಎಲ್ಫೇಲ್‌ ಮತ್ತು ನೋರ್ಬಟ್ ಜೋನ್ ಡಿಸೋಜ ನಿರ್ದೇಶನದ ಬಹುನಿರೀಕ್ಷಿತ ಕೊಂಕಣಿ ಚಿತ್ರ ‘ನಿರ್ಮಿಲ್ಲೆಂ ನಿರ್ಮೋಣೆಂ’ ಜೂನ್ ಮೊದಲಲ್ಲೇ ತೆರೆಗೆ ಬರಲು ತಯಾರಾಗಿ ನಿಂತಿದೆ. ಚಿತ್ರದ ಕುರಿತಾಗಿ ಮಾತನಾಡಿದ ಸಹ ನಿರ್ದೇಶಕ ಮತ್ತು ಚಿತ್ರದಲ್ಲಿ ವಿಲನ್‌ ಆಗಿ ಕಾಣಿಸಿಕೊಂಡ ನೋರ್ಬಟ್ ಜೋನ್ ಡಿಸೋಜ, ‘ಚಿತ್ರಕತೆ ರಚಿಸಿದ್ದೇನೆ. ಈ ಸಿನೆಮಾವು ವಿವಿಧ ತಿರುವುಗಳನ್ನು ಒಳಗೊಂಡಿದೆ. ಚಿತ್ರದಲ್ಲಿ ವಿಲನ್‌ಗೆ ಪ್ರಮುಖ ಪಾತ್ರವಿದೆ. ಅತ್ಯಂತ ಅಚ್ಚುಕಟ್ಟಾಗಿ ಮಾಡಿದ ಸಿನಿಮಾ ಇದಾಗಿದ್ದು ಚಿತ್ರ‍ಪ್ರೇಮಿಗಳು ಆಶೀರ್ವದಿಸುವ ವಿಶ್ವಾಸವಿದೆ’ ಎನ್ನುತ್ತಾರೆ.

ಮಂಗಳೂರು, ಬಜ್ಪೆ, ಬೆಂಗಳೂರು, ಕಾರ್ಕಳ ಕುಂದಾಪುರದ ತ್ರಾಸಿಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ದೇವರು ಏನು ನಮ್ಮ ಹಣೆಬರಹದಲ್ಲಿ ಬರೆದಿದ್ದಾರೋ ಆದೇ ಆಗುತ್ತದೆ ಎನ್ನುವಂತಿರುವ ಸಿನಿಮಾ ಇದು. ಅನಾಥಾಶ್ರಮದಲ್ಲಿ ಬೆಳೆಯುವ ಹುಡುಗನನ್ನು ಧಾರ್ಮಿಕ ಗುರುವಾಗಿ ಸ್ವೀಕರಿಸುವ ಮತ್ತು ಅದರಲ್ಲೇ ಮುಂದುವರಿಸಬೇಕೆನ್ನುವ ಆಶಯ ಹಿರಿಯರದ್ದು. ಆದರೆ ಹುಡುಗ ಯೌವನಕ್ಕೆ ಬರುವ ಸಂದರ್ಭದಲ್ಲಿ ಸಹಜವಾಗಿ ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳುತ್ತಾನೆ. ಅದು ವನ್‌ ವೇ ಪ್ರೀತಿಯೂ ಆಗಿರುತ್ತದೆ. ಇಲ್ಲಿಂದ ಆರಂಭವಾಗುವ ಕತೆ ವಿವಿಧ ರೋಚಕ ತಿರುವುಗಳನ್ನು ಪಡೆಯುತ್ತಾ ದೇವರ ಇಚ್ಛೆಯಂತೆಯೇ ನಿರಂತರ ಸಾಗುತ್ತದೆ ಎನ್ನೋಣ. ಅತ್ತ ಪ್ರೀತಿಸಿದ ಹುಡುಗಿಗೆ ಮದುವೆಯಾಗಿಬಿಡುತ್ತದೆ. ಇದರಿಂದ ಮತ್ತಷ್ಟು ಬೇಸರಗೊಳ್ಳುವ ಹುಡುಗ ದುಶ್ಚಟಗಳಿಗೂ ಬಲಿಬೀಳುತ್ತಾನೆ. ಹಾಗಂತ ಕತೆ ಇಲ್ಲಿಗೇ ಮುಗಿಯುವುದಿಲ್ಲ. ಹುಡುಗಿ ಮತ್ತೆ ಆ ಹುಡುಗನಿಗೆ ಸಿಗುತ್ತಾಳಾ ? ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ ನೋರ್ಬಟ್ ಜೋನ್ ಡಿಸೋಜ.

ಸುಮಾರು ₹ 25 ಲಕ್ಷ ವೆಚ್ಚದಲ್ಲಿ ತಯಾರಾದ ’ನಿರ್ಮಿಲ್ಲೆಂ ನಿರ್ಮೋಣೆಂ’ ಸಿನಿಮಾ ಕೊಂಕಣಿ ಭಾಷೆಯಲ್ಲಿದ್ದರೂ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕನ್ನಡದಲ್ಲೂ ಹೊರತರುವ ಯೋಚನೆ ಇದೆ ಎಂದು ನೋರ್ಬಟ್ ಹೇಳುತ್ತಾರೆ. ಸಿನಿಮಾವು ಮಂಗಳೂರು, ಉಡುಪಿ, ಮೂಡುಬಿದಿರೆ, ಗೋವಾ ಅಂತೆಯೇ ಗಲ್ಫ್ ರಾಷ್ಟ್ರಗಳಲ್ಲಿ ತೆರೆಕಾಣಲು ತಯಾರಾಗಿದೆ.

ಚಿತ್ರದಲ್ಲಿ ನಾಯಕ ನಟನಾಗಿ ಪ್ರತಾಪ್‌ ಮಿನೇಜಸ್‌ ಹಾಗೂ ನಾಯಕ ನಟಿಯಾಗಿ ಸೀಮಾ ಬುತೆಲ್ಲೋ ನಟಿಸಿದ್ದಾರೆ.

ಹೆರಾ ಪಿಂಟೋ, ಗೋಡ್ವಿನ್, ಮಿನಾಕ್ಷಿ ಮಾರ್ಟಿನ್, ಹಂಬಾರ್ಟ್, ನೋರ್ಬಟ್, ವಿನ್ನಿ ಪೆರ್ನಾಂಡೀಸ್, ಚಾಲ್ಸ್ ಗೋಮ್ಸ್, ರೋನಿ ಪೆರ್ನಾಂಡೀಸ್ ಅಭಿನಯಿಸಿದ್ದಾರೆ. ಹುತ್ತದ ಸುತ್ತ ಎಂಬ ಕನ್ನಡ ಚಿತ್ರ ನಿರ್ದೇಶಿಸಿದ ಮೆಲ್ವಿನ್‌ ಎಲ್ಪೇಲ್ ಅವರು ಆ್ಯ‍ಕ್ಷನ್‌ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಮಂಜುನಾಥ್ ಛಾಯಾಗ್ರಹಣ ಮಾಡಿದ್ದಾರೆ. ದಿವಂಗತ ವಿಲ್ಫಿ ರೆಬಿಂಬಸ್‌ ಅವರ ಸಂಗೀತ ಬಪ್ಪನ್- ಜೋಸ್ವಿನ್ ಸಂಗೀತ ಬಳಸಿಕೊಂಡು ನಿರ್ಮಿಸಲಾಗಿದ್ದು, ಚಿತ್ರಪ್ರೇಮಿಗಳಿಗೆ ಭರ್ಜರಿ ಸಂಗೀತ ರಸದೌತಣ ಉಣಬಡಿಸಲಿದೆ. ಹೆನ್ರಿ ಡಿ ಸಿಲ್ವಾ ಸುರತ್ಕಲ್ ನಿರ್ಮಾಪಕರಾಗಿ ಪ್ರತಿಭಾವಂತ ಕಲಾವಿದರನ್ನು ತೆರೆಯ ಮೇಲೆ ಪರಿಚಯಿಸಲು ತಯಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT