ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್ಟೆಗಳ ಚಿತ್ರಲೋಕ!

Last Updated 5 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಆ ಮನೆಯಲ್ಲಿ ಹೇರಳವಾಗಿ ಚಿಟ್ಟೆಗಳಿವೆ. ವಿಶ್ವದ ನಾನಾ ಭಾಗಗಳಲ್ಲಿ ಕಂಡುಬರುವ ಬಣ್ಣ ಬಣ್ಣದ ಚಿಟ್ಟೆಗಳೂ ಇವೆ. ಆದರೆ, ಅವು ಹಾರಾಡುವುದಿಲ್ಲ, ರೆಕ್ಕೆ ಬಿಚ್ಚಿ ನರ್ತಿಸುವುದೂ ಇಲ್ಲ. ಎಲ್ಲ ಚಿಟ್ಟೆಗಳು ರೆಕ್ಕೆ ಬಿಚ್ಚಿದ ಹಾಗೆ ಪುಸ್ತಕದ ಹಾಳೆಗಳಿಗೆ ಅಂಟಿಕೊಂಡಿವೆ !

ಇದು ಚಿಟ್ಟೆ ಚಿತ್ರಗಳ ಸಂಗ್ರಹ ಲೋಕ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯ ನಿವೃತ್ತ ಶಿಕ್ಷಕ ಪದ್ಮಾಕರ ಪಾಯ್ದೆ ಮೇಷ್ಟು ಹವ್ಯಾಸಕ್ಕಾಗಿ ಜಗತ್ತಿನಲ್ಲಿರುವ ವೈವಿಧ್ಯಮಯ ಚಿಟ್ಟೆಗಳ ಚಿತ್ರಗಳನ್ನು ಸಂಗ್ರಹಿಸಿ, ಪುಸ್ತಕದ ಹಾಳೆಯೊಂದಕ್ಕೆ ಅಂಟಿಸಿದ್ದಾರೆ. ಪ್ರತಿ ಚಿತ್ರಕ್ಕೂ ಚಿಟ್ಟೆಯ ಹೆಸರು ಮತ್ತು ಅದು ಯಾವ ಪ್ರದೇಶದ್ದು ಎಂಬ ಶೀರ್ಷಿಕೆಯೂ ಅದರಲ್ಲಿದೆ.

ಮೂವತ್ತೈದು ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ನಂತರ ಚಿಟ್ಟೆ ಚಿತ್ರಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಭಾರತ, ಗುಬಾ, ಮಂಗೋಲಿಯಾ, ಲೀಬಿಯಾ, ದುಬೈ, ಮಲೇಷಿಯಾ ಹೀಗೆ ವಿಶ್ವದ 145 ರಾಷ್ಟ್ರಗಳ ಚಿಟ್ಟೆಗಳ ಚಿತ್ರ ಪ್ರಪಂಚವೇ ಇವರ ಬಳಿ ಇದೆ. ಬಹುತೇಕ ಚಿತ್ರಗಳನ್ನು ಹಣ ಕೊಟ್ಟು ಖರೀದಿಸಿದ್ದಾರೆ. ಕೆಲವಷ್ಟು ಚಿತ್ರಗಳನ್ನು ಗೆಳೆಯರಿಂದ ‘ವಿನಿಮಯ’ದ ಮೂಲಕವೂ ಸಂಗ್ರಹಿಸಿದ್ದಾರೆ.

ಒಮ್ಮೆ ಔಷಧಿ ಕಂಪನಿಯೊಂದು ತನ್ನ ಜಾಹೀರಾತಿನಲ್ಲಿ ಚಿಟ್ಟೆಗಳ ಸಂಕ್ಷಿಪ್ತ ಮಾಹಿತಿಗಳಿದ್ದ ಕ್ಯಾಲೆಂಡರ್ ಹೊರತಂದಿತ್ತು. ಅದನ್ನೆಲ್ಲ ಸಂಗ್ರಹಿಸಿ, ಒಪ್ಪ ಓರಣ ಮಾಡಿ ಜೋಡಿಸಿದ್ದಾರೆ. ಮೇಷ್ಟ್ರು ಶಿಸ್ತಿನಿಂದ ಚಿತ್ರಗಳನ್ನು ಸಂಗ್ರಹಿಸಿ ಜೋಡಿಸುವ ಪರಿಯೇ ಅಚ್ಚರಿ ಮೂಡಿಸುತ್ತದೆ.

‘ದೇಶ ವಿದೇಶಗಳನ್ನು ಸುತ್ತಿ ಚಿಟ್ಟೆಗಳನ್ನು ನೋಡುವುದು ಅಸಾಧ್ಯದ ಮಾತು. ನಾನು ಸಂಗ್ರಹಿಸಿರುವ ಈ ಚಿತ್ರಗಳ ಮೂಲಕ ವೈವಿಧ್ಯಮಯ ಚಿಟ್ಟೆಗಳನ್ನು ನೋಡಲು ಸಾಧ್ಯವಿದೆ’ ಎನ್ನುತ್ತಾರೆ ಪಾಯ್ದೆ ಮೇಷ್ಟ್ರು. ಈ ಚಿಟ್ಟೆ ಚಿತ್ರಗಳ ಸಂಗ್ರಹ ಶಾಲಾ ಮಕ್ಕಳಿಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಆಸಕ್ತರು ಪಾಯ್ದೆ ಮೇಷ್ಟ್ರನ್ನು 08419-254590 ದೂರವಾಣಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT