ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾ... ವ್ಯಾಕ್‌ ವಾಂತಿ ತಡೆಯಿರಿ

Last Updated 3 ನವೆಂಬರ್ 2015, 19:51 IST
ಅಕ್ಷರ ಗಾತ್ರ

ನಮಗೆ ಅನೇಕ ಕಾರಣಗಳಿಗೆ ವಾಂತಿ ಆಗಬಹುದು. ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದೆ ಅನೇಕ ಸಂದರ್ಭಗಳಲ್ಲಿ ವಾಂತಿ ಬರುತ್ತದೆ. ಇದರ ಜೊತೆ ಹಲವು ಬಾರಿ ಬೇಧಿಯೂ ಶುರುವಾಗುತ್ತದೆ. ಪಿತ್ತ ಹೆಚ್ಚಾದರೂ ವಾಂತಿ ಬರುತ್ತದೆ. ಬಸ್ಸಿನಲ್ಲಿ ಹೋಗುವಾಗಲೂ ಕೆಲವರಿಗೆ ವಾಂತಿಯಾಗುವುದು. ಇನ್ನು, ಗರ್ಭಿಣಿಯಾಗಿದ್ದಾಗ ಹಲವರಿಗೆ ವಾಂತಿ ಬರುವುದು ಮಾಮೂಲು. ಅಂಥ ಸಂದರ್ಭಗಳಲ್ಲಿ ವೈದ್ಯರ ಬಳಿ ಓಡದೇ ಪ್ರಥಮ ಚಿಕಿತ್ಸೆ ರೂಪದಲ್ಲಿ ಈ ಮನೆಮದ್ದನ್ನು ಮಾಡಿಕೊಳ್ಳಬಹುದು. ವಾಂತಿ ವಿಪರೀತವಾಗಿದ್ದಲ್ಲಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಅಜೀರ್ಣವಾಗಿದ್ದರೆ
* ಏಲಕ್ಕಿ ಬೀಜಗಳನ್ನು ಬಾಯಲ್ಲಿಟ್ಟು ಚೀಪುತ್ತಿದ್ದರೆ ವಾಕರಿಕೆ ವಾಂತಿ ಕಮ್ಮಿ ಆಗುತ್ತದೆ . ಗರ್ಬಿಣಿ ಹೆಂಗಸರ ವಾನ್ತಿಯಲ್ಲೂ ಇದು ಉಪಯೋಗ , ವಾಯಲ್ಲಿರುವ ದುರ್ಗಂದವನ್ನು ದೂರವಾಗಿಸುತ್ತದೆ .

* ಮನೆಯಲ್ಲೇ ಬೆಳೆಯುವ ಅಥವಾ ಹೊರಗಿನಿಂದ ತಂದು ಅಡುಗೆಗೆ ಬಳಸುವ ಪುದೀನಾ ಎಲೆಗಳನ್ನು ಜಗಿಯುವುದರಿಂದ, ವಾಕರಿಕೆಯನ್ನು ತಡೆಯಬಹುದು. ಇದರೊಂದಿಗೆ ಮುಂಗೈನಿಂದ  4-5 ಪುದೀನಾ ಎಲೆಗಳನ್ನು ಕಿವುಚಿ ವಾಸನೆಯನ್ನು ಆಘ್ರಾಣಿಸಿದರೆ ವಾಕರಿಕೆಯನ್ನು ತಡೆಯಬಹದು.

* ಕೆಲವರಿಗೆ ವಾಕರಿಕೆ ಆರಂಭವಾಗುವ ಮುನ್ನವೇ ಹೊಟ್ಟೆ ಕಿವುಚಿದಂತೆ ಆಗುವುದು. ಆ ಸಮಯದಲ್ಲಿ ವಾಕರಿಕೆ  ಮಾಡಿದರೆ ಸಮಾಧಾನ ಎನಿಸಿದರೂ ವಾಕರಿಕೆ ಮಾಡಲೂ ಕಷ್ಟವಾಗುತ್ತದೆ. ಆ ಸಮಯದಲ್ಲಿ ಚಿಕ್ಕ ಗಾತ್ರದ  ಶು೦ಠಿಯನ್ನು ಜಗಿದರೆ ಆ ಭಾವನೆಯಿ೦ದ  ಹೊರ ಬರಬಹುದು. ಅಲ್ಲದೆ ಟೀ ತಯಾರಿಸುವಾಗ ಶುಂಠಿಯನ್ನು ಹಾಕಿ ಕುದಿಸಿ ಬಳಸಲೂಬಹುದು. ಶುಂಠಿಯ ಬೇರು ಹಾಗೂ ನಾರು ಜೀರ್ಣಕಾರಕ ಕಿಣ್ವಗಳನ್ನು ಉತ್ಪಾದಿಸುತ್ತವೆ. ಅಷ್ಟೇ ಅಲ್ಲ, ಈ ಕಿಣ್ವಗಳು ಹೊಟ್ಟೆಯಲ್ಲಿ ಉತ್ಪಾದನೆಯಾದ ಆಮ್ಲವನ್ನು ಸ್ಥಿರಗೊಳಿಸುತ್ತದೆ.

* ಕಾರ್ಬನ್ ಡಯಾಕ್ಸೈಡ್ ರಹಿತ ಪಾನೀಯಗಳು ಸಕ್ಕರೆ ಅ೦ಶವನ್ನು ಹೊ೦ದಿರುವುದರಿ೦ದ ಹೊಟ್ಟೆಯನ್ನು ತಣ್ಣಗಿರಿಸುತ್ತದೆ. ಇದರಲ್ಲಿರುವ ಸಕ್ಕರೆ ಅಂಶ ವಾಕರಿಕೆಗೆ ಕಾರಣವಾಗುವ ಆ್ಯಸಿಡಿಟಿಯನ್ನು ಕಡಿಮೆ ಮಾಡುತ್ತದೆ. ಒ೦ದು ನಿಂಬೆ ಹಣ್ಣಿನ ತುಂಡನ್ನು ತೆಗೆದುಕೊಂಡು ವಾಸನೆಯನ್ನು ಆಘ್ರಾಣಿಸಿದರೆ ವಾಕರಿಕೆ ಕಡಿಮೆಯಾಗುತ್ತದೆ.

ವಾಂತಿ-ಬೇಧಿಯಿದ್ದರೆ
* ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.

* ಭೇದಿಯಾಗುತ್ತಿರುವಾಗ ಖರ್ಜೂರ ಸೇವಿಸಿದರೆ ನಿವಾರಣೆಯಾಗುವುದು.

* ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ.

* ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು.

* ವಾಂತಿಭೇದಿ ಆದಾಗ ತುಳಸಿಯ ಬೀಜ ಬಳಸಬೇಕು.

* ರಕ್ತಭೇದಿ ಬಾಧೆಗೆ 10 ಗ್ರಾಂ ಗುಲಾಬಿ ಹೂಗಳನ್ನು ಎರಡು ಗಂಟೆಕಾಲ ನೀರಲ್ಲಿ ನೆನೆಯಿಟ್ಟು, ನುಣ್ಣಗೆ ಅರೆದು, ಅದಕ್ಕೆ ಕಲ್ಲುಸಕ್ಕರೆಪುಡಿ ಬೆರಸಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು. ನೆಗಡಿಗೆ ಗುಲಾಬಿಚಹ ಕುಡಿಯಬೇಕು.

* ಸ್ವಲ್ಪ ಹುಣಸೆ ಹಣ್ಣಿಗೆ ಅಷ್ಟೆ ಪ್ರಮಾಣದ ಬೆಲ್ಲ, 1 ಟೀ ಚಮಚ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕುಟ್ಟಿ ಮುದ್ದೆ ಮಾಡಿ, ಬಾಯಲ್ಲಿರಿಸಿ ಚಪ್ಪರಿಸುತ್ತಿದ್ದರೆ ಹೊಟ್ಟೆ ತೊಲಸು, ತಲೆಸುತ್ತು, ವಾಂತಿ, ವಾಕರಿಕೆಯಂತಹ ಪಿತ್ತ ವಿಕಾರಗಳು ಹೋಗುತ್ತವೆ.

* ಸೀಬೆ ಗಿಡದ ಎಲೆಗಳ ಕಷಾಯ ಉದರದ ತೊಂದರೆಗಳನ್ನು ನಿವಾರಿಸುತ್ತದೆ. ಅಜೀರ್ಣ, ವಾಂತಿ, ಬೇಧಿ ಮುಂತಾದ ತೊಂದರೆಗಳು ನಿವಾರಣೆಯಾಗುತ್ತವೆ.

* ಆಹಾರ ಸೇವಿಸಿದ ನಂತರ ಹೊಟ್ಟೆ ಉರಿಯುವುದು ಮತ್ತು ಹಳದಿಯಾಗಿ ವಾಂತಿ ಆಗುತ್ತಿದ್ದರೆ, ಬೆಳಗ್ಗೆ ಬರಿ (ಖಾಲಿ)

* ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದಿಷ್ಟು ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು.

ಪಿತ್ತದ ವಾಂತಿ
* 1ಚಮಚ ಪುದೀನ ರಸಕ್ಕೆ 1/2 ಚಮಚ ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಪಿತ್ತ ಹೆಚ್ಚಾದಾಗ ಕಾಡುವ ವಾಂತಿ, ತಲೆನೋವು ಕಡಿಮೆಯಾಗುತ್ತದೆ.

ಬಸ್ಸಿನಲ್ಲಿ ಹೋಗುವಾಗ
* ಬಸ್ಸಿನಲ್ಲಿ ಓಡಾಡುವಾಗ ವಾಂತಿ ಬರುವ ವ್ಯಕ್ತಿಗಳು ಕಿತ್ತಳೆ ಹಣ್ಣನ್ನು ಮೂಸಿ ನೋಡುವುದರಿಂದ ವಾಂತಿಯಾಗುವುದು ತಪ್ಪುತ್ತದೆ.

ಗರ್ಭಿಣಿಯಾಗಿದ್ದರೆ
* ಸುಟ್ಟ ನಿಂಬೆ: ನಿಂಬೆ ಹಣ್ಣಿನ ತುಂಡನ್ನು ಕಡಿಮೆ ಉರಿಯಲ್ಲಿ ಸುಟ್ಟು ನಂತರ ಅದನ್ನು ಬಿಸಿಲಿನಲ್ಲಿಟ್ಟು ಒಣಗಿಸಿ ಅದನ್ನು ಪುಡಿ ಮಾಡಿ, ಆ ಪುಡಿಯನ್ನು ವಾಂತಿ ಬರುತ್ತಿದೆ ಎಂದು ಅನಿಸುವಾಗ ಕುಡಿಯಿರಿ. ಈ ರೀತಿ ಮಾಡಿದರೆ ಯಾವುದೇ ಅಡ್ಡ ಪರಿಣಾಮವಿಲ್ಲ, ವಾಂತಿ ಕೂಡ ಬರುವುದಿಲ್ಲ.

* ಶುಂಠಿ: ವಾಂತಿ ಬರುವ ರೀತಿ ಅನಿಸದಿರಲು ಚಿಕ್ಕ ತುಂಡು ಶುಂಠಿ ತಿನ್ನಿರಿ. ಒಮ್ಮೆ ತಿಂದರೆ ಆ ದಿನಾವಿಡೀ ವಾಂತಿ ಬರದಂತೆ ತಡೆಯುತ್ತದೆ.

* ನಿಂಬೆ ಪಾನಕ: ನಿಂಬೆ ಪಾನಕ ಕುಡಿಯುವುದರಿಂದ ವಾಂತಿ ಬರದಂತೆ ತಡೆಯಬಹುದು, ಸುಸ್ತೂ ಕಡಿಮೆಯಾಗುತ್ತದೆ.

* ಏಲಕ್ಕಿ: ಏಲಕ್ಕಿಯನ್ನು ಜಗಿದರೆ ವಾಂತಿ ಮಾಡುವುದು ಕಡಿಮೆಯಾಗುವುದು. ಇದನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯಿರಿ.

* ಹರ್ಬಲ್ ಟೀ: ಶುಂಠಿಯಿಂದ ತಯಾರಿಸಿದ ಹರ್ಬಲ್ ಟೀ ಕುಡಿಯುವುದರಿಂದ ವಾಂತಿ ಬರುವುದನ್ನು ಕಡಿಮೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT